ನೇಪಾಳ ಭೂಕಂಪ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ ವಾಹನೋದ್ಯಮ
ಪ್ರತಿ ಬಾರಿಯೂ ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಪ್ರಕೃತಿ ವಿಕೋಪ ಸಂಭವಿಸಿದಾದ ತಕ್ಷಣ ವಾಹನೋದ್ಯಮದ ನೆರವಿನ ಹಸ್ತದೊಂದಿಗೆ ಮುಂದೆ ಬರುತ್ತದೆ. ಇತ್ತೀಚೆಗಷ್ಟೇ ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ವೇಳೆಯಲ್ಲೂ ಅಭಯ ಹಸ್ತ ಚಾಚಿರುವ ವಾಹನೋದ್ಯಮ ಮೆಚ್ಚುಗೆಗೆ ಪಾತ್ರವಾಗಿದೆ.
ನೆರೆಯ ನೇಪಾಳದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸಾವಿರಾರು ಮಂದಿ ಸಾವಿಗೀಡಾಗಿದ್ದರಲ್ಲದೆ ನೂರಾರು ಮಂದಿ ತಮ್ಮ ಮನೆ ಮಠಗಳನ್ನು ಕಳೆದುಕೊಂಡಿದ್ದರು. ಈಗ ಸಂತ್ರಸ್ತರ ಪುನರ್ವಸತಿಗಾಗಿ ಪ್ರಮುಖ ವಾಹನ ತಯಾರಿಕ ಸಂಸ್ಥೆಗಳು ನೆರವನ್ನು ಘೋಷಿಸಿದೆ.

ಹುಂಡೈ - ಮೂಲಸೌಕರ್ಯ ಪುನ ಸ್ಥಾಪನೆಗಾಗಿ 1.91 ಕೋಟಿ ರು. ಘೋಷಣೆ
ನಿಸ್ಸಾನ್ - ಆಹಾರ ಹಾಗೂ ನೀರಿಗಾಗಿ 53.60 ಲಕ್ಷ ರು. ಘೋಷಣೆ
ಮಹೀಂದ್ರ - ಕುಸಿದಿರುವ ಕಟ್ಟಡ ತೆರವುಗೊಳಿಸಲು ಟ್ರ್ಯಾಕ್ಟರ್, ಪಿಕಪ್ ಸಹಾಯ
ಫೋರ್ಡ್ - ಸಂಸ್ಥೆ ಹಾಗೂ ಕೆಲಸಗಾರರ ನಿಧಿಯಿಂದ 1.26 ಕೋಟಿ ರು. ಹಾಗೂ ಇನ್ನಷ್ಟು 31.58 ಲಕ್ಷ ರು. ಘೋಷಣೆ
ಜನರಲ್ ಮೋಟಾರ್ಸ್ - ಅಮೆರಿಕನ್ ರೆಡ್ ಕ್ರಾಸ್ ಗೆ 63 ಲಕ್ಷ ಹಾಗೂ ಭಾರತೀಯ ಪ್ರಧಾನಿ ಪರಿಹಾರ ನಿಧಿಗೆ 31.95 ಲಕ್ಷ ರು. ನೆರವು
ಟೊಯೊಟಾ - ನೇಪಾಳ ಪರಿಹಾರ ನಿಧಿಗೆ 53.60 ಲಕ್ಷ ರು. ನೆರವು
ಹೋಂಡಾ - ಪುನರ್ವಸತಿಗಾಗಿ 1.06 ಕೋಟಿ ರು. ನೆರವು
ಯಮಹಾ - 26 ಲಕ್ಷ ರು. ನೆರವು
ಜೆಸಿಬಿ - ಈಗಾಗಲೇ ಜೆಸಿಬಿ ಯಂತ್ರಗಳನ್ನು ಕಳುಹಿಸಿಕೊಟ್ಟಿರುವ ಜೆಸಿಬಿ ಹೆಚ್ಚುವರಿ 6.3 ಕೋಟಿ ರು.ಗಳ ನೆರವನ್ನು ನೀಡುವುದಾಗಿ ಘೋಷಿಸಿದೆ.
ಇದಲ್ಲದೆ ಭೂಕಂಪದಲ್ಲಿ ಹಾನಿಗೊಳಗಾಗಿರುವ ವಾಹನಗಳ ರಿಪೇರಿ ಕಾರ್ಯಗಳಲ್ಲೂ ಪ್ರಮುಖ ವಾಹನ ತಯಾರಿಕ ಸಂಸ್ಥೆಗಳು ಭಾಗವಹಿಸುತ್ತಿದೆ.


Click it and Unblock the Notifications




























