ರೆನೊ ಲೊಡ್ಜಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 6 ಅಂಶಗಳು
ಫ್ರಾನ್ಸ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ ಲೊಡ್ಜಿ ಈಗಾಗಲೇ ಭಾರತದಲ್ಲಿ ಅನಾವರಣ ಕಂಡಿದ್ದು, ಭಾರತದಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ.
ಈ ಸಂಬಂಧ ಹೊಸ ರೆನೊ ಲೊಡ್ಜಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಅಂಶಗಳ ಬಗ್ಗೆ ನಾವಿಲ್ಲಿ ಪಟ್ಟಿ ಮಾಡಿ ಕೊಡಲಿದ್ದೇವೆ.

06. ಬಹು ಬಳಕೆಯ ವಾಹನ
ನೂತನ ರೆನೊ ಲೊಡ್ಜಿ ಮಲ್ಟಿ ಪರ್ಪಸ್ ವೆಹಿಕಲ್ ಅಥವಾ ಎಂಪಿವಿ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದು, ವಾಹನ ಪ್ರೇಮಿಗಳ ಪಾಲಿಗೆ ಹೊಸ ಅನುಭವವಾಗಲಿದೆ. ಯಾಕೆಂದರೆ ಇದೇ ಮೊದಲ ಬಾರಿಗೆ ಇದು ಭಾರತ ಪ್ರವೇಶ ಕಾಣುತ್ತಿದೆ.

05. ಬುಕ್ಕಿಂಗ್ ಆರಂಭ
ಈ ಸಂಬಂಧ ಸಂಸ್ಥೆಯು ಈಗಗಾಲೇ ಬುಕ್ಕಿಂಗ್ ಸ್ವೀಕರಿಸುತ್ತಿದೆ. ಇದಕ್ಕಾಗಿ ಗ್ರಾಹಕರು ಮುಗಂಡವಾಗಿ 50,000 ರು.ಗಳನ್ನು ಪಾವತಿಸಬೇಕಾಗುತ್ತದೆ. ಹಾಗೊಂದು ವೇಳೆ ಕಾರಣಾಂತರಗಳಿಂದಾಗಿ ನಿಮಗೆ ಕಾರು ಇಷ್ಟವಾಗದಿದ್ದಲ್ಲಿ ಸಂಸ್ಥೆಯು ದುಡ್ಡನ್ನು ಮರು ಪಾವತಿ ಮಾಡಲಿದೆ.

04. ಡಸ್ಟರ್ ಎಂಜಿನ್
ಪ್ರಸ್ತುತ ಡೀಸೆಲ್ ಎಂಜಿನ್ ನಲ್ಲಿ ಮಾತ್ರ ಲಭ್ಯವಾಗಲಿರುವ ರೆನೊ ಲೊಡ್ಜಿಯಲ್ಲಿ ಡಸ್ಟರ್ ಎಂಜಿನ್ ಬಳಕೆ ಮಾಡಲಾಗಿದೆ. ಇದರ 1.5 ಲೀಟರ್ ಎಂಜಿನ್ 83.80 ಅಥವಾ 108.45 ಅಶ್ವಶಕ್ತಿ ಉತ್ಪಾದಿಸುವ ಸಾಧ್ಯತೆಯಿದೆ. ಇನ್ನು ವೈಶಿಷ್ಟ್ಯಗಳಿಗನುಸಾರವಾಗಿ ವಿವಿಧ ವೆರಿಯಂಟ್ ಗಳು ಲಭ್ಯವಾಗಲಿದೆ.

03. ಆಸನ
ಹೊಸ ರೆನೊ ಲೊಡ್ಜಿ ಎಂಟು ಅಥವಾ ಏಳು ಸೀಟುಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು ದೈನಂದಿನ ಸಂಚಾರದ ಜೊತೆಗೆ ಕುಟುಂಬದ ಜೊತೆ ವಿಕೇಂಡ್ ಪ್ರವಾಸಕ್ಕೂ ಹೆಚ್ಚು ಸೂಕ್ತವೆನಿಸಲಿದೆ.

02. ಬೆಲೆ
ಸ್ಪರ್ಧಾತ್ಮಕ ಬೆಲೆ ಕಾಯ್ದುಕೊಳ್ಳುವ ಇರಾದೆಯನ್ನು ಫ್ರಾನ್ಸ್ ಮೂಲದ ರೆನೊ ಸಂಸ್ಥೆ ಹೊಂದಿದೆ. ಪ್ರಸ್ತುತ ಲಭ್ಯವಿರುವ ಮಾಹಿತಿಗಳ ಪ್ರಕಾರ ರೆನೊ ಲೊಡ್ಜಿ ಬೇಸ್ ಮಾಡೆಲ್ ಎಂಟು ಲಕ್ಷ ರು. ಹಾಗೂ ಟಾಪ್ ಎಂಡ್ ವೆರಿಯಂಟ್ 12 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

01. ಪ್ರತಿಸ್ಪರ್ಧಿ
ಬಹುನಿರೀಕ್ಷಿತ ರೆನೊ ಲೊಡ್ಜಿ ಮಾದರಿಯು ಎಂಪಿವಿ ವಿಭಾಗದಲ್ಲಿ ಜನಪ್ರಿಯ ಮಾರುತಿ ಎರ್ಟಿಗಾ, ಹೋಂಡಾ ಮೊಬಿಲಿಯೊ ಮುಂತಾದ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.


Click it and Unblock the Notifications








