ದಟ್ಸನ್‌ನಿಂದ ಮಗದೊಂದು ಆಕರ್ಷಕ ಕಾರು ಭಾರತಕ್ಕೆ?
ಈಗಾಗಲೇ ಎರಡು ಅಗ್ಗದ ಕಾರುಗಳನ್ನು ದೇಶಕ್ಕೆ ಪರಿಚಯಿಸಿರುವ ದಟ್ಸನ್ ದೇಶಕ್ಕೆ ಮಗದೊಂದು ಆಕರ್ಷಕ ಕೊಡುಗೆ ನೀಡುವ ಸಿದ್ಧತೆಯಲ್ಲಿ ತೊಡಗಿದೆ. ದಟ್ಸನ್ ಮಾತೃಸಂಸ್ಥೆಯಾಗಿರುವ ನಿಸ್ಸಾನ್ ಈ ಬಗ್ಗೆ ಸ್ಪಷ್ಟ ಯೋಜನೆಯನ್ನು ಹೊಂದಿದೆ.
ಜಪಾನ್ ಆಟೋಮೊಬೈಲ್ ದೈತ್ಯ ನಿಸ್ಸಾನ್ ಬಜೆಟ್ ಬ್ರಾಂಡ್ ಆಗಿರುವ ದಟ್ಸನ್, ಭಾರತಕ್ಕೆ ಜನರ ಬೇಡಿಕೆಯಂತೆಯೇ ಈಗಾಗಲೇ ಗೊ ಹ್ಯಾಚ್‌ಬ್ಯಾಕ್ ಹಾಗೂ ಗೊ ಪ್ಲಸ್ ಕಾಂಪಾಕ್ಟ್ ಎಂಪಿವಿ ಮಾದಿರಗಳನ್ನು ಪರಿಚಯಿಸಿದೆ.

ವರದಿಗಳ ಪ್ರಕಾರ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ರೆಡಿ ಗೊ ಪರಿಕಲ್ಪನೆಯ ತಳಹದಿಯಲ್ಲಿ ಹೊಸ ಮಾದರಿಯನ್ನು ಬಿಡುಗಡೆ ಮಾಡುವುದು ನಿಸ್ಸಾನ್ ಯೋಜನೆಯಾಗಿದೆ. ಈ ಮೂಲಕ ವಾರ್ಷಿಕ ಮಾರಾಟ ಗುರಿ ಮುಟ್ಟುವ ಇರಾದೆಯಲ್ಲಿದೆ.

ಎಂಟ್ರಿ ಲೆವೆಲ್ ವಿಭಾಗದಲ್ಲಿ ಹೊಸ ಕಾರು ಪರಿಚಯಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಏಕೆಂದರೆ ಭಾರತದಲ್ಲಿ ಸಣ್ಣ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದು ಮಾರುತಿ ಆಲ್ಟೊ ಹಾಗೂ ಹ್ಯುಂಡೈ ಇಯಾನ್‌ಗಳಂತಹ ಜನಪ್ರಿಯ ಮಾದರಿಗಳಿಗೆ ಸ್ಪರ್ಧೆ ಒಡ್ಡಲಿದೆ.


Click it and Unblock the Notifications








