ಹೊಸ ವರ್ಷಕ್ಕೆ ಉಡುಗೊರೆಯಿಲ್ಲ; ಇಂಧನ ಬೆಲೆಯಲ್ಲಿ ಇಳಿಕೆಯಿಲ್ಲ
ಹೊಸ ವರ್ಷದಲ್ಲಿ ಇಂಧನ ಬೆಲೆ ಇಳಿಕೆಯಾಗುತ್ತೇ ಎಂಬ ನಿರೀಕ್ಷೆಯಿದ್ದರೂ ಅವೆಲ್ಲವೂ ಹುಸಿಯಾಗಿದೆ. ಇದರೊಂದಿಗೆ ಇಂಧನ ಬೆಲೆ ಮಗದೊಮ್ಮೆ ಇಳಿಕೆಯಾಗುತ್ತೆಂದು ಕಾದು ಕುಳಿತಿದ್ದ ವಾಹನ ಸವಾರರಿಗೆ ನಿರಾಸೆ ತಂದಿದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿರು ಹಿನ್ನೆಲೆಯಲ್ಲಿ ಕಳೆದ ಕೆಲವು ಸಮಯಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು.

ಈ ಮೊದಲು ಬಂದ ಮಾಹಿತಿಯ ಪ್ರಕಾರ ಇಂಧನ ಬೆಲೆ ಕಡಿತದ ಮೂಲಕ ಹೊಸ ವರ್ಷಕ್ಕೆ ಉಡುಗೊರೆ ನೀಡಲಿರುವ ಕೇಂದ್ರ ಸರಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಎರಡು ರು.ಗಳಷ್ಟು ಇಳಿಕೆ ಮಾಡುವ ಬಗ್ಗೆ ವರದಿ ಬಂದಿತ್ತು.
ಪ್ರಸ್ತುತ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ವೊಂದಕ್ಕೆ 56 ಅಮೆರಿಕರ್ ಡಾಲರ್ ಇದ್ದು, ಆರು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದೆ.
ಇದಕ್ಕೂ ಮೊದಲು ಪೆಟ್ರೋಲ್ ಬಳಿಕ ಡೀಸೆಲ್ ಬೆಲೆ ಅನಿಯಂತ್ರಣಗೊಳಿಸಲಾಗಿತ್ತು. ಅಲ್ಲದೆ ಪ್ರತಿ 15 ದಿನಕ್ಕೊಮ್ಮೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಬೆಲೆ ನಿರ್ಧರಿಸುತ್ತಿದೆ.


Click it and Unblock the Notifications








