ಟಾಟಾ ಜೆಸ್ಟ್‌ಗೆ ನಿರೀಕ್ಷಿಸಿದಷ್ಟು ಮಾರಾಟವಿಲ್ಲವೇ?

By Nagaraja

ಟಾಟಾ ಜೆಸ್ಟ್ - ಎಲ್ಲ ಹೊಸತದೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದ ಒಂದು ಉತ್ತಮ ಟಾಟಾ ಕಾರಾಗಿದೆ. ಎಲ್ಲ ಹೊಸತನದ ಹೊರಿಝೋನೆಕ್ಸ್ಟ್ ಸಿದ್ದಾಂತದೊಂದಿದೆ ಟಾಟಾ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಮಾರುಕಟ್ಟೆಗೆ ಪರಿಚಯವಾಗಿತ್ತು.

ಈ ನಡುವೆ ಟಾಟಾ ಜೆಸ್ಟ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಅತಿ ಹೆಚ್ಚು ಸುದ್ದಿಗೆ ಗ್ರಾಸವಾಗಿತ್ತು. ಇವೆಲ್ಲವೂ ಒಂದೆಡೆಯಾದರೆ ಟಾಟಾ ಜೆಸ್ಟ್ ನಿರೀಕ್ಷಿದಷ್ಟು ಮಾರಾಟ ಸಾಧಿಸಲು ಯಶಸ್ವಿಯಾಗುತ್ತಿಲ್ಲವೇ ಎಂಬುದು ಚಿಂತೆಗೆ ಕಾರಣವಾಗಿದೆ.

Tata Zest

ಮಾರುಕಟ್ಟೆಯಲ್ಲಿ ಭದ್ರ ನೆಲೆಯೂರಿರುವ ಮಾರುತಿ ಸುಜುಕಿ ಡಿಜೈರ್‌ಗೆ ಹೋಲಿಸಿದರೆ ಜೆಸ್ಟ್ ಹಿಂದೆ ಬಿದ್ದಿದೆ ಎಂದರೆ ತಪ್ಪಾಗಲಾರದು. ಗ್ರಾಹಕರಲ್ಲಿ ಇನ್ನು ಮರೆ ಮಾಚದೇ ಇರುವ ಟ್ಯಾಕ್ಸಿ ಕಾರೆಂಬ ಹಣೆಪಟ್ಟಿಯು ಟಾಟಾ ಕಾರುಗಳಿಗೆ ಕಗ್ಗಂಟ್ಟಾಗಿ ಪರಿಣಮಿಸಿದೆಯೇ ಎಂಬ ಭೀತಿ ಕಾಡುತ್ತಿದೆ.

ಇನ್ನೊಂದೆಡೆ ಇದೇ ವಿಭಾಗದಲ್ಲಿ ಹ್ಯುಂಡೈ ಎಕ್ಸ್‌ಸೆಂಟ್ ಹಾಗೂ ಹೋಂಡಾ ಅಮೇಜ್ ಸವಾಲನ್ನು ಹಿಮ್ಮೆಟ್ಟಿಸಲು ಟಾಟಾ ಜೆಸ್ಟ್ ವಿಫಲವಾಗುತ್ತಿದೆ ಎಂಬದನ್ನು ನಾವು ಒಪ್ಪಿಕೊಳ್ಳಲೇಬೇಕಾಗುತ್ತದೆ. 2014 ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಅಮೇಜ್ ಹಿಂದಿಕ್ಕಿದ ಜೆಸ್ಟ್ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಮತ್ತೆ ಹಿಂದೆ ಬಿದ್ದಿದೆ.

ಕೆಲವು ಮಾರಾಟ ಅಂಕಿಂಶಗಳು ಇಂತಿದೆ (ಯುನಿಟ್‌ಗಳಲ್ಲಿ)

2014 ನವೆಂಬರ್

ಸ್ವಿಫ್ಟ್ ಡಿಜೈರ್ - 14,000
ಅಮೇಜ್ - 3,310
ಎಕ್ಸ್‌ಸೆಂಟ್ - 3,899
ಜೆಸ್ಟ್ - 3,835

2014 ಡಿಸೆಂಬರ್

ಸ್ವಿಫ್ಟ್ ಡಿಜೈರ್ - 17,000
ಅಮೇಜ್ - 5,176
ಎಕ್ಸ್‌ಸೆಂಟ್ - 3,204
ಜೆಸ್ಟ್ - 3,056

2015 ಜನವರಿ

ಸ್ವಿಫ್ಟ್ ಡಿಜೈರ್ - 19,000
ಅಮೇಜ್ - 6,704
ಎಕ್ಸ್‌ಸೆಂಟ್ - 4,110
ಜೆಸ್ಟ್ - 2,757

Most Read Articles

Kannada
English summary
Tata Zest Is Not Selling As Expected?
Story first published: Monday, February 16, 2015, 18:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X