ಐದು ವರ್ಷದೊಳಗೆ 50 ಲಕ್ಷ ನೌಕರಿ ಸೃಷ್ಟಿ: ಗಡ್ಕರಿ ಉವಾಚ
ರಸ್ತೆ ಸಾರಿಗೆ ಹಾಗೂ ಹೆದ್ದಾರಿ ವಿಭಾಗದಲ್ಲಿ ಮುಂದಿನ ಐದು ವರ್ಷದೊಳಗೆ 50 ಲಕ್ಷ ಉದ್ಯೋಗ ಸೃಷ್ಟಿಯಾಗುವುದಾಗಿ ಕೇಂದ್ರ ಸಚಿವರಾಗಿರುವ ನಿತಿನ್ ಗಡ್ಕರಿ ಭರವಸೆಯ ಮಾತುಗಳನ್ನಾಡಿದ್ದಾರೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿರುವ ಗಡ್ಕರಿ, ಭಾರತೀಯ ರಸ್ತೆ ಜಾಲದ ಬದಲಾವಣೆ ಬಗ್ಗೆ ಮಾತನಾಡುತ್ತಾ, ಅಭಿವೃದ್ಧಿಯತ್ತ ಆವೇಗ ಹೆಚ್ಚಿಸುವುದಾಗಿ ತಿಳಿಸಿದರು.

ಅನೇಕ ಸಮಸ್ಯೆಗಳಿದ್ದು, ಹಲವಾರು ತೊಂದರೆಗಳಿಂದಾಗಿ ಮೂರು ಲಕ್ಷ ಕೋಟಿ ರು.ಗಳ 280ರಷ್ಟು ಯೋಜನೆಗಳು ಅರ್ಧದಲ್ಲೇ ಮೊಟಕುಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಭೂ ಸ್ವಾಧೀನ ಮಾಡುವುದು ಬಹುದೊಡ್ಡ ಸಮಸ್ಯೆಯಾಗಿ ಮಾರ್ಪಾಟ್ಟಿದೆ ಎಂದವರು ವಿವರಿಸಿದರು.
ಶಿಪ್ರ ಗತಿಯಲ್ಲಿ ಕಾಮಗಾರಿ ಪ್ರಾರಂಭ ಮಾಡುವುದಕ್ಕೆ ಸಂಬಂಧಿಸಿದಂತೆ ಆಶಾವಾದ ವ್ಯಕ್ತಪಡಿಸಿರುವ ಗಡ್ಕರಿ, ಮುಂದಿನ ನಿವ್ವಳ ದೇಶೀಯ ಉತ್ಪನ್ನದಲ್ಲಿ (ಜಿಡಿಪಿ) ತನ್ನ ಕೊಡುಗೆ ಸಲ್ಲಿಸುವುದಾಗಿ ತಿಳಿಸಿದರು.


Click it and Unblock the Notifications








