2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿರುವ ರೆನೊ ಡಸ್ಟರ್

By Nagaraja

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋ ವಾಹನ ಪ್ರದರ್ಶನ ಮೇಳದಲ್ಲಿ ಅತಿ ನೂತನ ಡಸ್ಟರ್ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಅನಾವರಣಗೊಳ್ಳಲಿದೆ.

2016 ಡಸ್ಟರ್ ಕಾರಿನಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರುವ ಸಾಧ್ಯತೆಗಳಿದೆ. ಇದು ಪರಿಷ್ಕೃತ ಹೆಡ್ ಲೈಟ್ಸ್ ನಿಂದ ಆರಂಭವಾಗಿ ಫಾಗ್ ಲ್ಯಾಂಪ್, ಫ್ರಂಟ್ ಗ್ರಿಲ್, ಬಂಪರ್, ಅಲಾಯ್ ವೀಲ್, ಟೈಲ್ ಲೈಟ್ ಹಾಗೂ ಇನ್ನು ಹೆಚ್ಚಿನ ಬಣ್ಣಗಳ ಆಯ್ಕೆಗಳು ಲಭ್ಯವಾಗಲಿದೆ.

2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿರುವ ರೆನೊ ಡಸ್ಟರ್

ಪರಿಷ್ಕೃತ ಡಸ್ಟರ್ ಕಾರಿನಲ್ಲಿ ಹೊರಮೈ ಜೊತೆಗೆ ಒಳಮೈಯಲ್ಲೂ ಬದಲಾವಣೆ ಕಂಡುಬರಲಿದೆ. ಇದರ ಇಂಟಿರಿಯರ್ ವಿನ್ಯಾಸ ಆಧುನಿಕ ಖರೀದಿಗಾರರಿಗೆ ಹೆಚ್ಚು ಹೊಂದಿಕೆಯಾಗುವ ರೀತಿಯಲ್ಲಿ ನಿರ್ಮಿಸಲಾಗುವುದು.

2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿರುವ ರೆನೊ ಡಸ್ಟರ್

ಇನ್ನು ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಈಗಿರುವ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳ ಹೊರತಾಗಿ ಹೊಸತಾದ 1.5 ಲೀಟರ್ ಡೀಸೆಲ್ ಎಂಜಿನ್ ಜೊತೆಗೆ ಆರ್-ಎಎಂಟಿ ಗೇರ್ ಬಾಕ್ಸ್ ನಿರೀಕ್ಷೆ ಮಾಡಬಹುದಾಗಿದೆ.

2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿರುವ ರೆನೊ ಡಸ್ಟರ್

ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಾಣಲಿರುವ ರೆನೊ ಡಸ್ಟರ್, ಮಾರ್ಚ್ ವೇಳೆಯಾಗುವಾಗ ಮಾರಾಟಕ್ಕೆ ಲಭ್ಯವಾಗಲಿದೆ.

2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿರುವ ರೆನೊ ಡಸ್ಟರ್

ಪ್ರಮುಖವಾಗಿಯೂ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ನಿಸ್ಸಾನ್ ಟೆರೆನೊ ಮುಂತಾದ ಮಾದರಿಗಳಿಗೆ ರೆನೊ ಡಸ್ಟರ್ ಪ್ರತಿಸ್ಪರ್ಧಿಯಾಗಲಿದೆ.

2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳ್ಳಲಿರುವ ರೆನೊ ಡಸ್ಟರ್

ಒಟ್ಟಿನಲ್ಲಿ ದೇಶದಲ್ಲಿ ಕ್ರೀಡಾ ಬಳಕೆಯ ವಾಹನಗಳ ಸಾಲಿನಲ್ಲಿ ಹೆಚ್ಚಿನ ಸದ್ದು ಮಾಡಿರುವ ರೆನೊ ಡಸ್ಟರ್ ಮಗದೊಮ್ಮೆ ಖರೀದಿಗಾರರನ್ನು ಮೋಡಿ ಮಾಡುವ ನಿರೀಕ್ಷೆಯಲ್ಲಿದೆ.

More from DriveSpark

Article Published On: Friday, December 4, 2015, 18:15 [IST]
English summary
New Renault Duster To Be Showcased At 2016 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+