ಪೆಟ್ರೋಲ್ ಬೆಲೆ 49 ಪೈಸೆ, ಡೀಸೆಲ್ ಬೆಲೆ 1.21 ರು.ಗಳಷ್ಟು ಕಡಿತ
ಕಳೆದ ಒಂದು ತಿಂಗಳಿಂದ ಏರುಗತಿಯತ್ತ ಮುಖ ಮಾಡಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತೆ ಸ್ವಲ್ಪ ಇಳಿಕೆಯಾಗಿರುವುದು ಗ್ರಾಹಕರಲ್ಲಿ ಮಂದಹಾಸ ಮೂಡಿಸಿದೆ. ಏಷ್ಯಾ ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡುಬಂದಿರುವುದು ಶುಭಕರವಾಗಿ ಪರಿಣಮಿಸಿದೆ.
ಎಷ್ಟೆಷ್ಟು ಇಳಿಕೆ?
ಪೆಟ್ರೋಲ್ - 49 ಪೈಸೆ
ಡೀಸೆಲ್ - 1.21 ರು.

ಪಿಟಿಐ ವರದಿ ಪ್ರಕಾರ ಪೆಟ್ರೋಲ್ ಬೆಲೆಯಲ್ಲಿ 49 ಪೈಸೆ ಹಾಗೂ ಡೀಸೆಲ್ ಬೆಲೆ 1.21 ರು.ಗಳಷ್ಟು ಇಳಿಕೆ ಕಂಡುಬಂದಿದೆ. ಹೊಸ ಬೆಲೆ ನೀತಿ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಕೊನೆಯ ಬಾರಿಗೆ ಇಂಧನ ಬೆಲೆಯನ್ನು 2015 ಫೆಬ್ರವರಿ 28ರಂದು ಪರಿಷ್ಕೃತಗೊಳಿಸಲಾಗಿತ್ತು. ಅಂದು ಪೆಟ್ರೋಲ್ ಹಾಗೂ ಡೀಸೆಲ್ ಗೆ ಅನುಕ್ರಮವಾಗಿ ಪ್ರತಿ ಲೀಟರ್ ಗೆ 3.18 ರು. ಹಾಗೂ 3.09 ರು. ಗಳಷ್ಟು ಏರಿಕೆಗೊಳಿಸಲಾಗಿತ್ತು.


Click it and Unblock the Notifications








