ಪಳಪಳಿಸುವ ನಿಸ್ಸಾನ್ ಗೋಲ್ಡ್ ಜಿಟಿಆರ್ ವಿಶೇಷ ಆವೃತ್ತಿ
ಕೇವಲ ಗುಣಮಟ್ಟದ ಕಾರುಗಳನ್ನಷ್ಟೇ ಅಲ್ಲದೆ ಗರಿಷ್ಠ ನಿರ್ವಹಣೆಯ ಕಾರುಗಳನ್ನು ನಿರ್ಮಿಸುವುದರಲ್ಲೂ ಜಪಾನ್ ಮೂಲದ ದೈತ್ಯ ಸಂಸ್ಥೆಯಾಗಿರುವ ನಿಸ್ಸಾನ್ ಎತ್ತಿದ ಕೈ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ.
ಈಗ ತನ್ನ ಐಕಾನಿಕ್ ಜಿಟಿ-ಆರ್ ಆವೃತ್ತಿಯ 45ನೇ ವಾರ್ಷಿಕೋತ್ಸವದ ಅಂಗವಾಗಿ ಜಪಾನ್‌ನ ಈ ಸಂಸ್ಥೆಯು ವಿಶೇಷ ಜಿಟಿ-ಆರ್ ವಾರ್ಷಿಕ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡುತ್ತಿದೆ.

ಎಷ್ಟು ಮಾಡೆಲ್ ನಿರ್ಮಾಣ?
ಕಳೆದ ಕೆಲವು ದಶಕಗಳಲ್ಲಿ ಹಲವಾರು ಬದಲಾವಣೆಯನ್ನು ಕಂಡಿರುವ ನಿಸ್ಸಾನ್ ಜಿಟಿಆರ್ 45ನೇ ವಾರ್ಷಿಕ ಎಡಿಷನ್ ಕೇವಲ ಸೀಮಿತ 30 ಆವೃತ್ತಿಗಳಷ್ಟೇ ನಿರ್ಮಾಣವಾಗಲಿದೆ.
ಬೆಲೆ
ಇದು ಭಾರತೀಯ ರುಪಾಯಿ ಪ್ರಕಾರ 64.46 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಹಾಗಾಗಿ ಜನ ಸಾಮಾನ್ಯರ ಕೈಗೆಟುಕುವುದು ದೂರದ ಮಾತಾಗಿದೆ.

ವಿಶೇಷವೆಂದರೆ ಈ ಎಲ್ಲ ಸೀಮಿತ ಮಾದರಿಗಳು ಅಮೆರಿಕದಲ್ಲೇ ಮಾರಾಟ ಕಾಣುತ್ತಿದೆ. ಇದು ಅಮೆರಿಕದಲ್ಲಿ ನಿಸ್ಸಾನ್ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಇನ್ನು ನಿಸ್ಸಾನ್ 45ನೇ ವಾರ್ಷಿಕ ಎಡಿಷನ್ ಜಿಟಿಆರ್ ಕಾರಿನಲ್ಲಿ ಚಿನ್ನದ ಲೇಪನ ಸಹ ಕಂಡುಬರಲಿದೆ. ಅಂತೆಯೇ ಗರಿಷ್ಠ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ.


Click it and Unblock the Notifications








