ರೆನೊ ಲೊಡ್ಜಿ ಜೊತೆ ಗೋವಾದಲ್ಲೊಂದು ಜಾಲಿ ರೈಡ್
ದೇಶದ ಅತಿ ದೊಡ್ಡ ಬ್ಲಾಗ್ ಸಮೂಹ ಬ್ಲಾಗ್ ಅಡ್ಡಾ (BlogAdda) ಜೊತೆ ಸೇರಿಕೊಂಡಿರುವ ಫ್ರಾನ್ಸ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ, ತುಂತುರು ಮಳೆ ಸುರಿಯುವ ಈ ಮಾನ್ಸೂನ್ ವೇಳೆಯಲ್ಲಿ ನೂತನ ರೆನೊ ಲೊಡ್ಜಿ ಜೊತೆ ಮೋಜಿನ ಸವಾರಿಯನ್ನು ಏರ್ಪಡಿಸಿತ್ತು.
ದೇಶದೆಲ್ಲೆಡೆಯಿಂದ ಆಯ್ದ 40ರಷ್ಟು ವಾಹನ ಉತ್ಸಾಹಿ ಬ್ಲಾಗರ್ ಗಳಿಗೆ ಇದರಲ್ಲಿ ಭಾಗವಹಿಸುವ ಅವಕಾಶ ದೊರೆದಿತ್ತು. ಸಂಪೂರ್ಣ ಆನಂದಮಯ ಈ ಡ್ರೈವ್ ನಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಭಾಗವಹಿಸಿತ್ತು.
ನಿಮ್ಮಗೆಲ್ಲರಿಗೂ ತಿಳಿದಿರುವಂತೆಯೇ ರೆನೊ ಲೊಡ್ಜಿ ಬಹು ಬಳಕೆಯ ವಾಹನವು (ಎಂಪಿವಿ) ಕುಟುಂಬ ಸಮೇತ ಜಾಲಿ ರೈಡ್ ಹೊಡೆಯಲು ಪರಿಪೂರ್ಣವೆನಿಸಿದೆ. ಎರಡು ದಿನಗಳ ಸವಾರಿಯ ನಡುವೆ ಬ್ಲಾಗ್ ಅಡ್ಡಾ ವಿಶೇಷ ಟ್ವಿಟರ್ ಸ್ಪರ್ಧೆಯನ್ನು ಏರ್ಪಡಿಸಿತ್ತು. ಇದರಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ತಂಡದ ಪ್ರಧಾನ ಸಂಪಾದಕರಾದ ಜೊಬೊ ಕುರುವಿಲ್ಲಾ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ ಎಂಬುದನ್ನು ಬಹಳ ಹೆಮ್ಮೆಯಿಂದಲೇ ಹೇಳಲಿಚ್ಛಿಸುತ್ತಿದ್ದೇವೆ (ಟ್ವೀಟ್ ಚಿತ್ರಕ್ಕಾಗಿ ಕೆಳಗಡೆ ವೀಕ್ಷಿಸಿ).
ಟ್ವಿಟರ್ ನಲ್ಲಿ ರೆನೊ ಲೊಡ್ಜಿ: #LiveLodgycal
ರೆನೊ ಲೊಡ್ಜಿ - ಜಾಲಿ ರೈಡ್‌ಗೆ ಸಿದ್ಧರಾದ ಬ್ಲಾಗರ್ಸ್
ಜಾಲಿ ರೈಡ್ ಬಳಿಕ ಇದೀಗ ಪಾರ್ಟಿ ಸಮಯ
ಅತ್ಯುತ್ತಮ ಟ್ವೀಟ್ ವಿಜೇತರು - ಜೊಬೊ ಕುರುವಿಲ್ಲಾ (ಡ್ರೈವ್ ಸ್ಪಾರ್ಕ್ ಪ್ರಧಾನ ಸಂಪಾದಕರು)
ಮೊದಲ ದಿನದಲ್ಲಿ ನಡೆದ ಟ್ರೆಷರ್ ಹಂಟ್ ಸ್ಪರ್ಧೆ
ರೆನೊ ಲೊಡ್ಜಿ ಜೊತೆ ಮಳೆಯಲ್ಲಿ ಚೆಲ್ಲಾಟ
ಆಹಾ, ಹಸಿವಾಗ್ತಿದೆ ಇನ್ನೇನು ಮುಗಿಸಿಯೇ ಬಿಡ್ತೀನಿ!


Click it and Unblock the Notifications








