ರೆನೊ ಕ್ವಿಡ್ ಬುಕ್ಕಿಂಗ್ ಪ್ರಾರಂಭ; ಆಪ್ ಮುಖಾಂತರವೂ ಬುಕ್ ಮಾಡಿ
ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕ್ವಿಡ್ ಹ್ಯಾಚ್ ಬ್ಯಾಕ್ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು ಆರಂಭಿಸಿದೆ. ಆಸಕ್ತ ಗ್ರಾಹಕರು ರೆನೊ ಬಿಡುಗಡೆ ಮಾಡಿರುವ ರೆನೊ ಕ್ವಿಡ್ ಆಡ್ರಾಂಯ್ಡ್ ಆಪ್ ಮುಖಾಂತರವೂ ಬುಕ್ ಮಾಡಿಕೊಳ್ಳಬಹುದಾಗಿದೆ.
ದೇಶದೆಲ್ಲೆಡೆ ಸ್ಥಿತಗೊಂಡಿರುವ ರೆನೊ ಡೀಲರ್ ಶಿಪ್ ಗಳಲ್ಲಿ 5,000 ರುಪಾಯಿಗಳಿಗೆ ಬುಕ್ಕಿಂಗ್ ಸ್ವೀಕರಿಸಲಾಗುತ್ತಿದೆ. ಸಿಎಂಎಫ್-ಎ ತಳಹದಿಯಲ್ಲಿ ನಿರ್ಮಾಣವಾಗಿರುವ ರೆನೊ ಕ್ವಿಡ್ ನಿಜಕ್ಕೂ ಗೇಮ್ ಚೇಂಜರ್ ಎನ್ನಲಾಗುತ್ತಿದೆ.

ಮಾರುತಿ ಆಲ್ಟೊ 800 ಹಾಗೂ ಹ್ಯುಂಡೈ ಇಯಾನ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿರುವ ರೆನೊ ಕ್ವಿಡ್ ಮೂರರಿಂದ ನಾಲ್ಕು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.
ಇದರ 799 ಸಿಸಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಯಂತ್ರಿಸಲ್ಪಡಲಿದ್ದು, 72 ಎನ್‌ಎಂ ತಿರುಗುಬಲದಲ್ಲಿ 54 ಅಶ್ವಶಕ್ತಿ ಉತ್ಪಾದಿಸಲಿದೆ. ಅಲ್ಲದೆ ಪ್ರತಿ ಲೀಟರ್ ಗೆ 25.17 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರಲಿದೆ.
ಅಂದ ಹಾಗೆ ನಾಲ್ಕು ವೆರಿಯಂಟ್ ಗಳಲ್ಲಿ ರೆನೊ ಕ್ವಿಡ್ ಬಿಡುಗಡೆಯಾಗಲಿದೆ. ಅವುಗಳೆಂದರೆ ಸ್ಟ್ಯಾಂಡರ್ಡ್, ಆರ್‌ಎಕ್ಸ್‌ಇ, ಆರ್‌ಎಕ್ಸ್ಎಲ್ ಮತ್ತು ಆರ್‌ಎಕ್ಸ್‌ಟಿ.
ಐದು ಆಕರ್ಷಕ ಬಣ್ಣಗಳು: ಫಿಯರಿ ರೆಡ್, ಐಸ್ ಕೂಲ್ ವೈಟ್, ಪ್ಲಾನೆಟ್ ಗ್ರೇ, ಮೂನ್ ಲೈಟ್ ಸಿಲ್ವರ್ ಮತ್ತು ಔಟ್ ಬ್ಯಾಗ್ ಬ್ರೋನ್ಸ್.


Click it and Unblock the Notifications








