ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ರೆನೊ

By Nagaraja

ಬೆಳೆದು ಬರುತ್ತಿರುವ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳಿಗೂ ಅಷ್ಟೇ ಬೇಡಿಕೆಯಿದೆ. ಇಂತಹದೊಂದು ಮಾರುಕಟ್ಟೆ ಸಾಧ್ಯತೆಯನ್ನು ಸೂಕ್ಷ್ಮವಾಗಿ ಗಮನಿಸಿರುವ ಫ್ರಾನ್ಸ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ, ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಮಾರಾಟ ಜಾಲವನ್ನು ಆರಂಭಿಸುವ ಯೋಜನೆಯಲ್ಲಿದೆ.

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ರೆನೊ ಬಳಕೆಯಾದ ವಾಹನಗಳ ವಿಭಾಗದತ್ತ ಕಾಲಿಡಲಿದೆ. ಎಲ್ಲವನ್ನು ವ್ಯವಸ್ಥಿತವಾಗಿ ನಡೆಸುವುದು ಡಸ್ಟರ್‌ನಂತಹ ಜನಪ್ರಿಯ ಮಾದರಿಗಳನ್ನು ದೇಶಕ್ಕೆ ಕೊಡುಗೆಯಾಗಿರುವ ನೀಡಿರುವ ರೆನೊ ಉದ್ದೇಶವಾಗಿದೆ.

renault duster

ಇದು ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವ ಅಥವಾ ಮಾರಾಟ ಮಾಡುವ ಗ್ರಾಹಕರಿಗೆ ಅತ್ಯುತ್ತಮ ವೇದಿಕೆಯೊದಗಿಸಲಿದೆ. ಈ ಮೂಲಕ ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವುದು ಸಂಸ್ಥೆಯ ಇರಾದೆಯಾಗಿದೆ.

ದೇಶದ ಮುಂಚೂಣಿಯ ಸಂಸ್ಥೆಗಳಾದ ಮಹೀಂದ್ರ ಆಂಡ್ ಮಹೀಂದ್ರ, ಮಾರುತಿ ಸುಜುಕಿ ಹಾಗೂ ಟೊಯೊಟಾ ಸಂಸ್ಥೆಗಳು ಬಳಕೆಯಾದ ವಾಹನಗಳ ವಿಭಾಗದಲ್ಲಿ ತನ್ನದೇ ಆದ ಸಾನಿಧ್ಯವನ್ನು ಹೊಂದಿದೆ. ಈಗ ರೆನೊ ಕೂಡಾ ಇಂತಹದೊಂದು ಮಾರಾಟ ಸಾಧ್ಯತೆಯನ್ನು ಮನಗಂಡಿದೆ.

ಹೊಸ ಯೋಜನೆಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡುವುದು ರೆನೊ ಗುರಿಯಾಗಿದೆ. ಇದರಲ್ಲಿ ಬ್ಯಾಂಕ್‌ ಸಹಕಾರದೊಂದಿಗೆ ಗ್ರಾಹಕರಿಗೆ ಸಾಲದ ನೆರವು ನೀಡುವಂತಹ ಯೋಜನೆಗಳು ಪರಿಗಣನೆಯಲ್ಲಿದೆ.

More from DriveSpark

Article Published On: Monday, March 9, 2015, 7:33 [IST]
English summary
French automobile manufacturer, Renault offers a few products in India. They are definitely not among the top sellers and only a few of their products are doing well. Now the manufacturer is setting up plans to enter the used vehicle business to create more presence.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+