ನವ ವರ್ಷದಲ್ಲಿ ಬೀಸಲಿದೆ ಫೋರ್ಡ್ ಎಂಡೀವರ್ ಹವಾ

Written By:

ಎಲ್ಲರೂ ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಈ ಸುಸಂದರ್ಭದಲ್ಲಿ ಅಮೆರಿಕದ ಪ್ರಖ್ಯಾತ ಕಾರು ಸಂಸ್ಥೆಯಾಗಿರುವ ಫೋರ್ಡ್ ಹೊಸ ಕೊಡುಗೆಯೊಂದನ್ನು ನೀಡಲು ಸಜ್ಜಾಗುತ್ತಿದೆ. ಅದುವೇ ಆಲ್ ನ್ಯೂ ಫೋರ್ಡ್ ಎಂಡೀವರ್.

ವಾಹನ ಪ್ರೇಮಿಗಳಿಗೆ ಅದ್ಭುತ ಚಾಲನಾ ಅನುಭವ ನೀಡುವ ಗುರಿ ಹೊಂದಿರುವ ಅತಿ ನೂತನ ಫೋರ್ಡ್ ಎಂಡೀವರ್ ಅತ್ಯಾಕರ್ಷಕ ಸೌಲಭ್ಯಗಳಿಂದ ಕೂಡಿರಲಿದೆ. ಇದು ಮುಂದಿನ ದಿನಗಳಲ್ಲಿ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನಗಳ ವಿಭಾಗದಲ್ಲಿ ಹೊಸ ಹವಾ ಎಬ್ಬಿಸಲು ಸಾಧ್ಯವಾಗಲಿದೆ.

To Follow DriveSpark On Facebook, Click The Like Button
 ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

2016 ಫೋರ್ಡ್ ಎಂಡೀವರ್ 2.2 ಲೀಟರ್ ಮತ್ತು 3.2 ಲೀಟರ್ ಟಿಡಿಸಿಐ ಟರ್ಬೊ ಡೀಸೆಲ್ ಎಂಜಿನ್ ಗಳಿಂದ ನಿಯಂತ್ರಿಸಲ್ಪಡಲಿದೆ. ಇದರ 2.2 ಲೀಟರ್ ಡೀಸೆಲ್ ಎಂಜಿನ್ 385 ಎನ್‌ಎಂ ತಿರುಗುಬಲದಲ್ಲಿ 158 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅದೇ ರೀತಿ 3.2 ಲೀಟರ್ ಎಂಜಿನ್ 470 ಎನ್‌ಎಂ ತಿರುಗುಬಲದಲ್ಲಿ 197 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

2016 ಫೋರ್ಡ್ ಎಂಡೀವರ್

ಏಳು ಸೀಟುಗಳ ಫೋರ್ಡ್ ಎಂಡೀವರ್ 225 ಎಂಎಂ ಗ್ರೌಂಡ್ ಕ್ಲಿಯರನ್ಸ್ ಹಾಗೂ 800 ಎಂಎಂ ನೀರಿನಲ್ಲಿ ಹಾದು ಹೋಗುವಷ್ಟು ಶಕ್ತಿಯನ್ನು ಪಡೆದುಕೊಂಡಿದೆ.

2016 ಫೋರ್ಡ್ ಎಂಡೀವರ್

ಎಲೆಕ್ಟ್ರಿಕ್ ಲಾಕಿಂಗ್ ರಿಯರ್ ಡಿಫೆರನ್ಸಿಯಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಲಾಂಚ್ ಅಸಿಸ್ಟ್ ಇತರ ಪ್ರಮುಖ ಯೋಗ್ಯತೆಗಳಾಗಿವೆ.

2016 ಫೋರ್ಡ್ ಎಂಡೀವರ್

ಆರಾಮದಾಯಕ ಚಾಲನೆ, ಎಲ್ಇಡಿ ಲೈಟಿಂಗ್, ಪವರ್ ಫೋಲ್ಡ್ ಸೀಟು, ಪವರ್ ಟೈಲ್ ಗೇಟ್, ಏಳು ಏರ್ ಬ್ಯಾಗ್, ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್, ಸನ್ ರೂಫ್, ಮಲ್ಟಿ ಇಂಟೆಲಿಜೆಟ್ ಇನ್ಟ್ರುಮೆಂಟ್ ಕ್ಲಸ್ಟರ್ ನೂತನ ಫೋರ್ಡ್ ಕಾರಿ ಗುಣಮಟ್ಟತೆಗೆ ಸಾಕ್ಷಿಯಾಗಲಿದೆ.

2016 ಫೋರ್ಡ್ ಎಂಡೀವರ್

ಇದರ ಮುಂದುವರಿದ INTUITIVE CONTROL ತಂತ್ರಜ್ಞಾನ, ಸೆಮಿ ಆಟೋ ಪ್ಯಾರಲಲ್ ಪಾರ್ಕ್ ಅಸಿಸ್ಟ್, ಫೋರ್ಡ್ ಜನಪ್ರಿಯ ಸಿಂಕ್ 2, ತಾಪಮಾನ ನಿಯಂತ್ರಣ, ರಿಯರ್ ವ್ಯೂ ಕ್ಯಾಮೆರಾ ಮುಂತಾದ ತಂತ್ರಗಾರಿಕೆಗಳನ್ನು ಪಡೆದುಕೊಂಡಿದೆ.

2.2 ಲೀಟರ್ 4x2 ಮ್ಯಾನುವಲ್ ಟ್ರೆಂಡ್

2.2 ಲೀಟರ್ 4x2 ಮ್ಯಾನುವಲ್ ಟ್ರೆಂಡ್

 • ಶಕ್ತಿಶಾಲಿ 2.2 ಲೀಟರ್ ಎಂಜಿನ್ ಜೊತೆ 160 ಅಶ್ವಶಕ್ತಿ,
 • 2 ಏರ್ ಬ್ಯಾಗ್ (ಚಾಲಕ ಮತ್ತು ಪ್ರಯಾಣಿಕ ಬದಿ),
 • ಲೆಥರ್ ಹೋದಿಕೆ, ಲೆಥರ್ ಹೋದಿಕೆಯ ಗೇರ್ ನಾಬ್ ಮತ್ತು ಸ್ಟೀರಿಂಗ್ ವೀಲ್,
 • ಸಿಂಕ್ (ವಾಯ್ಸ್ ಕಂಟ್ರೋಲ್ ಜೊತೆಗೆ)
2.2 ಲೀಟರ್ 4x2 ಆಟೋಮ್ಯಾಟ್ರಿಕ್ ಟ್ರೆಂಡ್

2.2 ಲೀಟರ್ 4x2 ಆಟೋಮ್ಯಾಟ್ರಿಕ್ ಟ್ರೆಂಡ್

 • ಶಕ್ತಿಶಾಲಿ 2.2 ಲೀಟರ್ ಎಂಜಿನ್ ಜೊತೆ 160 ಅಶ್ವಶಕ್ತಿ,
 • 2 ಏರ್ ಬ್ಯಾಗ್ (ಚಾಲಕ ಮತ್ತು ಪ್ರಯಾಣಿಕ ಬದಿ),
 • ಲೆಥರ್ ಹೋದಿಕೆ, ಲೆಥರ್ ಹೋದಿಕೆಯ ಗೇರ್ ನಾಬ್ ಮತ್ತು ಸ್ಟೀರಿಂಗ್ ವೀಲ್,
 • ಸಿಂಕ್ (ವಾಯ್ಸ್ ಕಂಟ್ರೋಲ್ ಜೊತೆಗೆ)
2.2 ಲೀಟರ್ 4x4 ಮ್ಯಾನುವಲ್ ಟ್ರೆಂಡ್

2.2 ಲೀಟರ್ 4x4 ಮ್ಯಾನುವಲ್ ಟ್ರೆಂಡ್

 • ಶಕ್ತಿಶಾಲಿ 2.2 ಲೀಟರ್ ಎಂಜಿನ್ ಜೊತೆ 160 ಅಶ್ವಶಕ್ತಿ,
 • 2 ಏರ್ ಬ್ಯಾಗ್ (ಚಾಲಕ ಮತ್ತು ಪ್ರಯಾಣಿಕ ಬದಿ),
 • ಟರೈನ್ ಮ್ಯಾನೇಜ್ ಮೆಂಟ್ ಸಿಸ್ಟಂ
 • ಸಿಂಕ್ (ವಾಯ್ಸ್ ಕಂಟ್ರೋಲ್ ಜೊತೆಗೆ)
3.2 ಲೀಟರ್ 4x4 ಆಟ್ಯೋಮ್ಯಾಟಿಕ್ ಟ್ರೆಂಡ್

3.2 ಲೀಟರ್ 4x4 ಆಟ್ಯೋಮ್ಯಾಟಿಕ್ ಟ್ರೆಂಡ್

 • ಶಕ್ತಿಶಾಲಿ 3.2 ಲೀಟರ್ ಎಂಜಿನ್ ಜೊತೆ 200 ಅಶ್ವಶಕ್ತಿ,
 • 2 ಏರ್ ಬ್ಯಾಗ್ (ಚಾಲಕ ಮತ್ತು ಪ್ರಯಾಣಿಕ ಬದಿ),
 • ಟರೈನ್ ಮ್ಯಾನೇಜ್ ಮೆಂಟ್ ಸಿಸ್ಟಂ
 • ಸಿಂಕ್ (ವಾಯ್ಸ್ ಕಂಟ್ರೋಲ್ ಜೊತೆಗೆ)
2.2 ಲೀಟರ್ 4x2 ಆಟೋಮ್ಯಾಟಿಕ್ ಟೈಟಾನಿಯಂ

2.2 ಲೀಟರ್ 4x2 ಆಟೋಮ್ಯಾಟಿಕ್ ಟೈಟಾನಿಯಂ

 • ಶಕ್ತಿಶಾಲಿ 2.2 ಲೀಟರ್ ಎಂಜಿನ್ ಜೊತೆ 160 ಅಶ್ವಶಕ್ತಿ,
 • 6 ಏರ್ ಬ್ಯಾಗ್ (ಚಾಲಕ, ಪ್ರಯಾಣಿಕ, ಬದಿ ಮತ್ತು ಕರ್ಟೈನ್),
 • ಲೆಥರ್ ಹೋದಿಕೆ, ಲೆಥರ್ ಹೋದಿಕೆಯ ಗೇರ್ ನಾಬ್ ಮತ್ತು ಸ್ಟೀರಿಂಗ್ ವೀಲ್,
 • ಸಿಂಕ್ (ವಾಯ್ಸ್ ಕಂಟ್ರೋಲ್ ಜೊತೆಗೆ)
 3.2 ಲೀಟರ್ 4x4 ಆಟೋಮ್ಯಾಟಿಕ್ ಟೈಟಾನಿಯಂ

3.2 ಲೀಟರ್ 4x4 ಆಟೋಮ್ಯಾಟಿಕ್ ಟೈಟಾನಿಯಂ

ಶಕ್ತಿಶಾಲಿ 3.2 ಲೀಟರ್ ಎಂಜಿನ್ ಜೊತೆ 200 ಅಶ್ವಶಕ್ತಿ,

7 ಏರ್ ಬ್ಯಾಗ್ (ಚಾಲಕ, ಪ್ರಯಾಣಿಕ, ಬದಿ ಮತ್ತು ಕರ್ಟೈನ್),

ಟರೈನ್ ಮ್ಯಾನೇಜ್ ಮೆಂಟ್ ಸಿಸ್ಟಂ ಮತ್ತು ಸೆಮಿ ಆಟೋಮ್ಯಾಟಿಕ್ ಪ್ಯಾರಲಲ್ ಪಾರ್ಕ್ ಅಸಿಸ್ಟ್,

ಸಿಂಕ್ (ವಾಯ್ಸ್ ಕಂಟ್ರೋಲ್ ಜೊತೆಗೆ)

2016 ಫೋರ್ಡ್ ಎಂಡೀವರ್

ಅಂತಿಮವಾಗಿ ಬೆಲೆಯ ಬಗೆಗಿನ ಮಾಹಿತಿಗಳು ಬಿಡುಗಡೆ ವೇಳೆಯಷ್ಟೇ ಲಭ್ಯವಾಗಲಿದೆ. ಇದು 20ರಿಂದ 25 ಲಕ್ಷ ರಕು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

Read more on ಫೋರ್ಡ್ ford
English summary
Ford Endeavour India Launch Confirmed For January 2016
Story first published: Thursday, December 24, 2015, 10:06 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark