ಡಿಸೆಂಬರ್ ಸೆಲೆಬ್ರೇಷನ್ಸ್ ಆಫರ್; ರೆನೊ ಕಾರು ಖರೀದಿಗೆ ಇದೇ ಸಕಾಲ!

By Nagaraja

ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಭಾರತ ಕಾರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಪ್ರಭಾವಿ ಎನಿಸಿಕೊಂಡಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಈ ವರ್ಷಾಂತ್ಯದ ಡಿಸೆಂಬರ್ ಅವಧಿಯಲ್ಲಿ ಗ್ರಾಹಕರಿಗಾಗಿ ಅತಿ ವಿಶೇಷ ಸೆಲೆಬ್ರೇಷನ್ ಆಫರ್ ಗಳನ್ನು ಮುಂದಿಟ್ಟಿದೆ.

'ಡಿಸೆಂಬರ್ ಸೆಲೆಬ್ರೇಷನ್ಸ್' ಎಂದು ಕರೆಯಲ್ಪಡುವ ರೆನೊ ಆಫರ್ ಪಟ್ಟಿಯಿಂದ ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ಅತಿ ನೂತನ ಕ್ವಿಡ್ ಕಾರನ್ನು ಹೊರಗಿಡಲಾಗಿದೆ. ಅಂದರೆ ರೆನೊ ಕ್ವಿಡ್‌ಗೆ ಯಾವುದೇ ರೀತಿಯ ಡಿಸ್ಕೌಂಟ್ ಅಥವಾ ಆಫರ್ ಅನ್ವಯವಾಗುವುದಿಲ್ಲ.

ರೆನೊ ಡಿಸೆಂಬರ್ ಸೆಲೆಬ್ರೇಷನ್ಸ್ ಆಫರ್

ರೆನೊ ಅಧಿಕೃತ ಡೀಲರುಗಳ ಬಳಿ ತೆರಳಿ ಈ ಬಗ್ಗೆ ವಿಚಾರಿಸಿಕೊಳ್ಳಬಹುದಾಗಿದೆ. ರೆನೊ ಉತ್ಪನ್ನಗಳ ಮೇಲೆ ಗರಿಷ್ಠ ಒಂದು ಲಕ್ಷ ರು.ಗಳ ವರೆಗೆ ವಿಶೇಷ ಪ್ರಯೋಜನ ನೀಡಲಾಗುತ್ತಿದೆ. ಅದೇ ರೀತಿ ಅದೃಷ್ಟ ಗ್ರಾಹಕರಿಗೆ ದೈನಂದಿನ ಒಂದು ಲಕ್ಷ ರು.ಗಳ ವರೆಗೆ ಚಿನ್ನ ಹಾಗೂ ವಾರದಲ್ಲಿ ರೆನೊ ವಾಹನ ಗೆಲ್ಲುವ ಅವಕಾಶವಿರುತ್ತದೆ.

ರೆನೊ ಡಸ್ಟರ್ ಮೇಲೆ 81,000 ರು.ಗಳ ವರೆಗೆ ಪ್ರಯೋಜನ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ಇನ್ನು ಕೆಲವು ಆಯ್ದ ಡಸ್ಟರ್ ವೆರಿಯಂಟ್ ಗಳಿಗೆ ಹೆಚ್ಚುವರಿ 60,000 ರು.ಗಳ ಆಫರ್ ನೀಡಲಾಗುತ್ತಿದೆ.

ಅದೇ ರೀತಿ ರೆನೊ ಲೊಡ್ಜಿ ಬಹು ಬಳಕೆಯ ವಾಹನ ಖರೀದಿ ವೇಳೆಯಲ್ಲಿ 1.65 ಲಕ್ಷ ರು.ಗಳ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ. ಅಲ್ಲದೆ ಆರು ತಿಂಗಳಿಗಿಂತಲೂ ಕಡಿಮೆ ನಿರ್ಮಾಣ ಅವಧಿ ಹೊಂದಿರುವ ಲೊಡ್ಜಿ ಕಾರುಗಳ ಮೇಲೆ 1.01 ಲಕ್ಷ ರು.ಗಳ ಖಾತರಿಯ ಪ್ರಯೋಜನ ನೀಡಲಾಗುತ್ತದೆ. ಇಲ್ಲಿ ಕಾರ್ಪೋರೇಟ್/ಪಿಎಸ್‌ಯು ಸ್ಕೀಮ್ ಸಹ ಲಭ್ಯವಿರುತ್ತದೆ.

ಅಂತೆಯೇ ರೆನೊ ಕೊಲಿಯೊಸ್ ಕ್ರೀಡಾ ಬಳಕೆಯ ವಾಹನ ಖರೀದಿಯಲ್ಲಿ ಆರು ಲಕ್ಷ ರು.ಗಳ ವರೆಗಿನ ಪ್ರಯೋಜನ ನಿಮ್ಮದಾಗಲಿದೆ. ಅದೇ ರೀತಿ ಫ್ಲೂಯನ್ಸ್ ಪ್ರೀಮಿಯಂ ಸೆಡಾನ್ ಖರೀದಿಯಲ್ಲಿ 4.50 ಲಕ್ಷ ರು.ಗಳ ಆಫರ್ ನಿರೀಕ್ಷೆ ಮಾಡಬಹುದಾಗಿದೆ. ಇನ್ನು ಇದಕ್ಕೆ ಸಮಾನವಾದ ರೀತಿಯಲ್ಲಿ ಪಲ್ಸ್ ಹಾಗೂ ಸ್ಕಾಲಾ ಮಾದರಿಗಳಿಗೂ ಆಫರ್ ಗಳನ್ನು ನೀಡಲಾಗುತ್ತಿದೆ. ಈ ಎಲ್ಲ ಆಫರ್ ಗಳು 2015 ಡಿಸೆಂಬರ್ 31ರ ವರೆಗೆ ಮಾತ್ರ ಅನ್ವಯವಾಗಲಿದೆ.

More from DriveSpark

Article Published On: Monday, December 7, 2015, 17:41 [IST]
English summary
Renault Introduces December Celebration Offers In India
Read more on ರೆನೊ renault
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+