ಪ್ರಸಕ್ತ ಸಾಲಿನಲ್ಲೇ ಟಾಟಾ ಹೆಕ್ಸಾ ಬಿಡುಗಡೆ?

By Nagaraja

ಪ್ರಸಕ್ತ ಸಾಲಿನ ಮೊದಲಾರ್ಧದಲ್ಲಿ ಜಿನೆವಾದಲ್ಲಿ ನಡೆದ ವಾಹನ ಪ್ರದರ್ಶನ ಮೇಳದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಟಾಟಾ ಹೆಕ್ಸಾ ಪ್ರಸಕ್ತ ಸಾಲಿನಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಜಾಸಿಯಾಗಿದೆ.

ಈ ಸಂಬಂಧ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಆರು ಸೀಟುಗಳ ಈ ಪ್ರೀಮಿಯಂ ಕ್ರಾಸೋವರ್ ಕಾರಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ.

ಪ್ರಸಕ್ತ ಸಾಲಿನಲ್ಲೇ ಟಾಟಾ ಹೆಕ್ಸಾ ಬಿಡುಗಡೆ ಸಾಧ್ಯತೆ

ಹೊರಿಝೋನೆಕ್ಸ್ಟ್ ಸಿದ್ಧಾಂತದಡಿಯಲ್ಲಿ ನೂತನ ಹೆಕ್ಸಾ ಮಾದರಿಯಲ್ಲಿ ಸಂಸ್ಥೆಯ ನೂತನ ಡಿಸೈನ್ ನೆಕ್ಸ್ಟ್, ಡ್ರೈವ್ ನೆಕ್ಸ್ಟ್ ಹಾಗೂ ಕನೆಕ್ಟ್ ನೆಕ್ಸ್ಟ್ ತಂತ್ರಗಾರಿಕೆಯನ್ನು ಪಾಲಿಸಲಿದೆ.

ಪ್ರಸಕ್ತ ಸಾಲಿನಲ್ಲೇ ಟಾಟಾ ಹೆಕ್ಸಾ ಬಿಡುಗಡೆ ಸಾಧ್ಯತೆ

ಟಾಟಾ ಆರಿಯಾ ತಳಹದಿಯಲ್ಲಿ ನಿರ್ಮಾಣವಾಗಲಿರುವ ನೂತನ ಕಾರು ಅನಿಯಮಿತ ನಿರ್ವಹಣೆಯನ್ನು ಒದಗಿಸಲಿದೆ. ಇದರಲ್ಲಿ ಆಧುನಿಕ ಕಾರುಗಳ ಸಂಕೇತವಾಗಿ ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್ ಕೂಡಾ ಇರಲಿದೆ.

ಪ್ರಸಕ್ತ ಸಾಲಿನಲ್ಲೇ ಟಾಟಾ ಹೆಕ್ಸಾ ಬಿಡುಗಡೆ ಸಾಧ್ಯತೆ

ಇನ್ನು ಆಕ್ರಮಣಕಾರಿ ವಿನ್ಯಾಸಕ್ಕೆ ಹೆಚ್ಚಿನ ಒತ್ತು ಕೊಡಲಾಗುವುದು. ಹೊಸ ಬಂಪರ್, ಹಿಂದುಗಡೆಯೂ ಎಲ್ ಇಡಿ ಲ್ಯಾಂಪ್ ಹಾಗೂ 19 ಇಂಚಿನ ಅಲಾಯ್ ವೀಲ್ ಗಳು ಕಂಡುಬರಲಿದೆ.

ಪ್ರಸಕ್ತ ಸಾಲಿನಲ್ಲೇ ಟಾಟಾ ಹೆಕ್ಸಾ ಬಿಡುಗಡೆ ಸಾಧ್ಯತೆ

ಹೊಸ ಟಾಟಾ ಕಾರಿನಲ್ಲಿ ಆರಿಯಾಗೆ ಸಮಾನವಾದ 2.2 ಲೀಟರ್ ಫೋರ್ ಸಿಲಿಂಡರ್ ವ್ಯಾರಿಕೋರ್ ಡೀಸೆಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಇದು 154 ಅಶ್ವಶಕ್ತಿ (400 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಆಯಾಮ

ಆಯಾಮ

4764 ಎಂಎಂ ಉದ್ದ,

1895 ಎಂಎಂ ಅಗಲ,

2850 ಎಂಎಂ ಚಕ್ರಾಂತರ

ಪ್ರಸಕ್ತ ಸಾಲಿನಲ್ಲೇ ಟಾಟಾ ಹೆಕ್ಸಾ ಬಿಡುಗಡೆ ಸಾಧ್ಯತೆ

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಹೊಸ ಟಾಟಾ ಹೆಕ್ಸಾ ಕಾರು 6 ಸ್ಪೀಡ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯುವ ಸಾಧ್ಯತೆಯಿದೆ. ಇದನ್ನು ಜನರಲ್ ಮೋಟಾರ್ಸ್ ಮಾಲಿಕತ್ವದ ಜನರಲ್ ಮೋಟಾರ್ಸ್ ಪವರ್ ಟ್ರೈನ್ (ಜಿಎಂಪಿಟಿ) ನಿಂದ ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ.


Article Published On: Friday, June 5, 2015, 5:06 [IST]
English summary
Tata Motors to launch Hexa crossover in India later this year
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+