ಟಾಟಾ "ಫೆಂಟಾಸ್ಟಿಕೊ ಹಂಟ್" ಬೃಹತ್ ಡಿಜಿಟಲ್ ಅಭಿಯಾನ

By Nagaraja

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಅತಿ ಶೀಘ್ರದಲ್ಲೇ "ಝಿಕಾ" ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆ ಮಾಡಲಿದ್ದು, ಈ ಸಂಬಂಧ ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ಬೃಹತ್ ಡಿಜಿಟಲ್ ಅಭಿಯಾನವನ್ನು ಆರಂಭಿಸಿದೆ.

ಟಾಟಾ ಆರಂಭಿಸಿರುವ ನೂತನ "ಫೆಂಟಾಸ್ಟಿಕೊ ಹಂಟ್" ಡಿಜಿಟಲ್ ಅಭಿಯಾನ ಮುಂಬೈ, ದೆಹಲಿ, ಕೋಲ್ಕತ್ತಾ ಹಾಗೂ ಬೆಂಗಳೂರು ನಗರಗಳಲ್ಲಿ ನಡೆಯಲಿದೆ. ಇದರಂತೆ ದೇಶದ್ಯಾಂತ ವಾಹನ ಪ್ರೇಮಿಗಳನ್ನು ಸಂಸ್ಥೆಯು ಆಹ್ವಾನಿಸುತ್ತಿದ್ದು, ನಗರದ ಸುತ್ತ ಮರೆಯಾಗಿರಿಸಿರುವ ಸುಳಿವುಗಳ ಮೂಲಕ ಹೆಸರು ಅನಾವರಣಗೊಳಿಸಬೇಕಾಗಿದೆ.

ಮುಖ್ಯಾಂಶಗಳು

ಮುಖ್ಯಾಂಶಗಳು

ಟಾಟಾ ಆರಂಭಿಸಿರುವ ನೂತನ ಡಿಜಿಟಲ್ ಅಭಿಯಾನದ ಹೆಸರು 'The #Fantastico Hunt' ಆಗಿದ್ದು, ಆಸಕ್ತರು #Fantastico ಹ್ಯಾಚ್ ಟ್ಯಾಗ್ ಬಳಸಿ ಟ್ವಿಟ್ ಮಾಡಬಹುದಾಗಿದೆ.

ಟಾಟಾ

ಮೇಲೆ ಸೂಚಿಸಲಾದ ಪ್ರತಿ ನಗರದ ಪ್ರಮುಖ ಸ್ಥಳಗಳಲ್ಲಿ ಟಾಟಾದ ಹೊಸ ಕಾರಿನ (ZICA) ಪ್ರತಿಯೊಂದು ಅಕ್ಷರವನ್ನು ಬಚ್ಚಿಡಲಾಗುತ್ತದೆ.

ಟಾಟಾ

ಟ್ವಿಟರ್ ಅಥವಾ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಅಭಿಮಾನಿಗಳ ಜೊತೆ ಸುಳಿವು ಹಾಗೂ ಜಾಗದ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು. ವಾಹನ ಪ್ರೇಮಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಹಾಗೂ ಮತ್ತಷ್ಟು ಕುತೂಹಲ ಕೆರಳಿಸುವ ನಿಟ್ಟಿನಲ್ಲಿ ಸುಳಿವುಗಳನ್ನು ಅತ್ಯಂತ ಉಪಾಯದಿಂದ ಮರೆಯಾಗಿಸಲಾಗಿದೆ.

ಟಾಟಾ

ತಮ್ಮ ನಗರದ ಹೆಸರನ್ನು ಮೊದಲು ಗೆಲ್ಲುವವರಿಗೆ ಆಕರ್ಷಕ ಉಡುಗೊರೆಯನ್ನು ನೀಡಲಾಗುವುದು. ಅಂದ ಹಾಗೆ ಟಾಟಾದ ಈ ಮಹತ್ತರ ಅಭಿಯಾವನ್ನು Wizcraft ಮತ್ತು DigitasLBi ಆಯೋಜಿಸುತ್ತಿದೆ.

ಟಾಟಾ

ಪ್ರಸ್ತುತ ಫೆಂಟಾಸ್ಟಿಕೊ ಹಂಟ್ ಅಭಿಯಾನ ನಿಜಕ್ಕೂ ವಾಹನ ಪ್ರೇಮಿಗಳಲ್ಲಿ ಆಸಕ್ತಿ ಕೆರಳಿಸಲಿದ್ದು, ನಿಮ್ಮ ಅದೃಷ್ಟ ಅಕ್ಷರದ ಹುಡುಕಾಟಕ್ಕಾಗಿ ಸುಳಿವಿನೊಂದಿಗೆ ನಗರದೆಲ್ಲೆಡೆ ಸುತ್ತಾಡಬೇಕಾಗಿದೆ. ಟಾಟಾ ಫೆಂಟಾಸ್ಟಿಕೊ ಅಭಿಯಾನ ಈಗಾಗಲೇ ಜನರಲ್ಲಿ ಚುರುಕು ಮುಟ್ಟಿಸಿದೆ.

ಟಾಟಾ

ZIppy CAr ಎಂಬ ಪದದಿಂದ ಹುಟ್ಟಿಕೊಂಡಿರುವ ಟಾಟಾದ ನೂತನ ಝಿಕಾ ಕಾರು, ಸಂಸ್ಥೆಯ ನೂತನ ಮುಖ್ಯ ಪ್ರಚಾರ ರಾಯಭಾರಿ ಫುಟ್ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿ ಜೊತೆಗಿನ #madeofgreat ಥೀಮ್ ಅಡಿಯಲ್ಲಿ ಅನಾವರಣಗೊಂಡಿದೆ.

Article Published On: Friday, December 4, 2015, 12:40 [IST]
English summary
Tata Motors launched an innovative digital and on-ground campaign to create buzz about the name of its new car – the yet-to-be launched Zica from Tata Motors.The campaign was jointly executed by Wizcraft on ground and DigitasLBi on digital and was titled 'The #Fantastico Hunt'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+