2016ರಲ್ಲಿ ಟೊಯೊಟಾ ಆರ್‌ಎವಿ4 ಹೈಬ್ರಿಡ್ ಎಸ್‌ಯುವಿ ಎಂಟ್ರಿ
ಮುಂದಿನ ವರ್ಷ ಮಗದೊಂದು ಆಕರ್ಷಕ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನದ (ಎಸ್‌ಯುವಿ) ಪ್ರವೇಶವಾಗಲಿದೆ. ಅದು ಬೇರೆ ಯಾವುದು ಅಲ್ಲ. ಈಗಷ್ಟೇ ವಿಶ್ವದ ಅತಿ ದೊಡ್ಡ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಭರ್ಜರಿ ಅನಾವರಣ ಕಂಡಿರುವ ಟೊಯೊಟಾ ಆರ್‌ಎವಿ4 ಹೈಬ್ರಿಡ್ ಎಸ್‌ಯುವಿ.
ಟೊಯೊಟಾದ ಈ ಸಂಪೂರ್ಣ ಹೈಬ್ರಿಡ್ ತಂತ್ರಗಾರಿಕೆಯ ಎಸ್‌ಯುವಿ ಆಲ್ ವೀಲ್ ಡ್ರೈವ್ ಚಾಲನಾ ಆಯ್ಕೆಯೊಂದಿಗೂ ಲಭ್ಯವಾಗಲಿದೆ. ಇದರಲ್ಲಿ 2.5 ಲೀಟರ್ ಆಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಜೊತೆಗೆ ಶಕ್ತಿಶಾಲಿ ಎಲೆಕ್ಟ್ರಿಕ್ ಮೋಟಾರು ಕಂಡುಬರಲಿದೆ.

ಸುಧಾರಿತ ಚಾಲನಾ ಆರಾಮದಾಯಕತೆ, ಅತ್ಯುತ್ತಮ ಚಲನಶೀಲತೆ, ನಿರ್ವಹಣೆ ಹಾಗೂ ಗರಿಷ್ಠ ಸ್ಥಳಾವಕಾಶವನ್ನು ಟೊಯೊಟಾದ ನೂತನ ಹೈಬ್ರಿಡ್ ಕಾಂಪಾಕ್ಟ್ ಎಸ್‌ಯುವಿನಲ್ಲಿ ಒದಗಿಸಲಾಗುವುದು.

ನಾವೀನ್ಯ ತಂತ್ರಜ್ಞಾನವನ್ನು ಇದರಲ್ಲಿ ಆಳವಡಿಸಲಾಗುವುದು. ಇದು ಟೊಯೊಟಾ ಸೇಫ್ಟಿ ಸೆನ್ಸ್ ಭದ್ರತಾ ವಲಯದೊಂದಿಗೆ ಪರಿಚಯವಾಗಲಿದೆ.

ಕಾರಿನೊಳಗೆ 4.3 ಇಂಚುಗಳ ಬಹು ಮಾಹಿತಿ ಮನರಂಜನಾ ಸ್ಕ್ರೀನ್ ಸೇವೆಯೂ ಲಭ್ಯವಾಗಲಿದೆ. ಅಂತೆಯೇ ಟೊಯೊಟಾ ಟಚ್ 2 ಮಲ್ಟಿಮೀಡಿಯಾ ಸಿಸ್ಟಂ ಸಹ ಇರಲಿದೆ.

ಇನ್ನು ಹೊರಮೈಯಲ್ಲಿ ಎಲ್‌ಇಡಿ ಹ್ಯಾಲೊಗನ್ ಹೆಡ್ ಲ್ಯಾಂಪ್ ಜೊತೆ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಸೇವೆ ಸಿಗಲಿದೆ. ಹಾಗೆಯೇ 17 ಹಾಗೂ 18 ಇಂಚುಗಳ ಅಲಾಯ್ ವೀಲ್ ಪ್ರಮುಖ ಆಕರ್ಷಣೆಯಾಗಲಿದೆ.

ನಿಮ್ಮ ಮಾಹಿತಿಗಾಗಿ ಟೊಯೊಟಾ 1994ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಆರ್‌ಎವಿ4 ಪ್ರಸ್ತುತ 170ರಷ್ಟು ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿದೆ. ಅಲ್ಲದೆ ವಿಶ್ವದೆಲ್ಲೆಡೆ ಆರು ದಶಲಕ್ಷಗಳಷ್ಟು ಮಾರಾಟವನ್ನು ಕಂಡಿದೆ. ಈ ಪೈಕಿ ಯುರೋಪ್ ನಲ್ಲಿ ಮಾತ್ರವಾಗಿ 1.5 ಮಿಲಿಯನ್ ಯುನಿಟ್ ಗಳ ಮಾರಾಟ ಸಾಧಿಸಿದೆ.

ಟೊಯೊಟಾ ನೂತನ ಆರ್‌ಎವಿ4 ಇ-ಫೋರ್ ಎಲೆಕ್ಟ್ರಿಕ್ ಆಲ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಪಡೆಯಲಿದೆ. ಇದು ಹೆಚ್ಚು ಪರಿಸರ ಸ್ನೇಹಿ ಅಲ್ಲದೆ ಗರಿಷ್ಠ ಇಂಧನ ಕ್ಷಮತೆ ನೀಡುವಲ್ಲಿ ಯಶಸ್ವಿಯಾಗಲಿದೆ.

ಅಂತೆಯೇ ಇದರ ಟೊಯೊಟಾ ಸೇಫ್ಟಿ ಸೆನ್ಸ್ ಸುರಕ್ಷಾ ತಂತ್ರಗಾರಿಕೆಯ ಮೂಲಕ ಟ್ರಾಫಿಕ್ ಪರಿಸ್ಥಿತಿಗಳಲ್ಲಿ ಸಂಭವನೀಯ ಢಿಕ್ಕಿಯನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಇದು ಢಿಕ್ಕಿ ಗ್ರಹಿಕಾ ಸಿಸ್ಟಂ, ಪಾದಾಚಾರಿ ಗ್ರಹಿಕಾ ಸಿಸ್ಟಂ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರಸ್ತೆ ಚಿಹ್ನಿ ಸಹಾಯಿ ಹಾಗೂ ಆಟೋಮ್ಯಾಟಿಕ್ ಹೈ ಬೀಮ್ ತಂತ್ರಜ್ಞಾನಗಳನ್ನು ಪಡೆಯಲಿದೆ.

ಒಟ್ಟಿನಲ್ಲಿ ಆರ್‌ಎವಿ4 ಯಶಸ್ಸನ್ನು ಮುಂದುವರಿಸಿಕೊಂಡು ಹೋಗುವುದು ಸಂಸ್ಥೆಯ ಗುರಿಯಾಗಿದೆ. ಇದಕ್ಕೆ ಹೈಬ್ರಿಡ್ ಮಾದರಿಯು ಹೊಸ ಆಯಾಮ ಬರೆಯಲಿದೆ.


Click it and Unblock the Notifications








