ನಿಸ್ಸಾನ್ ಜಿಟಿಆರ್ 45ನೇ ವಾರ್ಷಿಕ ಗೋಲ್ಡ್ ಎಡಿಷನ್
ಜಪಾನ್ ನ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, ಜಿಟಿಆರ್ 45ನೇ ವಾರ್ಷಿಕ ಗೋಲ್ಡ್ ಎಡಿಷನ್ ಅನ್ನು ಪರಿಚಯಿಸಿದೆ. ಇಲ್ಲಿ ಗಮನಾರ್ಹ ವಿಷಯವೆಂದರೆ ಈ ವಿಶೇಷ ಆವೃತ್ತಿಯು ಸೀಮಿತ 45 ಯುನಿಟ್ ಗಳಷ್ಟೇ ನಿರ್ಮಾಣವಾಗಲಿದೆ.
ಪ್ರಮುಖವಾಗಿಯೂ ಜಿಟಿಆರ್ ಪರಂಪರೆಯನ್ನು ಇನ್ನಷ್ಟು ಜನಪ್ರಿಯವಾಗಿಸುವ ನಿಟ್ಟಿನಲ್ಲಿ ಈ ಗೋಲ್ಡ್ ಎಡಿಷನ್ ಕಾರನ್ನು ಸಂಸ್ಥೆ ಬಿಡುಗಡೆಗೊಳಿಸಿದೆ. ಈಗ ನಿಸ್ಸಾನ್ ಜಿಟಿಆರ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಮೊದಲನೆಯದಾಗಿ ಸಿಲಿಕಾ ಬ್ರಾಸ್ ಬಣ್ಣವು ನಿಸ್ಸಾನ್ ಜಿಟಿಆರ್ ಕಾರಿಗೆ ಮತ್ತಷ್ಟು ಆಕರ್ಷಣೆ ತುಂಬಲಿದೆ.

ಇನ್ನು ನಿಸ್ಸಾನ್ ಗೋಲ್ಡ್ ಎಡಿಷನ್ ನಲ್ಲಿ ವಿಶೇಷ 45ನೇ ವಾರ್ಷಿಕದ ಪ್ರತ್ಯೇಕ ಲಾಂಛನ ಕಂಡುಬರಲಿದೆ.

ಅಂದ ಹಾಗೆ ಪ್ರೀಮಿಯಂ ವೆರಿಯಂಟ್ ನಲ್ಲಿ ಮಾತ್ರ ನಿಸ್ಸಾನ್ ಗೋಲ್ಡ್ ಎಡಿಷನ್ ಜಿಟಿಆರ್ ಕಾರು ಲಭ್ಯವಾಗಲಿದೆ.

ಇದರಲ್ಲಿ ಅತ್ಯಂತ ಶಕ್ತಿಶಾಲಿ 3.8 ಲೀಟರ್ ಟ್ವಿನ್ ಟರ್ಬೊ ಚಾರ್ಜ್ಡ್ ವಿ6 ಎಂಜಿನ್ ಆಳವಡಿಸಲಾಗಿದ್ದು, 550 ಅಶ್ವಶಕ್ತಿ (630 ತಿರುಗುಬಲ) ಉತ್ಪಾದಿಸಲಿದೆ.

ಅಂದ ಹಾಗೆ ನಿಸ್ಸಾನ್ ಜಿಟಿಆರ್ ಎರಡು ಬಾಗಿಲುಗಳ ಸ್ಪೋರ್ಟ್ಸ್ ಕೂಪೆ ಕಾರಾಗಿದೆ. ಇದು ಮೊದಲ ಬಾರಿಗೆ 2007ರಲ್ಲಿ ಬಿಡುಗಡೆಯಾಗಿತ್ತು.

ನಿಸ್ಸಾನ್ ಸ್ಕೈಲೈನ್ ಜಿಟಿಆರ್ ಮಾದರಿಯ ಉತ್ತರಾಧಿಕಾರಿಯಾಗಿ ಇದು ಕಾಣಿಸಿಕೊಂಡಿತ್ತು. ಅಲ್ಲದೆ ಗೊಡ್ಜಿಲ್ಲಾ ಎಂಬ ಹೆಸರಿನಿಂದಲೂ ಪ್ರಖ್ಯಾತಿ ಪಡೆದಿದೆ.


Click it and Unblock the Notifications