ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಅಗ್ಗ
ದೇಶದ ಗ್ರಾಹಕರಿಗೆ ಮಗದೊಂದು ಖುಷಿ ಸುದ್ದಿ ಬಂದಿದ್ದು, ಇಂಧನ ಬೆಲೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳಲ್ಲಿ ಕಂಡುಬಂದಿರುವ ಇಳಿಕೆಯೇ ದೇಶದಲ್ಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಡಿತಕ್ಕೆ ಕಾರಣವಾಗಿದೆ.
ಈಗ ಬಂದಿರುವ ಮಾಹಿತಿ ಪ್ರಕಾರ ಪೆಟ್ರೋಲ್ ಬೆಲೆಯಲ್ಲಿ ರು. 2.42 ರು. ಹಾಗೂ ಡೀಸೆಲ್ ಬೆಲೆಯಲ್ಲಿ ರು. 2.25 ರು.ಗಳಷ್ಟು ಇಳಿಕೆ ಕಂಡಿದೆ. ಇದನ್ನು ಭಾರತೀಯ ತೈಲ ಸಂಸ್ಥೆಗಳು ಖಚಿತಪಡಿಸಿದೆ.

2014 ಆಗಸ್ಟ್ ತಿಂಗಳ ಬಳಿಕ ಸತತ 10ನೇ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಇನ್ನೊಂದೆದೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಡೀಸೆಲ್ ಬೆಲೆ ಅನಿಯಂತ್ರಣಗೊಳಿಸಿದ ಬಳಿಕ ಆರನೇ ಬಳಿಕ ಇಳಿಕೆ ಕಂಡುಬಂದಿದೆ.
ನಿಮ್ಮ ಮಾಹಿತಿಗಾಗಿ, ಜನವರಿ 16ರಂದು ಕೊನೆಯ ಬಾರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಅನುಕ್ರಮವಾಗಿ 2.42 ರು. ಹಾಗೂ 2.25 ರು.ಗಳಷ್ಟು ಇಳಿಕೆ ಕಂಡುಬಂದಿತ್ತು.


Click it and Unblock the Notifications








