ಹೊಸ ಫೋರ್ಡ್ ಎಂಡೀವರ್; ನೀವು ಅರಿತುಕೊಳ್ಳಬೇಕಾದ 12 ಅಂಶಗಳು

Written By:

ಭಾರತೀಯ ಮಾರುಕಟ್ಟೆಯಲ್ಲಿ ಫೋರ್ಡ್ ಎಂಡೀವರ್ ನಿರೀಕ್ಷಿಸಿದಷ್ಟು ಯಶ ಸಾಧಿಸದೇ ಇರಬಹುದು. ಆದರೆ ಇದರಿಂದ ಅಮೆರಿಕ ಮೂಲದ ಸಂಸ್ಥೆಯು ತನ್ನ ಮಾರಾಟ ತಂತ್ರವನ್ನು ಇಲ್ಲಿಗೆ ನಿಲ್ಲಿಸಿಲ್ಲ. ಬದಲಾಗಿ ತನ್ನೆಲ್ಲ ಮಾದರಿಗಳನ್ನು ಪರಿಷ್ಕೃತಗೊಳಿಸುವ ಇರಾದೆಯಲ್ಲಿದೆ.

ಅಮೆರಿಕ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್ ಪ್ರಸಕ್ತ ಸಾಲಿನಲ್ಲೇ ನಾಲ್ಕು ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಇವುಗಳಲ್ಲಿ ಹೊಸ ಫೋರ್ಡ್ ಎಂಡೀವರ್ ಒಂದಾಗಿರಲಿದೆ. ಹೊಸ ಎಸ್ ಯುವಿ ಕಾರಿನಲ್ಲಿರುವ ವಿಶೇಷತೆಗಳು ಏನಾಗಿರಬಹುದು ? ಬನ್ನಿ ನೋಡೋಣ.

01. ಪಿಕಪ್ ತಳಹದಿ

01. ಪಿಕಪ್ ತಳಹದಿ

ನೂತನ ಕಾರನ್ನು ಫೋರ್ಡ್ ಆಸ್ಟ್ರೇಲಿಯಾದ ರೇಂಜರ್ ಪಿಕಪ್ ತಳಹದಿಯಲ್ಲಿ ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಲಾಗಿದೆ.

02. ಎವರೆಸ್ಟ್ ಕಾನ್ಸೆಪ್ಟ್

02. ಎವರೆಸ್ಟ್ ಕಾನ್ಸೆಪ್ಟ್

ನೂತನ ಫೋರ್ಡ್ ಎಂಡೀವರ್ ಕಾರು ಎವರೆಸ್ಟ್ ಕಾನ್ಸೆಪ್ಟ್ ಗೆ ಸಮಾನತೆಯನ್ನು ಪಡೆದುಕೊಂಡಿದೆ. ಇದರ ಮುಂಭಾಗದಲ್ಲಿ ದೊಡ್ಡದಾದ ಟ್ರೇಪ್ ಜೈಡಲ್ ಗ್ರಿಲ್, ವೀಲ್ ಆರ್ಚ್ ಹಾಗೂ ಮಸಲರ್ ವಿನ್ಯಾಸ ಪಡೆದುಕೊಂಡಿದೆ.

03. ಮುಂಭಾಗ

03. ಮುಂಭಾಗ

ಮುಂಭಾಗದಲ್ಲಿ ಪ್ರಮುಖವಾಗಿಯೂ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಹಾಗೂ ಅಲ್ಯೂಮಿನಿಯಂ ಸ್ಕಫ್ ಪ್ಲೇಟ್ ಕಂಡುಬರಲಿದೆ.

4. ಚಾಲನೆ

4. ಚಾಲನೆ

ಹಿಂದುಗಡೆ ಆಳವಡಿಸಲಾದ ಸ್ವತಂತ್ರ ಕಾಯಿಲ್-ಸ್ಪ್ರಿಂಗ್ ಆಳವಡಿಕೆಯಿಂದ ಚಾಲನಾ ಅನುಭವ ಸುಧಾರಣೆಗೊಳ್ಳಲಿದೆ. ಈಗಿನ ಮಾದರಿಯಲ್ಲಿ ಕಾಯಿಲ್ ಸ್ಪ್ರಿಂಗ್ ಕಂಡುಬಂದಿದೆ.

5. ವಿಶೇಷತೆ

5. ವಿಶೇಷತೆ

ಅದೇ ರೀತಿ ಹೊಸ ಟರೈನ್ ಮ್ಯಾನೇಜ್ ಮೆಂಟ್ ಸಿಸ್ಟಂ (ಟಿಎಂಎಸ್) ಕೂಡಾ ಇರಲಿದೆ. ಇದರಲ್ಲಿ ನಾರ್ಮಲ್, ಸ್ನೊ/ಗ್ರಾಸ್, ಸ್ಯಾಂಡ್ ಹಾಗೂ ರಾಕ್ ಸೆಟ್ಟಿಂಗ್ ಗಳನ್ನು ಹೊಂದಾಣಿಸಬಹುದಾಗಿದೆ. ಇನ್ನು ಟ್ರಾಕ್ಷನ್ ಕಂಟ್ರೋಲ್, ಎಂಜಿನ್ ಟಾರ್ಕ್, ಫೋರ್ ವೀಲ್ ಡ್ರೈವ್ ಮುಂತಾದ ವ್ಯವಸ್ಥೆಯಿರಲಿದೆ.

06. ಒಳಮೈ

06. ಒಳಮೈ

ಕಾರಿನೊಳಗೆ ಅತ್ಯಧಿಕ ಬದಲಾವಣೆಗಳನ್ನು ಕಾಣಬಹುದಾಗಿದ್ದು, ಹೊಸತನದ ಅನುಭವ ನೀಡುತ್ತದೆ.

07. ತಂತ್ರಜ್ಞಾನ

07. ತಂತ್ರಜ್ಞಾನ

ಹೊಸ ಫೋರ್ಡ್ ಎಸ್ ಯುವಿನಲ್ಲಿ ಸಿಂಕ್2 (SYNC2) ಮಲ್ಟಿಮೀಡಿಯಾ ವ್ಯವಸ್ಥೆ ಹಾಗೂ 8 ಇಂಚುಗಳ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ಸಿಸ್ಟಂ ಕೂಡಾ ಇರುತ್ತದೆ.

08. ಎಂಜಿನ್

08. ಎಂಜಿನ್

ಅಂದ ಹಾಗೆ ಫೋರ್ಡ್ ಹೊಸ ಕಾರು 2.2 ಲೀಟರ್ (148 ಅಶ್ವಶಕ್ತಿ) ಹಾಗೂ 3.2 ಲೀಟರ್ (197 ಅಶ್ವಶಕ್ತಿ) ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಹಿಂದಿನ ಮಾದರಿಯಲ್ಲಿ 2.5 ಹಾಗೂ 3.0 ಲೀಟರ್ ಎಂಜಿನ್ ಆಳವಡಿಸಲಾಗಿತ್ತು.

09. ಏಳು ಸೀಟು

09. ಏಳು ಸೀಟು

ಇನ್ನು ಭಾರತೀಯ ಮಾದರಿಗಾಗಿ ಏಳು ಸೀಟಿನ ವಿನ್ಯಾಸ ನಿರೀಕ್ಷಿಸಲಾಗುತ್ತದೆ.

10. ಪ್ರತಿಸ್ಪರ್ಧಿಗಳು

10. ಪ್ರತಿಸ್ಪರ್ಧಿಗಳು

ಪ್ರಮುಖವಾಗಿಯೂ ದೇಶದಲ್ಲಿ 2015 ಫೋರ್ಡ್ ಎಂಡೀವರ್ ಕಾರು, ಮಿಟ್ಸುಬಿಸಿ ಪಜೆರೊ, ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಹಾಗೂ ಟೊಯೊಟಾ ಫಾರ್ಚ್ಯುನರ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

11. ನಿರೀಕ್ಷಿತ ಬಿಡುಗಡೆ

11. ನಿರೀಕ್ಷಿತ ಬಿಡುಗಡೆ

ಪ್ರಸಕ್ತ ಸಾಲಿನಲ್ಲೇ ಅದರಲ್ಲೂ ಹಬ್ಬದ ಆವೃತ್ತಿಯ ಆರಂಭಕ್ಕೂ ಮುಂಚಿತವಾಗಿ ಹೊಸ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ಫೋರ್ಡ್ ಹೊಂದಿದೆ. ವರದಿಗಳ ಪ್ರಕಾರ 2015 ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

12. ಬೆಲೆ

12. ಬೆಲೆ

ಅಂತಿಮವಾಗಿ ದೇಶದಲ್ಲಿ ಸ್ಪರ್ಧಾತ್ಮಕೆ ಬೆಲೆ ಕಾಪಾಡಲು ನಿಟ್ಟಿನಲ್ಲಿ ಫೋರ್ಡ್ ಗಮನ ಹರಿಸಲಿದೆ. ಇದು 18ರಿಂದ 20 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

English summary
New Ford Endeavour: 12 things to know
Story first published: Monday, May 25, 2015, 9:48 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark