ಟಾಟಾ ಜೆಸ್ಟ್, ಬೋಲ್ಟ್ ಮಾರಾಟ ಇಳಿಕೆ

By Nagaraja

ಸಂಸ್ಥೆಯ ಎಲ್ಲ ಹೊಸತನದ ಹೊರಿಝೋನೆಕ್ಸ್ಟ್ ಸಿದ್ಧಾಂತದ ಅಡಿಯಲ್ಲಿ ನೂತನ ಜೆಸ್ಟ್ ಹಾಗೂ ಬೋಲ್ಟ್ ಮಾದರಿಗಳನ್ನು ದೇಶದ ಅತಿ ದೊಡ್ಡ ಟಾಟಾ ಮೋಟಾರ್ಸ್ ಸಂಸ್ಥೆಯು ಪರಿಚಯಿಸಿತ್ತು. ಆದರೆ ಅದ್ಯಾಕೋ ಸಮಯ ಸರಿಯಿಲ್ಲ ಅನ್ನಿಸುತ್ತಿದೆ. ಟಾಟಾ ಸಂಸ್ಥೆಯ ಈ ಜನಪ್ರಿಯ ಮಾದರಿಗಳ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ.

ಬೋಲ್ಟ್ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಟಾಟಾಗೆ ಉತ್ತಮ ಹೆಸರು ಮಾಡಿದ್ದರೆ ಜೆಸ್ಟ್ ಒಂದು ಕಾಂಪಾಕ್ಟ್ ಸೆಡಾನ್ ಕಾರಾಗಿದೆ. ಇದು ನೇರವಾಗಿ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಮಾದರಿಗೆ ಪ್ರತಿಸ್ಪರ್ದಿಯಾಗಿದೆ.

tata

2015 ಎಪ್ರಿಲ್ ತಿಂಗಳಲ್ಲಿ ಜೆಸ್ಟ್ ಹಾಗೂ ಬೋಲ್ಟ್ ಸೇರಿಕೊಂಡು 2,622 ಯುನಿಟ್ ಮಾರಾಟ ಕಂಡುಕೊಂಡಿದೆ. ಈ ಪೈಕಿ ಕಾಂಪಾಕ್ಟ್ ಸೆಡಾನ್ ಕಾರು 1,989 ಯುನಿಟ್ ಗಳಷ್ಟು ಮಾರಾಟವಾಗಿದ್ದರೆ ಬೋಲ್ಟ್ 633 ಯುನಿಟ್ ಗಳಷ್ಟು ಮಾರಾಟ ಕಂಡುಕೊಳ್ಳುವಲ್ಲಿ ಸಾಧ್ಯವಾಗಿತ್ತು. 2014ರಲ್ಲಿ ಸರಾಸರಿ 3,500 ಯುನಿಟ್ ಗಳಷ್ಟು ಮಾರಾಟ ಕಂಡುಕೊಂಡಿದ್ದ ಜೆಸ್ಟ್ ಮಾರಾಟದಲ್ಲಿ ಗಣನೀಯ ಕುಸಿತವಾಗಿದೆ.

ಮುಂಬರುವ ಫೋರ್ಡ್ ಆಸ್ಪೈರ್ ಪ್ರಚಾರವು ಟಾಟಾ ಜನಪ್ರಿಯ ಮಾದರಿಗಳ ಮಾರಾಟಕ್ಕೆ ಧಕ್ಕೆಯನ್ನುಂಟು ಮಾಡುತ್ತಿದೆ ಎಂಬುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ನಡುವೆ ಇನ್ನಷ್ಟು ವಿನೂತನ ನೀತಿಗಳೊಂದಿಗೆ ಮುಂದೆ ಬರುವ ಯೋಜನೆ ಹೊಂದಿರುವ ಟಾಟಾ ಸಂಸ್ಥೆಯು ಮಾರಾಟಕ್ಕೆ ಉತ್ತೇಜನ ನೀಡುವ ಪ್ರಯತ್ನದಲ್ಲಿದೆ.

Article Published On: Saturday, May 16, 2015, 14:33 [IST]
English summary
Tata Motors have recently launched two very interesting products in Indian market. Zest was their first offering, which was followed by the launch of Bolt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+