ಟಾಟಾ ಸಫಾರಿ ಸ್ಟ್ರೋಮ್ ವಿಎಕ್ಸ್ ವೆರಿಯಂಟ್ ಬಿಡುಗಡೆ
ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ತನ್ನ ಜನಪ್ರಿಯ ಸಫಾರಿ ಸ್ಟ್ರೋಮ್ ಕ್ರೀಡಾ ಬಳಕೆಯ ವಾಹನದ ಹೊಸ ವಿಎಕ್ಸ್ ಮಾದರಿಯನ್ನು ಬಿಡುಗಡೆಮ ಮಾಡಿದೆ. ಇದು ವ್ಯಾರಿಕೋರ್ 400 (VARICOR 400) ಎಂಬ ಹೆಸರಿನಿಂದ ಗುರುತಿಸಿಕೊಳ್ಳಲಿದೆ.
ಚಾಲನಾ ಆಯ್ಕೆಗಳು: 4X2 ಮತ್ತು 4X4
ಇವೆಲ್ಲದರ ಜೊತೆಗೆ ಅನೇಕ ಹೊಸ ವೈಶಿಷ್ಟ್ಯಗಳು, ಸುರಕ್ಷತೆ, ನಿರ್ವಹಣೆ ಹಾಗೂ ಗರಿಷ್ಠ ಇಂಧನ ಸಫಾರಿ ಸ್ಟ್ರೋಮ್ ವ್ಯಾರಿಕೋರ್ 400 ವೆರಿಯಂಟ್ ಪಡೆದುಕೊಳ್ಳಲಿದೆ. ಈ ಬಗೆಗಿನ ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಸಫಾರಿ ಸ್ಟ್ರೋಮ್ ವಿಎಕ್ಸ್ (4X2): 13.25 ಲಕ್ಷ ರು.
ಸಫಾರಿ ಸ್ಟ್ರೋಮ್ ವಿಎಕ್ಸ್ (4X4): 14.59 ಲಕ್ಷ ರು.

ಎಂಜಿನ್ ತಾಂತ್ರಿಕತೆ
ನೂತನ ಸಂಫಾರಿ ಸ್ಟ್ರೋಮ್ ವಿಎಕ್ಸ್ ಮಾದರಿಯು 2.2 ಲೀಟರ್ ಟರ್ಬೊ ಚಾರ್ಜ್ಡ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ವೆರಿಯಬಲ್ ಟರ್ಬೈನ್ ಟೆಕ್ನಾಲಜಿಯಿಂದ (ವಿಟಿಟಿ) ಕೂಡಿರಲಿದೆ. ಇದು 400 ಎನ್ ಎಂ ತಿರುಗುಬಲದಲ್ಲಿ 153.86 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಚಾಲನಾ ವ್ಯವಸ್ಥೆ
ಈಗಾಗಲೇ ತಿಳಿಸಿರುವಂತೆಯೇ 4X2 ಮತ್ತು 4X4 ಚಾಲನಾ ವ್ಯವಸ್ಥೆಯೊಂದಿಗೆ ಆಗಮನವಾಗಲಿರುವ ನೂತನ ಟಾಟಾ ಸಫಾರಿ ಸ್ಟ್ರೋಮ್ ವಿಎಎಕ್ಸ್ ಮಾದರಿಯು ಎಲೆಕ್ಟ್ರಾನಿಕ್ ಶಿಫ್ಟ್ ಆನ್ ಫ್ಲೈ (ಇಎಸ್‌ಒಎಫ್) ಜೊತೆ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

ಭದ್ರತೆ
- ಡ್ಯುಯಲ್ ಎಸ್‌ಆರ್‌ಎಸ್ ಏರ್ ಬ್ಯಾಗ್,
- ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್),
- ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ (ಇಬಿಡಿ),
- ಬಾಗುವ ಸ್ಟಿರೀಂಗ್ ವ್ಯವಸ್ಥೆ,

ಕಾರಿನೊಳಗೆ ಎಲ್ಲ ಹೊಸತನದ ಜಾವಾ ಬ್ಲ್ಯಾಕ್ ಕಪ್ಪು ವರ್ಣದ ಥೀಮ್ ಲಗತ್ತಿಸಲಾಗಿದೆ. ಇದರ ಹೊರತಾಗಿ ಡ್ಯಾಶ್ ಬೋರ್ಡ್ ಮತ್ತು ಡೋರ್ ಹ್ಯಾಂಡಲ್ ನಲ್ಲಿ ವಾರ್ಮ್ ಸಿಲ್ವರ್ ಸ್ಪರ್ಶತೆಯನ್ನು ನೀಡಲಾಗಿದೆ. ಇನ್ನು ಎಸ್‌ಯುವಿಗೆ ತಕ್ಕ ಸೀಟು, ಹರ್ಮಾನ್ ಕನೆಕ್ಟ್ ನೆಕ್ಸ್ಟ್ ಇನ್ಪೋಟೈನ್ಮೆಂಟ್ ಸಿಸ್ಟಂ ಮತ್ತು ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ಇದರಲ್ಲಿರಲಿದೆ.

ಅಂದ ಹಾಗೆ ಐದು ಬಣ್ಣಗಳ ಆಯ್ಕೆಯಲ್ಲಿ ಟಾಟಾ ಸಫಾರಿ ಸ್ಟ್ರೋಮ್ ವ್ಯಾರಿಕೋರ್ 400 ಮಾದರಿಯು ಲಭ್ಯವಿರಲಿದೆ. ಅವುಗಳೆಂದರೆ ಆರ್ಕಟಿಕ್ ಸಿಲ್ವರ್, ಆಸ್ಟೆರ್ನ್ ಬ್ಲ್ಯಾಕ್, ಆರ್ಕಟಿಕ್ ವೈಟ್ ಅರ್ಬನ್ ಬ್ರಾನ್ಜ್ ಮತ್ತು ಪಿಯರ್ಲ್ ವೈಟ್.

ಇವೆಲ್ಲದರ ಜೊತೆಗೆ ಮೂರು ವರ್ಷಗಳ ಅಥವಾ ಒಂದು ಲಕ್ಷ ಕೀ.ಮೀ.ಗಳ ವಾರಂಟಿಯನ್ನು ನೀಡಲಾಗುತ್ತಿದೆ.


Click it and Unblock the Notifications