ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಪರಿಷ್ಕತ ಇಂಧನ ಬೆಲೆ
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳೆಕೆಯಾಗಿರುವುದರಿಂದ ಭಾರತೀಯ ತೈಲ ನಿಗಮವು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳ್ನು ಇಳಿಕೆಗೊಳಿಸಿದೆ. ಹೊಸ ಬೆಲೆ ನೀತಿ ಅನ್ವಯ ಪೆಟ್ರೋಲ್ ಗೆ 2 ರು. ಹಾಗೂ ಡೀಸೆಲ್ ಗೆ 50 ಪೈಸೆ ಇಳಿಕೆ ಕಂಡುಬಂದಿದೆ.
ಪರಿಷ್ಕತ ಬೆಲೆ ಸೋಮವಾರ ಮಧ್ಯರಾತ್ರಿಯಿಂದಲೇ (ಸೆಪ್ಟೆಂಬರ್ 01) ಜಾರಿಗೆ ಬಂದಿದೆ. ಇದಕ್ಕೂ ಮೊದಲು ಆಗಸ್ಟ್ 15ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಅನುಕ್ರಮವಾಗಿ 1.27 ಹಾಗೂ 1.17 ರು.ಗಳಷ್ಟು ಇಳಿಕೆಗೊಳಿಸಿತ್ತು.

ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ 2.50 ರು.ಗಳಷ್ಟು ಇಳಿಕೆಯಾಗಿದೆ. ಇದು ಕಳೆದ ಒಂದು ತಿಂಗಳೊಳಗೆ ಸತತ ಮೂರನೇ ಬಾರಿಗೆ ಹಾಗೂ ಪೆಟ್ರೋಲ್ ಬೆಲೆಯಲ್ಲಿ ನಾಲ್ಕನೇ ಬಾರಿಗೆ ಇಳಿಕೆಯಾಗಿದೆ. ಇನ್ನೊಂದೆಡೆ ಡೀಸೆಲ್ ಬೆಲೆಯಲ್ಲಿ ಸತತವಾಗಿ ಐದನೇ ಬಾರಿಗೆ ಇಳಿಕೆ ಕಂಡುಬಂದಿದೆ.
ದೇಶದ ಪ್ರಮುಖ ನಗರಗಳ ಪರಿಷ್ಕೃತ ಬೆಲೆಗಳು ಇಂತಿದೆ
ಬೆಂಗಳೂರು
- ಪೆಟ್ರೋಲ್: 64.61 ರು.
- ಡೀಸೆಲ್: 47.02 ರು.
ದೆಹಲಿ
- ಪೆಟ್ರೋಲ್: 61.20
- ಡೀಸೆಲ್: 44.45
ಕೋಲ್ಕತ್ತಾ
- ಪೆಟ್ರೋಲ್: 66.50
- ಡೀಸೆಲ್: 48.23
ಮುಂಬೈ
- ಪೆಟ್ರೋಲ್: 66.23
- ಡೀಸೆಲ್: 49.51
ಚೆನ್ನೈ
- ಪೆಟ್ರೋಲ್: 61.46
- ಡೀಸೆಲ್: 45.56


Click it and Unblock the Notifications








