ಪ್ರತಿಸ್ಪರ್ಧಿಗಳನ್ನು ಸದೆಬಡಿಯಲು ಟಾಟಾ ರಣತಂತ್ರ; ಏನು ಗೊತ್ತಾ?
ದೇಶದ ಅತಿ ದೊಡ್ಡ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಪ್ರತಿಸ್ಪರ್ಧಿಗಳನ್ನು ಮಣಿಸಲು ರಣತಂತ್ರವೊಂದನ್ನು ರೂಪಿಸುತ್ತಿದೆ. ಅದೇನು ಗೊತ್ತಾ? ಹೌದು, ವಾಣಿಜ್ಯ ವಿಭಾಗದಲ್ಲಿ ಅತಿ ದೊಡ್ಡ ವ್ಯಾಪಾರ ವಲಯವನ್ನು ಹೊಂದಿರುವ ಟಾಟಾ ಸಂಸ್ಥೆಯೀಗ ಉಪಯುಕ್ತತೆ ವಾಹನಗಳತ್ತ ಕೈ ಚಾಚಲು ನಿರ್ಧರಿಸಿದೆ.
ಮುಂಬರುವ ವರ್ಷಗಳಲ್ಲಿ ಬರೋಬ್ಬರಿ ಆರು ಹೊಸ ಉಪಯುಕ್ತ ವಾಹನಗಳನ್ನು ಬಿಡುಗಡೆ ಮಾಡುವುದು ಟಾಟಾ ಗುರಿಯಾಗಿದೆ. ಹಿಂದೆಂದಿಗಿಂತಲೂ ವ್ಯತಿರಿಕ್ತವಾಗಿ ತನ್ನ ವಾಹನಗಳ ಗುಣಮಟ್ಟತೆಯನ್ನು ಕಾಯ್ದುಕೊಳ್ಳಲು ಟಾಟಾ ವಿಶೇಷವಾಗಿಯೂ ಗಮನ ಹರಿಸಲಿದೆ.

ಈ ಎಲ್ಲದರ ಮೂಲಕ ಪ್ರತಿಸ್ಪರ್ಧಿಗಳ ವಿರುದ್ಧ ರಣತಂತ್ರ ಹೆಣೆಯುತ್ತಿದೆ. ಇದಕ್ಕಾಗಿ ಸಂಸ್ಥೆಯು ತನ್ನ ಅಧೀನತೆಯಲ್ಲಿರುವ ಜಾಗ್ವಾರ್ ಲ್ಯಾಂಡ್ ರೋವರ್ ನೆರವನ್ನು ಪಡೆಯಲಿದೆ. ಈ ಅರ್ಧ ಡಜನ್ ಗಳಷ್ಟು ಉಪಯುಕ್ತ ವಾಹನಗಳು ಮುಂಬರುವ ಮೂರರಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಮಾರುಕಟ್ಟೆಯನ್ನು ತಲುಪಲಿದೆ.
ದೇಶಕ್ಕೆ ಕ್ರೀಡಾ ಬಳಕೆಯ ವಾಹನವನ್ನು ಪರಿಚಯಿಸಿರುವ ಮೊದಲ ದೇಶೀಯ ಸಂಸ್ಥೆಯಾಗಿರುವ ಟಾಟಾ, ಎಲ್ಲ ವಿಭಾಗದ ವಾಹನ ಖರೀದಿಗಾರರನ್ನು ಗುರಿ ಮಾಡಲಿದೆ. ಬಲ್ಲ ಮೂಲಗಳ ಪ್ರಕಾರ ಎಂಟರಿಂದ ಒಂಬತ್ತು ವಾಹನಗಳು ಟಾಟಾ ಸಾಲಿನಲ್ಲಿ ಕಾಣಿಸಿಕೊಳ್ಳಲಿದೆ.

ಟಾಟಾದ ಕೆಲವು ಬಹುನಿರೀಕ್ಷಿತ ವಾಹನಗಳು ಇಂತಿದೆ:
- ಪ್ರೀಮಿಯಂ ಕ್ರಾಸೋವರ್ - ಈಗಲ್ ಅಥವಾ ಹೆಕ್ಸಾ - 2016 (ನಿರೀಕ್ಷಿತ ಲಾಂಚ್)
- ಸಬ್ 4 ಮೀಟರ್ ಎಸ್ ಯುವಿ - ಎಕ್ಸ್104 ಅಥವಾ ನೆಕ್ಸನ್ - 2016 (ನಿರೀಕ್ಷಿತ ಲಾಂಚ್)
- ಎಸ್ ಯುವಿ - ರಾಪ್ಟರ್ ಅಥವಾ ಎಕ್ಸ್601 - 2016 (ನಿರೀಕ್ಷಿತ ಲಾಂಚ್)
- ಪ್ರೀಮಿಯಂ ಎಸ್ ಯುವಿ (ಟಾಟಾ-ಜಾಗ್ವಾರ್ ಲ್ಯಾಂಡ್ ರೋವರ್ ಯೋಜನೆ) - ಕ್ಯೂ501 ಮತ್ತು ಕ್ಯೂ502 - 2017 (ನಿರೀಕ್ಷಿತ ಲಾಂಚ್)
ಒಟ್ಟಾರೆಯಾಗಿ ಟಾಟಾ ಉತ್ಪನ್ನಗಳು ಭಾರತದಲ್ಲಿ ಮಗದೊಮ್ಮೆ ಸ್ವದೇಶಿ ವಾಹನ ಪ್ರೇಮಿಗಳ ಮನ ಸೆಳೆಯಲು ಹೊರಟಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ.


Click it and Unblock the Notifications








