ಕಾಯುವಿಕೆ ಅಂತ್ಯ; ನಾಳೆ ಟಾಟಾ ಬೋಲ್ಟ್ ರಸ್ತೆಗೆ
ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಮಗದೊಂದು ಆಕರ್ಷಕ ಮಾದರಿಯನ್ನು ದೇಶದಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಅದುವೇ ಟಾಟಾ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರು.
ಟಾಟಾ ಬೋಲ್ಟ್: ಕಂಪ್ಲೀಟ್ ಬಾಡಿ ಸ್ಕ್ಯಾನಿಂಗ್
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಬೋಲ್ಟ್ ಸಣ್ಣ ಹ್ಯಾಚ್‌ಬ್ಯಾಕ್ ಕಾರು ಜನವರಿ 22 ಗುರುವಾರದಂದು ದೇಶದ್ಯಾಂತ ಭರ್ಜರಿ ಬಿಡುಗಡೆ ಕಾಣಲಿದೆ.

ಜೆಸ್ಟ್ ಕಾಂಪಾಕ್ಟ್ ಸೆಡಾನ್ ಯಶಸ್ಸಿನ ಬಳಿಕ ಅದೇ ಹೊರಿಝೋನೆಕ್ಸ್ಟ್ ಸಿದ್ಧಾಂತದಲ್ಲಿ ರೂಪುಗೊಂಡಿರುವ ಟಾಟಾ ಬೋಲ್ಟ್ ಅತಿ ಹೆಚ್ಚು ನಿರೀಕ್ಷೆಗೆ ಕಾರಣವಾಗಿದೆ. ಇದು ಟಾಟಾದ ಮೇಲಿರುವ ಟಾಕ್ಸಿ ಕಾರೆಂಬ ಕಪ್ಪು ಪಟ್ಟಿಯನ್ನು ಸಂಪೂರ್ಣವಾಗಿ ತೊಳೆದು ಹಾಕಲಿದೆ ಎಂಬುದು ಅಭಿಮಾನಿಗಳ ನಂಬಿಕೆ.
ಎಎಂಟಿ ಜಲಕ್...
ಇನ್ನು ಕುತೂಹಲಕಾರಿ ವಿಷಯವೆಂದರೆ ಹೊಸ ಬೋಲ್ಟ್ ಕಾರಿನಲ್ಲೂ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ತಂತ್ರಜ್ಞಾನವನ್ನು ಆಳವಡಿಸಲಾಗಿದೆ. ಇದು ಸುಲಭ ಚಾಲನೆಯ ಜೊತೆಗೆ ಗರಿಷ್ಠ ಇಂಧನ ಕ್ಷಮತೆ ನೀಡಲು ಸಕ್ಷಮವಾಗಲಿದೆ.
ಇದು ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಆಗಮನವಾಗಲಿದೆ. ಇದರಲ್ಲಿ ಆಳವಡಿಸಲಾಗಿರುವ ಹೊಸತಾದ 1.2 ಲೀಟರ್ ರೆವೊಟ್ರಾನ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ 89 ಅಶ್ವಶಕ್ತಿ (140 ಎನ್‌ಎಂ ಟಾರ್ಕ್) ಉತ್ಪಾದಿಸಲಿದ್ದು, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ. ಅದೇ ರೀತಿ ಡೀಸೆಲ್ 1248 ಸಿಸಿ 4 ಸಿಲಿಂಡರ್, ಟರ್ಬೊ ಇಂಟರ್ ಕೂಲ್ಡ್ ಎಂಜಿನ್ ಇರಲಿದೆ.
ಇನ್ನು ಗಮನಾರ್ಹ ಸಂಗತಿಯೆಂದರೆ ಇದೇ ಮೊದಲ ಬಾರಿಗೆ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಮಲ್ಟಿ ಡ್ರೈವ್ ಆಯ್ಕೆಯನ್ನು ನೀಡಲಾಗುತ್ತದೆ. ಅಂದರೆ ಇದು ಸ್ಪೋರ್ಟ್, ಇಕೊ ಹಾಗೂ ಸಿಟಿ ಚಾಲನಾ ವಿಧಗಳನ್ನು ಪಡೆಯಲಿದೆ. ಒಟ್ಟಿನಲ್ಲಿ ಹೊಸ ಬೋಲ್ಟ್ ಕಾರು 3.90 ಲಕ್ಷ ರು.ಗಳಿಂದ 4.20 ರು.ಗಳ ಅಂದಾಜು ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications