ಹೊಸ ಇನ್ನೋವಾ ನಂ.23ರಂದು ಜಾಗತಿಕ ಅನಾವರಣ
ಎಲ್ಲ ಹೊಸತನದಿಂದ ಕೂಡಿರುವ ಟೊಯೊಟಾ ಇನ್ನೋವಾ ಬಹು ಬಳಕೆಯ ವಾಹನವು ಮುಂಬರುವ 2015 ನವೆಂಬರ್ 23ರಂದು ಭರ್ಜರಿ ಅನಾವರಣ ಕಾಣಲಿದೆ. ಮೊದಲು ಇಂಡೋನೇಷ್ಯಾ ಮಾರುಕಟ್ಟೆ ಕಾಲಿಡಲಿರುವ 2016 ಟೊಯೊಟಾ ಇನ್ನೋವಾ ಬಳಿಕ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯನ್ನು ತಲುಪಲಿದೆ.
Also Read: 2016 ಇನ್ನೋವಾ ಆಕರ್ಷಕ ಒಳಮೈ
ಇದರಂತೆ ಇಂಡೋನೇಷ್ಯಾದಲ್ಲಿ ಮುಂಗಡ ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. ನಿಮ್ಮ ಮಾಹಿತಿಗಾಗಿ ಮೊದಲ ಜನಾಂಗ ಪರಿಚಯಿಸಿದ 11 ವರ್ಷಗಳ ಬಳಿಕ ಎರಡನೇ ತಲೆಮಾರಿನ ಇನ್ನೋವಾ ಕಾರು ಬಿಡುಗಡೆಯಾಗುತ್ತಿದೆ.

ನೂತನ ಇನ್ನೋವಾ ಕ್ರೀಡಾತ್ಮಕ ಜೊತೆಗೆ ಹೆಚ್ಚು ಆಕ್ರಮಣಕಾರಿ ವಿನ್ಯಾಸವನ್ನು ಮೈಗೂಡಿಸಿಕೊಂಡು ಬಂದಿದೆ. ಇದು ತನ್ನ ಹಿರಿಯ ಸೋದರ ಫಾರ್ಚ್ಯುನರ್ ಜೊತೆಗೆ ಶೈಲಿಯನ್ನು ಹಂಚಿಕೊಂಡಿದೆ.

ಇಂಡೋನೇಷ್ಯಾ ಆವೃತ್ತಿಯು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಇದು 2.0 ಲೀಟರ್ ವಿವಿಟಿ ಐ ಪೆಟ್ರೋಲ್ ಹಾಗೂ 2.4 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಅಲ್ಲದೆ ಆರು ಹಾಗೂ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಟ್ಟಿದ್ದು, ಏರ್ ಬ್ಯಾಗ್ ಜೊತೆಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಮುಂತಾದ ವೈಶಿಷ್ಟ್ಯಗಳು ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

ಟೊಯೊಟಾ ಇನ್ನೋವಾ 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ. ತದಾ ಬಳಿಕ 2016 ಮಧ್ಯಂತರ ಅವಧಿಯಲ್ಲಿ ಬಿಡುಗಡೆಯಾಗಲಿದೆ.

ಹೊಸ ಇನ್ನೋವಾದಲ್ಲಿ ಹೊಸತೇನಿದೆ ಬಲ್ಲೀರಾ ?


Click it and Unblock the Notifications








