ಪೆಟ್ರೋಲ್, ಡೀಸೆಲ್ ಬೆಲೆ ಮತ್ತಷ್ಟು ಅಗ್ಗ
ರಾಷ್ಟ್ರ ರಾಜಧಾನಿ ನವದೆಹಲಿಯನ್ನು ಹೊರತುಪಡಿಸಿ ದೇಶದಾದ್ಯಾಂತ ಇಂಧನ ಬೆಲೆಯಲ್ಲಿ ಎರಡು ರುಪಾಯಿಗಳಷ್ಟು ಇಳಿಕೆ ಕಂಡುಬಂದಿದೆ. ನೂತನ ಬೆಲೆ 2015 ಜುಲೈ 15 ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.
ಇರಾನ್ ಪರಮಾಣು ಬಿಕ್ಕಟ್ಟು ಪರಿಹಾರಗೊಂಡಿರುವ ಬೆನ್ನಲ್ಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದು ಇಂತಹದೊಂದು ಪೂರಕ ಬೆಳವಣಿಗೆಗೆ ಕಾರಣವಾಗಿದೆ. ಡಾಲರ್ ವಿರುದ್ಧ ರುಪಾಯಿ ಮೌಲ್ಯ ವೃದ್ಧಿಯಾಗಿರುವುದು ಸಹ ಧನಾತ್ಮಕ ಬೆಳವಣಿಗೆಗೆ ಸಹಕಾರಿಯಾಗಿದೆ.

ನವದೆಹಲಿಯಲ್ಲಿ ಆಡಳಿತದಲ್ಲಿರುವ ಆಮ್ ಆದ್ಮಿ ಪಕ್ಷವು (ಎಪಿಪಿ) ವ್ಯಾಟ್ ತೆರಿಗೆ ಏರಿಸಲು ನಿರ್ಧರಿಸಿರುವುದು ಕೇಂದ್ರ ಬೆಲೆ ಕಡಿತದ ನಡುವೆಯೂ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಲು ಕಾರಣವಾಗಿದೆ. ಇದರಿಂದಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಟೀಕಾಪ್ರಹಾರವನ್ನು ಎದುರಿಸುವಂತಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಅನುಕ್ರಮವಾಗಿ 73.38 ಹಾಗೂ 55.05 ರು.ಗಳಿಷ್ಟಿತ್ತು. ಈಗ ನಗರದಲ್ಲಿ ಪೆಟ್ರೋಲ್ ಬೆಲೆ 2.68 ರು. ಹಾಗೂ ಡೀಸೆಲ್ ಬೆಲೆ 2.46 ರು.ಗಳಷ್ಟು ಇಳಿಕೆಯಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.


Click it and Unblock the Notifications








