ಬಿಡುಗಡೆಗೂ ಮುಂಚಿತವಾಗಿ ರೆನೊ ಕಡ್ಜಾರ್ ಎಸ್‌ಯುವಿ ಶೋ

By Nagaraja

2015 ಜಿನೆವಾ ಮೋಟಾರು ಶೋದಲ್ಲಿ ಬಿಡುಗಡೆಯಾಗಲಿರುವ ಬಹು ಮುಖ್ಯ ಮಾದರಿಗಳಲ್ಲಿ ರೆನೊ ಕಡ್ಜಾರ್ ಒಂದಾಗಿದೆ. ಪ್ರಸ್ತುತ ಕಾರಿನ ಚಿತ್ರವನ್ನೀಗ ಬಿಡುಗಡೆ ಮುಂಚಿತವಾಗಿ ವಾಹನ ಪ್ರೇಮಿಗಳ ಮುಂದಿಡಲಾಗಿದೆ.

85ನೇ ಆವೃತ್ತಿಯ ಜಿನೆವಾ ಮೋಟಾರು ಶೋ 2015 ಮಾರ್ಚ್ 5ರಿಂದ ಆರಂಭವಾಗಲಿದೆ. ಇಲ್ಲಿ ಹೊಸ ಮಾದರಿಗಳ ಬಿಡುಗಡೆ ಜೊತೆಗೆ ಅನೇಕ ಕಾನ್ಸೆಪ್ಟ್‌ಗಳ ಪ್ರದರ್ಶನವಾಗಲಿದೆ.

Renault Kadjar

ಮೊದಲ ನೋಟದಲ್ಲಿ ರೆನೊ ಕಡ್ಜಾರ್ ಕ್ರೀಡಾ ಬಳಕೆಯ ವಾಹನ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿರುವುದು ಖಚಿತವೆನಿಸಿದೆ. ಅಲ್ಲದೆ ಜಾಗತಿಕವಾಗಿ ನಿರ್ದಿಷ್ಟ ವಾಹನ ಮಾರುಕಟ್ಟೆಗಳನ್ನಷ್ಟೇ ತಲುಪಲಿದೆ.

ಇದು ದೊಡ್ಡದಾದ ತನ್ನದೇ ವಿಶಿಷ್ಟ ಗ್ರಿಲ್ ಪಡೆದುಕೊಂಡಿದ್ದು, ಬದಿಯಲ್ಲೂ ಹೆಚ್ಚು ಆಧುನಿಕ ವಿನ್ಯಾಸ ತಂತ್ರವನ್ನು ಅನುಸರಿಸಲಾಗಿದೆ.

Renault Kadjar

ಒಟ್ಟಿನಲ್ಲಿ ಒಂದು ಸುಂದರ ಕಾರಿಗೆ ಬೇಕಾದ ಎಲ್ಲ ಅಂಶಗಳನ್ನು ಕಡ್ಜಾರ್ ಹೊಂದಿರುವುದಾಗಿ ರೆನೊ ಸ್ಪಷ್ಟಪಡಿಸಿದೆ. ಇದು 1.5 ಲೀಟರ್ ಹಾಗೂ 1.6 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇನ್ನು ಗಮನಾರ್ಹ ಸಂಗತಿಯೆಂದರೆ ಟು ವೀಲ್ ಜೊತೆಗೆ ಆಲ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಇದು ಹೊಂದಿರಲಿದೆ.
Renault Kadjar

ಬಲ್ಲ ಮೂಲಗಳ ಪ್ರಕಾರ ರೆನೊ ರೆಡ್ಜಾರ್ ಆರಂಭದಲ್ಲಿ ಚೀನಾದಲ್ಲಿ ಉತ್ಪಾದನೆಯಾಗಲಿದೆ. ಅಂಯೆಯೇ ಮುಂಬರುವ ದಿನಗಳಲ್ಲಿ ಯುರೋಪ್ ಹಾಗೂ ಆಫ್ರಿಕಾ ಖಂಡಗಳನ್ನು ತಲುಪಲಿದೆ. ಆದರೆ ಫ್ರಾನ್ಸ್ ಮೂಲದ ಕಡ್ಜಾರ್ ಭಾರತ ಮಾರುಕಟ್ಟೆ ತಲುಪಿತೇ ಎಂಬುದು ಇನ್ನು ತಿಳಿದು ಬಂದಿಲ್ಲ.

More from DriveSpark

Article Published On: Thursday, February 5, 2015, 12:21 [IST]
English summary
2015 marks the 85th edition of Geneva Motor Show and will commence on 5th of March this year. French automobile manufacturer, Renault will also be present at 2015 Geneva Motor Show. They will be launching their all new SUV, which has been christened as ‘Kadjar'. The manufacturer had recently unveiled their new SUV in Paris.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+