ಸುಜುಕಿ ಕಾಂಪಾಕ್ಟ್ ಎಸ್‌ಯುವಿಗೆ 'ಇಗ್ನಿಸ್' ನಾಮಕರಣ ಸಾಧ್ಯತೆ
ಮಾರುತಿ ಅಂಗಸಂಸ್ಥೆಯಾಗಿರುವ ಜಪಾನ್ ಮೂಲದ ಸುಜುಕಿ, ಅತಿ ನೂತನ ಎಂಐ-4 ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನದ (ಎಸ್‌ಯುವಿ) ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಪ್ರಸ್ತುತ ಕಾನ್ಸೆಪ್ಟ್ ಕಾರು 'ಇಗ್ನಿಸ್' ಎಂಬ ನಾಮಕರಣ ಪಡೆಯುವ ಸಾಧ್ಯತೆಗಳಿವೆ.
ದೇಶದಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಕಂಡಬರುವುದರಿಂದ ನಾಲ್ಕು ಮೀಟರ್ ಉದ್ದ ಪರಿಧಿಯೊಳಗಿನ ಚೊಕ್ಕ ಎಸ್‌ಯುವಿಗೆ ಹೆಚ್ಚಿನ ಬೇಡಿಕೆ ಕಂಡುಬರಲಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು 2015 ಜಿನೆವಾ ಮೋಟಾರು ಶೋದಲ್ಲಿ ಸುಜುಕಿ ಸಂಸ್ಥೆಯು ಅತಿ ನೂತನ ಕ್ರೀಡಾ ಬಳಕೆಯ ವಾಹನವನ್ನು ಪ್ರದರ್ಶಿಸಿತ್ತು.

ಇಗ್ನಿಸ್ ಹೆಸರಿನ ಬಗ್ಗೆ ಆಳವಾಗಿ ಚರ್ಚಿಸುವುದಾದ್ದಲ್ಲಿ ಇದೇ ಹೆಸರಿನ ಮಾದರಿಯು 2000ನೇ ಇಸವಿಯಿಂದ 2008ರ ವರೆಗೆ ಮಾರಾಟದಲ್ಲಿತ್ತು. ಈಗ ಇದೇ ಹೆಸರನ್ನು ಹೆಸರಿಸುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿದೆ.

ಈ ಸಂಬಂಧ ಎಕ್ಸ್ ಕ್ಲೂಸಿವ್ ಚಿತ್ರವನ್ನು ತನ್ನ ಇನ್ ಸ್ಟಾಂ ಪುಟದಲ್ಲಿ ಸುಜುಕಿ ಹಾಕಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಹೊಸತಾದ ಮಿನಿ ಎಸ್ ಯುವಿ 1.0 ಲೀಟರ್ 3 ಸಿಲಿಂಡರ್ ಬೂಸ್ಟರ್ ಜೆಟ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಇದೇ ಎಂಜಿನ್ ಮುಂಬರುವ ಬಲೆನೊ ಹ್ಯಾಚ್ ಬ್ಯಾಕ್ ಕಾರಿನಲ್ಲೂ ಜೋಡಣೆಯಾಗುತ್ತಿದೆ ಎಂಬುದು ಗಮನಾರ್ಹವೆನಿಸುತ್ತದೆ.

ಇನ್ನು ಭಾರತದಲ್ಲಿ ಇಗ್ನಿಸ್ ಬಿಡುಗಡೆಯಾಗಲಿದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಅತ್ಯಧಿಕ ಸೇಲ್ಸ್ ಮತ್ತು ಸರ್ವೀಸ್ ಸೇವೆಯನ್ನು ಹೊಂದಿರುವ ಮಾರುತಿ ಮುಖಾಂತರ ಭಾರತದಲ್ಲೂ ಬಿಡುಗಡೆ ಮಾಡುವ ಯೋಜನೆಯನ್ನು ಸುಜುಕಿ ತಳ್ಳಿ ಹಾಕುವ ಸಾಧ್ಯತೆ ಕಡಿಮೆಯಾಗಿದೆ.

ನಿಮ್ಮ ಮಾಹಿತಿಗಾಗಿ ಮಾರುತಿ ಸಂಸ್ಥೆಯು ತನ್ನ ಮಾನೇಸರ್ ಘಟಕದಲ್ಲಿ ಈಗಗಾಲೇ ವೈಬಿಎ ಎಂಬ ಕೋಡ್ ಹೆಸರಿನ ಕಾಂಪಾಕ್ಟ್ ಎಸ್ ಯುವಿಯ ಅಭಿವೃದ್ಧಿಯಲ್ಲಿ ತೊಡಗಿದೆ.


Click it and Unblock the Notifications








