ನ್ಯಾನೋ ಈಸ್ ಬ್ಯಾಕ್; ಒಂದೇ ದಿನದಲ್ಲಿ 1,100 ಮಂದಿಗೆ ಹಸ್ತಾಂತರ

By Nagaraja

ಭಾರತ ವಾಹನ ಮಾರುಕಟ್ಟೆಯಲ್ಲಿ ಮಾರಾಟದ ಕುಸಿತದ ಭೀತಿ ಎದುರಿಸುತ್ತಿದ್ದ ವಿಶ್ವದ ಅತಿ ಅಗ್ಗದ ಕಾರು ಟಾಟಾ ನ್ಯಾನೋ ಭರ್ಜರಿ ಪುನರಾಗಮನ ಮಾಡಿಕೊಂಡಿದ್ದು, ಗಣೇಶ ಚತುರ್ಥಿ ಹಬ್ಬ ದಿನದಂದು 1100 ಗ್ರಾಹಕರಿಗೆ ಕೀಲಿಯನ್ನು ಹಸ್ತಾಂತರಿಸಲಾಗಿದೆ.

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್ ಕೆಲವು ಸಮಯಗಳ ಹಿಂದೆಯಷ್ಟೇ ನ್ಯಾನೋ ಎಎಂಟಿ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಈಗ ಹಬ್ಬದ ಆವೃತ್ತಿಯ ಸಂಭ್ರಮದಲ್ಲಿರುವ ಗ್ರಾಹಕರಿಗೆ ಹೊಸ ಉಡುಗೊರೆಯನ್ನು ನೀಡಿದೆ.

ಟಾಟಾ ಮೋಟಾರ್ಸ್

ಈ ಪೈಕಿ ಮಹಾರಾಷ್ಟ್ರ ರಾಜ್ಯಗಳಲ್ಲಿ ಅತಿ ಹೆಚ್ಚು ಮಾರಾಟವನ್ನು ಕಂಡಿದ್ದು, 700ರಷ್ಟು ಯುನಿಟ್ ಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಉಳಿದ 400 ನ್ಯಾನೋಗಳು ಗುಜರಾತ್, ಛತ್ತೀಸಗಡ, ಹಾಗೂ ಮಧ್ಯ ಪ್ರದೇಶ ರಾಜ್ಯಗಳಲ್ಲಿ ಮಾರಾಟವಾಗಿದೆ ಎಂದು ಸಂಸ್ಥೆಯು ತಿಳಿಸಿದೆ.

ಇದರಂತೆ ಹೇಳಿಕೆ ಕೊಟ್ಟಿರುವ ಟಾಟಾ ಮೋಟಾರ್ಸ್ ಪ್ರಯಾಣಿಕ ವಾಹನ ವಾಣಿಜ್ಯದ ರಾಷ್ಟ್ರೀಯ ಮಾರಾಟ ನಿರ್ದೇಶಕ ಅಶೇಶ್ ದಾರ್, ಈ ಹಬ್ಬದ ಆವೃತ್ತಿಯಲ್ಲಿ ನ್ಯಾನೋ ಹೊಸ ಉತ್ಸಾಹವನ್ನು ತುಂಬಿದೆ ಎಂದಿದ್ದಾರೆ.

Article Published On: Saturday, September 19, 2015, 11:12 [IST]
English summary
Tata Delivers 1,100 Vehicles In A Day, Celebrating Ganesh Chaturthi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+