ಯಸ್ ಯಸ್ ಇಟಲಿಯಲ್ಲಿ ಬಲೆನೊ ವೆಬ್ ಎಸ್ ಬಿಡುಗಡೆ

By Nagaraja

ಭಾರತ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ಮಾರುತಿ ಬಲೆನೊ ನವೆಂಬರ್ ತಿಂಗಳಲ್ಲಿ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದೆ.

ಈ ನಡುವೆ ಮಾರುತಿ ಅಂಗಸಸ್ಥೆಯಾಗಿರುವ ಸುಜುಕಿ ಇಟಲಿಯಲ್ಲಿ ಬಲೆನೊ ವೆಬ್ ಎಸ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇಲ್ಲಿ ಮತ್ತಷ್ಟು ಆಸಕ್ತಿದಾಯಕ ಮಾಹಿತಿಯೆಂದರೆ ಬಲೆನೊ ಭಾರತದ ಘಟಕದಿಂದ ಆಮದಾಗುತ್ತಿದೆ.

ಸುಜುಕಿ ಬಲೆನೊ

ಬಲೆನೊ ವೆಬ್ ಎಸ್ ಆವೃತ್ತಿಯು ಇಟಲಿಯಲ್ಲಿ ಭಾರತೀಯ ರುಪಾಯಿ ಪ್ರಕಾರ 11.55 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಅಲ್ಲದೆ ಮುಂಗಡ ಬುಕ್ಕಿಂಗ್ ಸೇವೆಯನ್ನು ಇಂಟರ್ ನೆಟ್ ಮುಖಾಂತರ ಮಾತ್ರ ಕೊಡಲಾಗಿದೆ.

ಅಂತೆಯೇ ಈ ಬಹುನಿರೀಕ್ಷಿತ ವೆರಿಯಂಟ್ ಸಹ ನಿಕಟ ಭವಿಷ್ಯದಲ್ಲೇ ಭಾರತವನ್ನು ತಲುಪುವ ಸಾಧ್ಯತೆಯಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಮಾರಾಟ ಕುದುರಿಸಿಕೊಳ್ಳಲು ನೆರವಾಗಲಿದೆ.

ಮಾರುತಿ ಬಲೆನೊ ವೆಬ್ ಎಸ್ ಮಾದರಿಯು 1.0 ಲೀಟರ್ ಬೂಟರ್ ಜೆಟ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಡೈರಕ್ಟ್ ಇಂಜೆಕ್ಷನ್ ಮತ್ತು ಟರ್ಬೊ ಚಾರ್ಜರ್ ಕಂಡುಬರಲಿದೆ. ಇದರ ಎಂಜಿನ್ 170 ಎನ್ ಎಂ ತಿರುಗುಬಲದಲ್ಲಿ 112 ಅಶ್ವಶಕ್ತಿ ಉತ್ಪಾದಿಸಲಿದೆ.

ಹೊಸ ಬಣ್ಣದ ಆಯ್ಕೆ, 16 ಇಂಚುಗಳ ಅಲಾಯ್ ವೀಲ್, ರಿಯರ್ ಸ್ಪಾಯ್ಲರ್, ಫ್ರಂಟ್ ಬಂಪರ್, ಎಲ್‌ಇಡಿ ಡೇಟೈಮ್ ರನ್ನಿಂಗ್ಸ್ ಲೈಟ್ಸ್, ಎಚ್‌ಐಡಿ ಹೆಡ್ ಲ್ಯಾಂಪ್ ಮತ್ತು ಕ್ರೋಮ್ ಡೋರ್ ಹ್ಯಾಂಡಲ್, ಸ್ಪೋರ್ಟ್ ಫೂಟ್ ಪೆಡಲ್, ಬಲೆನೊ ಲೊಗೊ ಫ್ಲೋರ್ ಮ್ಯಾಟ್, ಗೇರ್ ನಾಬ್ ನಲ್ಲಿ ರೆಡ್ ಸ್ಟಿಚಿಂಗ್ ಇತ್ಯಾದಿ ವೈಶಿಷ್ಟ್ಯಗಳು ಹೊಸ ಮಾದರಿಯನ್ನು ಮತ್ತಷ್ಟು ವಿಶಿಷ್ಟವಾಗಿಸಲಿದೆ.

More from DriveSpark

Article Published On: Saturday, December 5, 2015, 14:36 [IST]
English summary
Suzuki Baleno Web S Edition Launches In Italy
Read more on ಸುಜುಕಿ suzuki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+