ಸುಜುಕಿ ಇಗ್ನಿಸ್ ಅನಾವರಣ; ನಿಕಟ ಭವಿಷ್ಯದಲ್ಲೇ ಭಾರತಕ್ಕೆ

By Nagaraja

ಬಹುನಿರೀಕ್ಷಿತ 44ನೇ ಟೋಕಿಯೋ ಮೋಟಾರು ಶೋದಲ್ಲಿ ಸುಜುಕಿ ಇಗ್ನಿಸ್ ಭರ್ಜರಿ ಅನಾವರಣಗೊಂಡಿದೆ. ಇಲ್ಲಿ ವಾಹನ ಪ್ರೇಮಿಗಳಿಗಿರುವ ಖುಷಿ ಸುದ್ದಿಯೇನೆಂದರೆ ನಿಕಟ ಭವಿಷ್ಯದಲ್ಲಿ ಇಗ್ನಿಸ್ ಭಾರತ ವಾಹನ ಮಾರುಕಟ್ಟೆಯನ್ನು ತಲುಪಲಿದೆ.

Also Read: ಪ್ಯಾರಿಸ್ ನಲ್ಲಿ ಸುಜುಕಿ ವಿಟಾರಾ ಶೋ ಮುಂದಕ್ಕೆ ಓದಿ

ನಿಮ್ಮ ಮಾಹಿತಿಗಾಗಿ, 2015 ಟೋಕಿಯೋ ಮೋಟಾರು ಶೋದಲ್ಲಿ ಮಾರುತಿ ಬಲೆನೊ ತಳಹದಿಯಲ್ಲಿ ನಿರ್ಮಾಣಗೊಂಡಿರುವ ಇಗ್ನಿಸ್ ಪ್ರದರ್ಶನ ಕಂಡಿದೆ. ಇದಕ್ಕೂ ಮೊದಲು ಜಿನೆವಾ ಮೋಟಾರು ಶೋದಲ್ಲಿ ಎಂಐ-4 ( iM-4) ಕಾನ್ಸೆಪ್ಟ್ ಕಾರನ್ನು ಸುಜುಕಿ ಪರಿಚಯಿಸಿತ್ತು.

ಸುಜುಕಿ ಇಗ್ನಿಸ್ ಅನಾವರಣ; ನಿಕಟ ಭವಿಷ್ಯದಲ್ಲೇ ಭಾರತಕ್ಕೆ

ಬಹುತೇಕ ಮುಂದಿನ ವರ್ಷ ಸುಜುಕಿ ಇಗ್ನಿಸ್ ತನ್ನ ಅಂಗಸಂಸ್ಥೆಯಾಗಿರುವ ಮಾರುತಿ ಸುಜುಕಿ ಮುಂದಾಳತ್ವದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಯೋಜನೆ ಹೊಂದಿದೆ. ಇಂದೊಂದು ಮಿನಿ ಕ್ರಾಸೋವರ್ ಆಗಿರಲಿದೆ.

ಸುಜುಕಿ ಇಗ್ನಿಸ್ ಅನಾವರಣ; ನಿಕಟ ಭವಿಷ್ಯದಲ್ಲೇ ಭಾರತಕ್ಕೆ

ಈ ಹಗುರ ಭಾರದ ಕಾಂಪಾಕ್ಟ್ ಕ್ರಾಸೋವರ್ ಶೈಲಿಯು ಹೆಚ್ಚು ಪ್ರಭಾವಿ ಎನಿಸಿಕೊಂಡಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದೆ.

ಸುಜುಕಿ ಇಗ್ನಿಸ್ ಅನಾವರಣ; ನಿಕಟ ಭವಿಷ್ಯದಲ್ಲೇ ಭಾರತಕ್ಕೆ

ಇದೇ ಸಂದರ್ಭದಲ್ಲಿ ಇಗ್ನಿಸ್ ಟ್ರೈಲ್ (Ignis trail) ಎಂಬ ಕಾಂಪಾಕ್ಟ್ ಕ್ರಾಸೋವರ್ ಆಫ್ ರೋಡ್ ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಲಾಗಿತ್ತು.

ಸುಜುಕಿ ಇಗ್ನಿಸ್ ಅನಾವರಣ; ನಿಕಟ ಭವಿಷ್ಯದಲ್ಲೇ ಭಾರತಕ್ಕೆ

ಮುಂಭಾಗದಲ್ಲಿ ಎಲ್‌ಇಡಿ ಹೆಡ್ ಲ್ಯಾಂಪ್, ಕ್ರೋಮ್ ಗ್ರಿಲ್, ಫಾಗ್ ಲ್ಯಾಂಪ್ ಹಾಗೂ ಸರಳವಾದ ಬಂಪರ್ ಕೊಡಲಾಗಿದೆ. ಇನ್ನು ಹಿಂದುಗಡೆ ಸಾಮಾನ್ಯಗಿಂತಲೂ ವಿಭಿನ್ನವಾದ ವಿನ್ಯಾಸವನ್ನು ಕಾಣಬಹುದಾಗಿದೆ.

ಸುಜುಕಿ ಇಗ್ನಿಸ್ ಅನಾವರಣ; ನಿಕಟ ಭವಿಷ್ಯದಲ್ಲೇ ಭಾರತಕ್ಕೆ

ಇನ್ನುಳಿದಂತೆ ಕಾರಿನೊಳಗೆ 3 ಸ್ಪೋಕ್ ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್, ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ಸಿಸ್ಟಂ, ಶುಭ್ರವಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇತ್ಯಾದಿ ಸೌಲಭ್ಯಗಳಿರಲಿದೆ.

ಸುಜುಕಿ ಇಗ್ನಿಸ್ ಅನಾವರಣ; ನಿಕಟ ಭವಿಷ್ಯದಲ್ಲೇ ಭಾರತಕ್ಕೆ

ಇನ್ನು ಎಂಜಿನ್ ತಾಂತ್ರಿಕತೆ ಬಗ್ಗೆ ಮಾತನಾಡುವುದಾದ್ದಲ್ಲಿ ಇತ್ತೀಚೆಗಷ್ಟೇ ಸಿಯಾಝ್ ಡೀಸೆಲ್ ಹೈಬ್ರಿಡ್ ನಲ್ಲಿ ಪರಿಚಯಿಸಿರುವುದಕ್ಕೆ ಸಮಾನವಾದ ಕ್ರಾಂತಿಕಾರಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ತಂತ್ರಜ್ಞಾನವು (ಎಸ್‌ಎಚ್‌ವಿಎಸ್) ನೂತನ ಇಗ್ನಿಸ್ ಕಾರಿನಲ್ಲಿ ಕಂಡುಬರಲಿದೆ.

ಸುಜುಕಿ ಇಗ್ನಿಸ್ ಅನಾವರಣ; ನಿಕಟ ಭವಿಷ್ಯದಲ್ಲೇ ಭಾರತಕ್ಕೆ

ಅಂತೆಯೇ 1.2 ಲೀಟರ್ ಡ್ಯುಯೆಲ್ ಜೆಟ್ ಎಂಜಿನ್ ಪ್ರಮುಖ ಆಕರ್ಷಣೆಯಾಗಲಿದ್ದು, ಸಿವಿಟಿ ಗೇರ್ ಬಾಕ್ಸ್ ಹಾಗೂ ಫೋರ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯೂ ಲಭ್ಯವಾಗಲಿದೆ.

ಸುಜುಕಿ ಇಗ್ನಿಸ್ ಅನಾವರಣ; ನಿಕಟ ಭವಿಷ್ಯದಲ್ಲೇ ಭಾರತಕ್ಕೆ

ಅಂತಿಮವಾಗಿ ನೂತನ ಸುಜುಕಿ ಇಗ್ನಿಸ್ 3700 ಎಂಎಂ ಉದ್ದ, 1660 ಎಂಎಂ ಅಗಲ ಮತ್ತು 1595 ಎಂಎಂ ಎತ್ತರವನ್ನು ಪಡೆಯಲಿದೆ. ಅಲ್ಲದೆ ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ 2016 ದೆಹಲಿ ಆಟೋ ಎಕ್ಸ್ ಪೋದಲ್ಲೂ ಭರ್ಜರಿ ಪ್ರದರ್ಶನ ಕಾಣಲಿದೆ.

ಸುಜುಕಿ ಇಗ್ನಿಸ್ ಅನಾವರಣ; ನಿಕಟ ಭವಿಷ್ಯದಲ್ಲೇ ಭಾರತಕ್ಕೆ

ನೂತನ ಸುಜುಕಿ ಇಗ್ನಿಸ್ ಭಾರತದಲ್ಲಿ ಪ್ರಮುಖವಾಗಿಯೂ ಮಹೀಂದ್ರ ಟಿಯುವಿ300, ಫೋರ್ಡ್ ಇಕೊಸ್ಪೋರ್ಟ್ ಮುಂತಾದ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

More from DriveSpark

Article Published On: Friday, October 30, 2015, 17:37 [IST]
English summary
Upcoming Suzuki Ignis (Compact SUV) Unveiled At Tokyo Motor Show
Read more on suzuki ಸುಜುಕಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+