2 ವಾರದಲ್ಲೇ ಕ್ವಿಡ್ 25,000 ಬುಕ್ಕಿಂಗ್ಸ್; ಆಲ್ಟೊ ಪಾಡೇನು?

By Nagaraja

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆಯೆಂದೇ ಬಿಂಬಿಸಿರುವ ಅತಿ ನೂತನ ರೆನೊ ಕ್ವಿಡ್ ನಿರೀಕ್ಷೆಯಂತೆಯೇ ಬಿಡುಗಡೆಯಾದ ಬೆನ್ನಲ್ಲೇ 25,000ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಿಸಿಕೊಂಡಿದೆ.

ಕ್ವಿಡ್ ಯಶಸ್ಸಿನ ಹಿಂದಿರುವ ರಹಸ್ಯವೇನು ? ಸಂಪೂರ್ಣ ಚಾಲನಾ ವಿಮರ್ಶೆ ಓದಲು ಮರೆಯದಿರಿ

ಇದು ಮುಂದಿನ ದಿನಗಳಲ್ಲಿ ಸಣ್ಣ ಕಾರು ವಿಭಾಗದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಲಿದೆ. ಯಾಕೆಂದರೆ ಕಳೆದೊಂದು ದಶಕಗಿಂತಲೂ ಹೆಚ್ಚು ಕಾಲ ಮಾರುಕಟ್ಟೆಯಲ್ಲಿ ದೇಶದ ಅತ್ಯಂತ ಜನಪ್ರಿಯ ಮಾರುತಿ ಆಲ್ಟೊ ಕಾರಿಗೆ ಸೆಡ್ಡು ನೀಡಿರುವುದು ನಿಜಕ್ಕೂ ಆಶ್ಚರ್ಯದಾಯಕವೆನಿಸಿದೆ.

2 ವಾರದಲ್ಲೇ ಕ್ವಿಡ್ 25,000 ಬುಕ್ಕಿಂಗ್ಸ್; ಆಲ್ಟೊ ಪಾಡೇನು?

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಬಿಡುಗಡೆಯಾದ ಎರಡು ವಾರದೊಳಗೆ ರೆನೊ ಕ್ವಿಡ್ 25,000 ಬುಕ್ಕಿಂಗ್ಸ್ ಗಳನ್ನು ಗಿಟ್ಟಿಸಿಕೊಂಡಿದೆ. ಈ ಪೈಕಿ ಶೇಕಡಾ 40ಕ್ಕಿಂತಲೂ ಹೆಚ್ಚು ಮಂದಿ 28 ವಯಸ್ಸಿಗಿಂತಲೂ ಕಡಿಮೆ ಪ್ರಾಯ ವರ್ಗದವರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಇದು ನೂತನ ಕ್ವಿಡ್ ಇಂದಿನ ಯುವ ಜನಾಂಗದಲ್ಲಿ ಎಷ್ಟೊಂದು ಪರಿಣಾಮ ಬೀರಿದೆ ಎಂಬುದಕ್ಕೆ ದೃಷ್ಟಾಂತವಾಗಿದೆ.

2 ವಾರದಲ್ಲೇ ಕ್ವಿಡ್ 25,000 ಬುಕ್ಕಿಂಗ್ಸ್; ಆಲ್ಟೊ ಪಾಡೇನು?

ಮಾರುತಿ ಆಲ್ಟೊ ಜೊತೆಗೆ ಹ್ಯುಂಡೈ ಇಯಾನ್ ಮಾದರಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ರೆನೊ ಕ್ವಿಡ್ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಂಡಿತ್ತು. ಎಸ್‌ಯುವಿ ಶೈಲಿ ಹೊಂದಿರುವ ರೆನೊ ಕ್ವಿಡ್ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 2.56 ಲಕ್ಷ ರು.ಗಳಾಗಿದೆ.

ರೆನೊ ಕ್ವಿಡ್ ಹೊಸ ಕಾರು ಪುಟಕ್ಕಾಗಿ ಕ್ಲಿಕ್ಕಿಸಿ

2 ವಾರದಲ್ಲೇ ಕ್ವಿಡ್ 25,000 ಬುಕ್ಕಿಂಗ್ಸ್; ಆಲ್ಟೊ ಪಾಡೇನು?

ಬುಕ್ಕಿಂಗ್ ಸೂಕ್ಷ್ಮವಾಗಿ ಮೆಲುಕು ಹಾಕಿದಾಗ ಈಗ ದಾಖಲಾಗಿರುವ 25,000 ಬುಕ್ಕಿಂಗ್ ಗಳಲ್ಲಿ ಶೇಕಡಾ 35ರಷ್ಟು ಮಂದಿ ರಾಜ್ ಕೋಟ್, ನಾಗ್ಪುರ, ನಾಶಿಕ್, ಜಲಂಧರ್, ಲೂಧಿಯಾನಾದಂತಹ ಎರಡನೇ ಹಾಗೂ ಮೂರನೇ ಶ್ರೇಣಿಯ ನಗರಗಳಿಂದ ದಾಖಲಾಗಿದೆ. ಅಲ್ಲದೆ ಶೇಕಡಾ 15ರಷ್ಟು ಮಹಿಳಾ ಗ್ರಾಹಕರು ಕ್ವಿಡ್ ಪ್ರೀತಿ ಪಾತ್ರವಾಗಿದ್ದಾರೆ.

2 ವಾರದಲ್ಲೇ ಕ್ವಿಡ್ 25,000 ಬುಕ್ಕಿಂಗ್ಸ್; ಆಲ್ಟೊ ಪಾಡೇನು?

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಸುಮೀತ್ ಶೆನಾಯ್, "ಇಷ್ಟೊಂದು ಪ್ರಮಾಣದ ಬುಕ್ಕಿಂಗ್ ದಾಖಲಿಸಿರುವುದಕ್ಕೆ ಭಾರಿ ಹರ್ಷ ವ್ಯಕ್ತಪಡಿಸಿದ್ದು, ರೆನೊ ಕ್ವಿಡ್ ನಿಜಕ್ಕೂ ಗೇಮ್ ಚೇಂಜರ್ ಎನಿಸಿಕೊಳ್ಳಲಿದೆ ಎಂದಿದ್ದಾರೆ. ಈ ಬುಕ್ಕಿಂಗ್ ಸಂಖ್ಯೆಯು ಗ್ರಾಹಕರು ರೆನೊ ಬ್ರಾಂಡ್ ಗೆ ನೀಡಿರುವ ಮಾನ್ಯತೆಯನ್ನು ಪ್ರತಿಬಿಂಬಿಸುತ್ತಿದ್ದು, ಅತ್ಯುತ್ತಮ ಇಂಧನ ಕ್ಷಮತೆ ಹಾಗೂ ಕಡಿಮೆ ನಿರ್ವಹಣಾ ವೆಚ್ಚವು ಗ್ರಾಹಕರನ್ನು ಈ ಕಾರನ್ನು ಆಯ್ಕೆ ಮಾಡಲು ಕಾರಣವಾಗಿದೆ" ಎಂದಿದ್ದಾರೆ.

2 ವಾರದಲ್ಲೇ ಕ್ವಿಡ್ 25,000 ಬುಕ್ಕಿಂಗ್ಸ್; ಆಲ್ಟೊ ಪಾಡೇನು?

ಪ್ರಸ್ತುತ ದೇಶದೆಲ್ಲೆಡೆ 175 ಡೀಲರ್ ಶಿಪ್ ಗಳನ್ನು ಹೊಂದಿರುವ ರೆನೊ ವರ್ಷಾಂತ್ಯದೊಳಗೆ ಈ ಸಂಖ್ಯೆಯನ್ನು 210ಕ್ಕೆ ಏರಿಸುವ ಯೋಜನೆ ಹೊಂದಿದೆ. ಇದರ ಹೊರತಾಗಿ ಬುಕ್ಕಿಂಗ್ ಗಾಗಿ ರೆನೊ ಕ್ವಿಡ್ ವಿಶೇಷ ಆಂಡ್ರಾಯ್ಡ್ ಆಪ್ ಹಾಗೂ ವರ್ಚ್ಯುವಲ್ ಶೋ ರೂಂ ವೆಬ್ ಸೈಟ್ ಸಹ ತೆರೆದುಕೊಂಡಿತ್ತು. ಸಂಸ್ಥೆಯ ಪ್ರಕಾರ ಈಗಾಗಲೇ 2,30,000 ಮಂದಿ ರೆನೊ ಕ್ವಿಡ್ ಆಪ್ ಡೌನ್ ಲೋಡ್ ಮಾಡಿದ್ದಾರೆ.

2 ವಾರದಲ್ಲೇ ಕ್ವಿಡ್ 25,000 ಬುಕ್ಕಿಂಗ್ಸ್; ಆಲ್ಟೊ ಪಾಡೇನು?

ನಾಲ್ಕು ಲಕ್ಷ ರು.ಗಳೊಳಗಿನ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಿರುವ ರೆನೊ ಕ್ವಿಡ್ ಇಡೀ ಮಾರುಕಟ್ಟೆಯನ್ನೇ ಅಲುಗಾಡಿಸುವ ಸಾಮರ್ಥ್ಯ ಹೊಂದಿದೆ. ಯಾಕೆಂದರೆ ಈ ವಿಭಾಗವು ದೇಶದ ಒಟ್ಟಾರೆ ಕಾರು ಮಾರಾಟದ ಶೇಕಡಾ 25ರಷ್ಟನ್ನು ಹೊಂದಿದೆ. ಸದ್ಯ ನಂ.1 ಸ್ಥಾನದಲ್ಲಿರುವ ಮಾರುತಿ ಆಲ್ಟೊ ಮಾಸಿಕ 20,000 ಗಳಿಂದ 23,000 ಯುನಿಟ್ ಗಳಷ್ಟು ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತಿದೆ. ಇನ್ನೊಂದೆಡೆ ಇಯಾನ್ 4,000 ದಿಂದ 6000 ದಷ್ಟು ಮಾರಾಟವನ್ನು ಪಡೆದುಕೊಳ್ಳುತ್ತಿದೆ.

2 ವಾರದಲ್ಲೇ ಕ್ವಿಡ್ 25,000 ಬುಕ್ಕಿಂಗ್ಸ್; ಆಲ್ಟೊ ಪಾಡೇನು?

ರೆನೊ-ನಿಸ್ಸಾನ್ ಸಿಎಂಎಫ್-ಎ ತಳಹದಿಯಲ್ಲಿ ನಿರ್ಮಾಣವಾಗಿರುವ ಕ್ವಿಡ್ ನಿರ್ಮಾಣವನ್ನು ಚೆನ್ನೈ ಘಟಕದಲ್ಲಿ ಶೇಕಡಾ 98ರಷ್ಟನ್ನು ಸ್ಥಳೀಯವಾಗಿರಿಸಿರುವುದು ಸೆಗ್ಮೆಂಟ್ ಲೀಡರ್ ಆಲ್ಟೊಗಿಂತಲೂ 30,000 ರು.ಗಳಷ್ಟು ಹಾಗೂ ಇಯಾನ್ ಗಿಂತಲೂ 54,000 ರು.ಗಳಷ್ಟು ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲು ನೆರವಾಗಿತ್ತು.

2 ವಾರದಲ್ಲೇ ಕ್ವಿಡ್ 25,000 ಬುಕ್ಕಿಂಗ್ಸ್; ಆಲ್ಟೊ ಪಾಡೇನು?

ಇದಲ್ಲದೆ ಈ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಏಳು ಇಂಚುಗಳ ಟಚ್ ಸ್ಕ್ರೀನ್, ಮೀಡಿಯಾ ನೇವ್ ಸಿಸ್ಟಂ, ಡಿಜಿಟಲ್ ಇನ್ಸ್ಟ್ರಮೆಂಟ್ ಕ್ಲಸ್ಟರ್, ಒನ್ ಟಚ್ ಲೇನ್ ಚೇಂಚ್ ಇಂಡಿಕೇಟರ್ ಮುಂತಾದವುಗಳನ್ನು 3.53 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಗ್ರಾಹಕರಿಗೆ ಒದಗಿಸಲು ಸಾಧ್ಯವಾಗಿದೆ.

2 ವಾರದಲ್ಲೇ ಕ್ವಿಡ್ 25,000 ಬುಕ್ಕಿಂಗ್ಸ್; ಆಲ್ಟೊ ಪಾಡೇನು?

800 ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ರೆನೊ ಕ್ವಿಡ್, ದೇಶದಲ್ಲೇ ಅತ್ಯುತ್ತಮ ಇಂಧನ ಕ್ಷಮತೆಯ ಪೆಟ್ರೋಲ್ ಕಾರೆಂಬ (25.17 kmpl) ಕೀರ್ತಿಗೂ ಪಾತ್ರವಾಗಿದೆ. ಇದಲ್ಲದೆ ಬೆಸ್ಟ್ ಇನ್ ಕ್ಲಾಸ್ ಗ್ರೌಂಡ್ ಕ್ಲಿಯರನ್ಸ್ 180 ಎಂಎಂ) ಹಾಗೂ ಬೆಸ್ಟ್ ಇನ್ ಕ್ಲಾಸ್ ಢಿಕ್ಕಿ ಜಾಗವನ್ನು (300 ಲೀಟರ್) ಹೊಂದಿದೆ.

2 ವಾರದಲ್ಲೇ ಕ್ವಿಡ್ 25,000 ಬುಕ್ಕಿಂಗ್ಸ್; ಆಲ್ಟೊ ಪಾಡೇನು?

ಪ್ರಸ್ತುತ ಮಾರುಕಟ್ಟೆಯಲ್ಲಿ ಶೇಕಡಾ 5ರಷ್ಟು ಅಂದರೆ ಮುಂದಿನ ವರ್ಷಗಳಲ್ಲಿ ಒಂದು ಲಕ್ಷದಷ್ಟು ಮಾರಾಟವನ್ನು ಗುರಿಯಾಗಿರಿಸಿಕೊಂಡಿರುವ ರೆನೊ ನಿಕಟ ಭವಿಷ್ಯದಲ್ಲೇ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಜೊತೆಗೆ ಒಂದು ಲೀಟರ್ ಎಂಜಿನ್ ಆಯ್ಕೆಯನ್ನು ಒದಗಿಸುವ ಯೋಜನೆ ಹೊಂದಿದೆ.

ಇವನ್ನೂ ಓದಿ

ಅವಿಶ್ವಸನೀಯ ಬೆಲೆಯಲ್ಲಿ ರೆನೊ ಕ್ವಿಡ್ ಲಾಂಚ್; ಆಲ್ಟೊ ಸದ್ದಡಗಿತೇ?

More from DriveSpark

Article Published On: Wednesday, October 7, 2015, 9:39 [IST]
English summary
Renault Kwid's Bookings Set A New Benchmark In India, receives over 25,000 bookings within 2 weeks since launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+