ಜಗತ್ತಿನ ಮೊತ್ತ ಮೊದಲ 7 ಸೀಟುಗಳ ಎಲೆಕ್ಟ್ರಿಕ್ ಮಿನಿವ್ಯಾನ್ ಅನಾವರಣ

By Nagaraja

ವಿದ್ಯುತ್ ಚಾಲಿತ ವಾಹನಗಳನ್ನು ತಯಾರಿಸುವುದರಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ನಿಸ್ಸಾನ್, ಈಗ ವಿಶ್ವದ ಮೊತ್ತ ಮೊದಲ ಏಳು ಸೀಟುಗಳ ಎಲೆಕ್ಟ್ರಿಕ್ ಮಿನಿವ್ಯಾನ್ ಅನ್ನು ಅನಾವರಣಗೊಳಿಸಿದೆ.

ಅದುವೇ ಇ-ಎನ್‌ವಿ200 (e-NV200),

ಮುಂಬರುವ ಜುಲೈ ತಿಂಗಳಿಂದ ಮಾರಾಟಕ್ಕೆ ಲಭ್ಯವಾಗಿರುವ ನಿಸ್ಸಾನ್ ಬಹು ಬಳಕೆಯ ವಾಹನ ಅಂದಾಜು 20 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಏಳು ಸೀಟುಗಳ ನಿಸ್ಸಾನ್ ಇ-ಎನ್‌ವಿ200 ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆಯಲು ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

ಜಗತ್ತಿನ ಮೊತ್ತ ಮೊದಲ 7 ಸೀಟುಗಳ ಎಲೆಕ್ಟ್ರಿಕ್ ಮಿನಿವ್ಯಾನ್ ಅನಾವರಣ

ಈಗಾಗಲೇ ಹೆಚ್ಚು ಜನಪ್ರಿಯತೆ ಸಾಧಿಸಿರುವ ನಿಸ್ಸಾನ್ ಲೀಫ್ ಮಾದರಿಗೆ ಸಮಾನವಾದ ಎಂಜಿನ್ ಪಡೆದುಕೊಳ್ಳಲಿರುವ ನೂತನ ಎಲೆಕ್ಟ್ರಿಕ್ ಕಾರು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿಸಿದ್ದಲ್ಲಿ 170 ಕೀ.ಮೀ.ಗಳಷ್ಟು ದೂರ ಸಂಚರಿಸಬಹುದಾಗಿದೆ.

ವೈಶಿಷ್ಟ್ಯ

ವೈಶಿಷ್ಟ್ಯ

ಇನ್ನು ರಿವರ್ಸಿಂಗ್ ಕ್ಯಾಮೆರಾ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಲೈಟ್ಸ್ ಮತ್ತು ವೈಪರ್, ಸ್ಟೀರಿಂಗ್ ವೀಲ್ ಮೌಂಟೆಡ್ ಕಂಟ್ರೋಲ್ ಹಾಗೂ ಖಾಸಗಿ ಗ್ಲಾಸ್‌ಗಳಂತಹ ವೈಶಿಷ್ಟ್ಯಗಳು ಇದರಲ್ಲಿರಲಿದೆ.

ಜಗತ್ತಿನ ಮೊತ್ತ ಮೊದಲ 7 ಸೀಟುಗಳ ಎಲೆಕ್ಟ್ರಿಕ್ ಮಿನಿವ್ಯಾನ್ ಅನಾವರಣ

870 ಲೀಟರ್ ಡಿಕ್ಕಿ ಜಾಗವನ್ನು ಹೊಂದಿರುವ ನಿಸ್ಸಾನ್ ನೂತನ ಎಲೆಕ್ಟ್ರಿಕ್ ಕಾರಿನ ಎಲ್ಲ ಸೀಟುಗಳನ್ನು ಮಡಚಿದಾದ ಬೂಟ್ ಸ್ಪೇಸ್ 2940 ಲೀಟರ್ ಗಳಿಗೆ ಏರಿಕೆಯಾಗಲಿದೆ.

ಜಗತ್ತಿನ ಮೊತ್ತ ಮೊದಲ 7 ಸೀಟುಗಳ ಎಲೆಕ್ಟ್ರಿಕ್ ಮಿನಿವ್ಯಾನ್ ಅನಾವರಣ

ಪ್ರಮುಖವಾಗಿ ಇದು ವಾಣಿಜ್ಯ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳುತ್ತಿದೆ. ವಾಣಿಜ್ಯ ಸೇರಿದಂತೆ ಕುಟುಂಬ ಹಾಗೂ ಟ್ಯಾಕ್ಸಿ ಅಗತ್ಯಗಳನ್ನು ಇದು ಪೂರೈಸಲಿದೆ. ಇದು ಮೊದಲ ಸಾಲಿನಲ್ಲಿ ಎರಡು, ಎರಡನೇ ಸಾಲಿನಲ್ಲಿ ಮೂರು ಹಾಗೂ ಹಿಂಭಾಗದಲ್ಲಿ ಎರಡು ಸೀಟುಗಳ ಆಸನ ವ್ಯವಸ್ಥೆಯನ್ನು ಪಡೆಯಲಿದೆ.

ಜಗತ್ತಿನ ಮೊತ್ತ ಮೊದಲ 7 ಸೀಟುಗಳ ಎಲೆಕ್ಟ್ರಿಕ್ ಮಿನಿವ್ಯಾನ್ ಅನಾವರಣ

ಒಟ್ಟಿನಲ್ಲಿ ನಿಸ್ಸಾನ್ ಸಂಸ್ಥೆಯು ವಿದ್ಯುತ್ ಚಾಲಿತ ವಾಹನಗಳತ್ತ ಹೆಚ್ಚೆಚ್ಚು ಒಲವು ತೋರಿಸುತ್ತಿರುವುದು ಸ್ವಾಗತಾರ್ಹವೆನಿಸಿದೆ. ಸದ್ಯಕ್ಕೆ ಈ ವಿಭಾಗದಲ್ಲಿ ನಿಸ್ಸಾನ್‌ಗೆ ಯಾವುದೇ ಪ್ರತಿಸ್ಪರ್ಧಿಗಳಿಲ್ಲ ಎಂಬುದು ಅಷ್ಟೇ ಮುಖ್ಯವೆನಿಸುತ್ತದೆ.

Article Published On: Monday, June 8, 2015, 17:23 [IST]
English summary
seven seat electric Nissan e-NV200 revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+