ಬೆಂಗಳೂರಿನಲ್ಲಿ ನಿಸ್ಸಾನ್ ಜಿಟಿ ಅಕಾಡೆಮಿ ರೇಸ್ ಕರಾಮತ್ತು
ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಮುಂಬೈಯ ಯಶಸ್ಸಿನ ಬಳಿಕ ನಿಸ್ಸಾನ್ ಜಿಟಿ ಅಕಾಡೆಮಿ ಉದ್ಯಾನ ನಗರಿ ಬೆಂಗಳೂರನ್ನು ಪ್ರವೇಶ ಪಡೆದಿದೆ. ಶುಕ್ರವಾರದಿಂದಲೇ (ಜೂನ್ 19) ಆರಂಭವಾಗಿರುವ ರೇಸ್ ಕೂಟವು ಭಾನುವಾರ 21ರ ವರೆಗೆ ನಡೆಯಲಿದೆ.
ಬೆಂಗಳೂರಿನ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ವಾಹನ ಉತ್ಸಾಹಿಗಳಿಗೆ ರೇಸ್ ಡ್ರೈವರ್ ಎನಿಸಿಕೊಳ್ಳುವ ಅವಕಾಶವಿರಲಿದೆ. ಇಲ್ಲಿ ಆಯ್ಕೆಯಾಗುವ ಆರು ವಿಜೇತರಿಗೆ ಸಿಲ್ವರ್ ಸ್ಟೋನ್ ರೇಸ್ ಕ್ಯಾಂಪ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವಿರುತ್ತದೆ.

ಪ್ರಸ್ತುತ ಅಕಾಡೆಮಿ ರೇಸ್ ಇದೇ ಬರುವ 26ರಿಂದ 28ರ ವರೆಗೆ ಚೆನ್ನೈನಲ್ಲೂ ನಡೆಯಲಿದೆ. ಭಾರತದಲ್ಲಿ ಇದು ಎರಡನೇ ಬಾರಿ ಜಿಟಿ ಅಕಾಡೆಮಿ ರೇಸ್ ಆಯೋಜಿಸಲಾಗುತ್ತಿದೆ.
ದೇಶದ ರೇಸ್ ಉತ್ಸಾಹಿಗಳನ್ನು ಪ್ರೋತ್ಸಾಹಿಸುತ್ತಿರುವ ನಿಸ್ಸಾನ್ ಉಜ್ವಲ ಭವಿಷ್ಯ ರೂಪಿಸಲು ನೆರವಾಗಲಿದೆ.


Click it and Unblock the Notifications