ಟಾಟಾ ಜೆಸ್ಟ್ ವಾರ್ಷಿಕ ಆವೃತ್ತಿ ಬಿಡುಗಡೆ
ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಟಾಟಾ ಜೆಸ್ಟ್ ಪ್ರಸ್ತುತ ಒಂದು ವಸಂತಗಳ ಸಂಭ್ರಮದಲ್ಲಿದ್ದು, ಈ ಸಂಬಂಧ ಸಂಭ್ರಮಾಚರಣೆಗಾಗಿ ವಿಶೇಷ ವಾರ್ಷಿಕ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಎಕ್ಸ್ ಎಂಎಸ್ ಪೆಟ್ರೋಲ್: 5.89 ಲಕ್ಷ ರು.
ಎಕ್ಸ್ ಎಂಎಸ್ ಡೀಸೆಲ್: 6.94 ಲಕ್ಷ ರು.

ಈ ಬಗ್ಗೆ ಪ್ರಕಟಣೆ ಹೊರಟಿಸಿರುವ ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್, ಮುಂದಿನ ಹಬ್ಬದ ಆವೃತ್ತಿಯ ವೇಳೆ ವಾಹನ ಪ್ರೇಮಿಗಳಲ್ಲಿ ಮತ್ತಷ್ಟು ಸಂತಸವನ್ನು ತರಲಿದೆ ಎಂದಿದೆ.
10 ಆಕರ್ಷಕ ವೈಶಿಷ್ಟ್ಯಗಳು
ಹೊರಮೈ
1. ಹೊಸ ಹೊರಮೈ ಬಣ್ಣ - ವೋಕಲ್ ವೈಟ್
2. ವಾರ್ಷಿಕ ಥೀಮ್ ನ ಬಾಡಿ ಗ್ರಾಫಿಕ್ಸ್
3. ಸಿ ಪಿಲ್ಲರ್ ನಲ್ಲಿ ವಾರ್ಷಿಕ ಆವೃತ್ತಿಯ ಲಾಂಛನ
4. ಹೊಸ ವೀಲ್ ಕವರ್
5. ಪಿಯಾನೊ ಬ್ಲ್ಯಾಕ್ ಹೊರಗಿನ ರಿಯರ್ ವ್ಯೂ ಮಿರರ್
6. ಮುಂಭಾಗದಲ್ಲಿ ದೇಹ ಬಣ್ಣದ ಬಂಪರ್
ಒಳಮೈ
7. ಮೊದಲ ಸಾಲಿನ ಸೀಟಿನಲ್ಲಿ ವಾರ್ಷಿಕ ಸ್ಪರ್ಶ,
8. ಸ್ಕಫ್ ಪ್ಲೇಟ್
9. ರಿಮೋಟ್ ನಿಯಂತ್ರಿತ ರಿಯರ್ ಕರ್ಟೈನ್
10. ಬಾಟಲಿ ಹೋಲ್ಡರ್

ಪ್ರಸ್ತುತ ಟಾಟಾ ಜೆಸ್ಟ್ ಎಕ್ಸ್ ಎಂಎಸ್ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್ ಗಳಲ್ಲಿ ಮಾತ್ರ ಲಭ್ಯವಾಗಲಿದೆ. ನಿಮ್ಮ ಮಾಹಿತಿಗಾಗಿ ಕಳೆದ ವರ್ಷ (2014) ಆಗಸ್ಟ್ ತಿಂಗಳಲ್ಲಿ ಎಲ್ಲ ಹೊಸತನದ ಹೊರಿಝೋನೆಕ್ಸ್ಟ್ ಸಿದ್ಧಾಂತದ ಅಡಿಯಲ್ಲಿ ಜೆಸ್ಟ್ ಕಾರು ಮಾರುಕಟ್ಟೆಯನ್ನು ತಲುಪಿತ್ತು.


Click it and Unblock the Notifications








