ಸ್ವಿಫ್ಟ್ ಡಿಜೈರ್ ಹಿಮ್ಮೆಟಿಸಿತೇ ಫಿಗೊ ಆಸ್ಪೈರ್? ಇಲ್ಲಿದೆ 10 ಕಾರಣಗಳು

By Nagaraja

ಅಮೆರಿಕದ ಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್, ಅತಿ ನೂತನ ಫಿಗೊ ಆಸ್ಪೈರ್ ಕಾಂಪಾಕ್ಟ್ ಸೆಡಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಮಾಡಿದೆ. ಪ್ರಮುಖವಾಗಿಯೂ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಮಾರುತಿಯ ಸ್ವಿಫ್ಟ್ ಡಿಜೈರ್ ಆವೃತ್ತಿಗೆ ನೇರ ಪ್ರತಿಸ್ಪರ್ಧಿಯಾಗಲಿರುವ ನೂತನ ಫೋರ್ಡ್ ಫಿಗೊ ಆಸ್ಪೈರ್ ಈ ಜನಪ್ರಿಯ ಆವೃತ್ತಿಯನ್ನು ಹಿಮ್ಮೆಟಿಸಿತೇ ಎಂಬುದು ಬಹಳ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಈ ನಿಟ್ಟಿನಲ್ಲಿ ನೂತನ ಫೋರ್ಡ್ ಫಿಗೊ ಆಸ್ಪೈರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ 10 ಅಂಶಗಳ ಬಗ್ಗೆ ಇಲ್ಲಿ ಪಟ್ಟಿ ಮಾಡಿ ಕೊಡಲಿದ್ದೇವೆ. ಇದಕ್ಕಾಗಿ ಚಿತ್ರ ಪುಟದತ್ತ ಮುಂದುವರಿಯಿರಿ...

10. ಗುಜರಾತ್ ನಲ್ಲಿ ನಿರ್ಮಾಣ

10. ಗುಜರಾತ್ ನಲ್ಲಿ ನಿರ್ಮಾಣ

ಫೋರ್ಡ್ ಸಂಸ್ಥೆ ಹೊಸದಾಗಿ ತೆರೆದುಕೊಂಡಿರುವ ಗುಜರಾತ್‌ನ ಸನಂದ್ ಘಟಕದಲ್ಲಿ ಫೋರ್ಡ್ ಫಿಗೊ ಆಸ್ಪೈರ್ ನಿರ್ಮಾಣವಾಗಲಿದೆ. ಇದು ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ಫೋರ್ಡ್‌ಗೆ ನೆರವಾಗಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಲ್ಲಿಂದಲೇ ವಿದೇಶಕ್ಕೂ ರಫ್ತು ಪ್ರಕ್ರಿಯೆ ಕಂಡುಬರಲಿದೆ.

09. ನಾಲ್ಕು ಮೀಟರ್ ಮ್ಯಾಜಿಕ್

09. ನಾಲ್ಕು ಮೀಟರ್ ಮ್ಯಾಜಿಕ್

ನೂತನ ಫೋರ್ಡ್ ಫಿಗೊ ಆಸ್ಪೈರ್ ಸಬ್ ಫೋರ್ ಮೀಟರ್ ಕಾರಾಗಿರಲಿದ್ದು, ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಸಹಕಾರಿಯಾಗಲಿದೆ.

08. 4 ವೆರಿಯಂಟ್, 3 ಎಂಜಿನ್, 7 ಬಣ್ಣಗಳು

08. 4 ವೆರಿಯಂಟ್, 3 ಎಂಜಿನ್, 7 ಬಣ್ಣಗಳು

ಫೋರ್ಡ್ ಫಿಗೊ ಆಸ್ಪೈರ್ ಆಂಬಿಯಂಟ್, ಟ್ರೆಂಡ್, ಟೈಟಾನಿಯಂ ಮತ್ತು ಟೈಟಾನಿಯಂ ಪ್ಲಸ್‌ಗಳೆಂಬ ನಾಲ್ಕು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಮೂರು ಎಂಜಿನ್ ಮತ್ತು ಏಳು ಬಣ್ಣಗಳ ಆಯ್ಕೆಯು ಇದರಲ್ಲಿರುತ್ತದೆ.

07. ಎಂಜಿನ್

07. ಎಂಜಿನ್

1.2 ಟಿಐ-ವಿಸಿಟಿ (87bhp) ಮತ್ತು 1.5 ಟಿಐ-ವಿಸಿಟಿ (110bhp) ಪೆಟ್ರೋಲ್ ಮತ್ತು 1.5 ಟಿಐ-ಟಿಸಿಡಿಐ ಡೀಸೆಲ್ ಎಂಜಿನ್ (99bhp)

ಬಣ್ಣಗಳು: ರುಬಿ ರೆಡ್, ಟುಕ್ಸೆಡೊ ಬ್ಲ್ಯಾಕ್, ಡೀಪ್ ಇಂಪಾಕ್ಟ್ ಬ್ಲೂ, ಇಂಗಾಟ್ ಸಿಲ್ವರ್, ಸ್ಪಾರ್ಕ್ಲಿಂಗ್ ಗೋಲ್ಡ್, ಓಕ್ಸ್‌ಫರ್ಡ್ ವೈಟ್, ಸ್ಪೋಕ್ ಗ್ರೇ,

06. ಸ್ಟ್ಯಾಂಡರ್ಡ್ ಚಾಲಕ ಮತ್ತು ಪ್ರಯಾಣಿಕ ಏರ್ ಬ್ಯಾಗ್

06. ಸ್ಟ್ಯಾಂಡರ್ಡ್ ಚಾಲಕ ಮತ್ತು ಪ್ರಯಾಣಿಕ ಏರ್ ಬ್ಯಾಗ್

ಇತರ ಪ್ರತಿಸ್ಪರ್ಧಿಗಳನ್ನು ಹೋಲಿಸಿದಾಗ ಫೋರ್ಡ್ ಕಾರಲ್ಲಿ ಕಂಡುಬಂದಿರುವ ಗಮನಾರ್ಹ ವೈಶಿಷ್ಟ್ಯವೆಂದರೆ ಚಾಲಕ ಹಾಗೂ ಪ್ರಯಾಣಿಕ ಬದಿಯಲ್ಲಿ ಸ್ಟ್ಯಾಂಡರ್ಡ್ ಏರ್ ಬ್ಯಾಗ್ ಸೌಲಭ್ಯ ದೊರಕಲಿದೆ. ಅಲ್ಲದೆ ಸೆಗ್ಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ಬದಿ ಹಾಗೂ ಕರ್ಟೈನ್ ಸೇರಿದಂತೆ ಆರು ಏರ್ ಸೌಲಭ್ಯಗಳೂ ಇರಲಿದೆ.

05. ಲೆಥರ್ ಸೀಟು, ಹೊಂದಾಣಿಸಬಹುದಾದ ಹೆಡ್ ರೆಸ್ಟ್

05. ಲೆಥರ್ ಸೀಟು, ಹೊಂದಾಣಿಸಬಹುದಾದ ಹೆಡ್ ರೆಸ್ಟ್

ಇನ್ನುಳಿದಂತೆ ಲೆಥರ್ ಸೀಟು ಹಾಗೂ ಹೊಂದಾಣಿಸಬಹುದಾದ ಹೆಡ್ ರೆಸ್ಟ್ ಇವೆಲ್ಲವೂ ಹೊಸ ಫೋರ್ಡ್ ಫಿಗೊ ಕಾರನ್ನು ಮುಂಚೂಣಿಯಲ್ಲಿ ಗುರುತಿಸುವಂತೆ ಮಾಡಲಿದೆ. ಅಲ್ಲದೆ 20 ಸ್ಮಾರ್ಟ್ ಸ್ಟೋರೆಜ್ ಜಾಗ ಮತ್ತು ಅನೂಕೂಲಕರ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.

04. ಮೈಲೇಜ್

04. ಮೈಲೇಜ್

ಮೈಲೇಜ್ ಬಗ್ಗೆಯೂ ವಿಶೇಷವಾಗಿ ಹೇಳಬೇಕಾಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಎರಡೂ ಪರಿಣಾಮಕಾರಿ ಇಂಧನ ಕ್ಷಮತೆ ಕಾಪಾಡಿಕೊಂಡಿದೆ.

ಪೆಟ್ರೋಲ್

18.2 Km/L

ಡೀಸೆಲ್

25.8 Km/L

03. ಸ್ಮಾರ್ಟ್ ತಂತ್ರಜ್ಞಾನ

03. ಸ್ಮಾರ್ಟ್ ತಂತ್ರಜ್ಞಾನ

ಫೋರ್ಡ್ ಇಕೊಸ್ಪೋರ್ಟ್ ಮುಖಾಂತರ ನಾವೀನ್ಯ ತಂತ್ರಗಾರಿಕೆಗೆ ಹೆಸರು ಮಾಡಿರುವ ನೂತನ ಫಿಗೊ ಆಸ್ಪೈರ್ ಕಾರಿನಲ್ಲೂ ಎಮರ್ಜನ್ಸಿ ಅಸಿಸ್ಟ್ ಸೇವೆ ಲಭ್ಯವಾಗಲಿದೆ. ಸೆಗ್ಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ಆಪ್ ಲಿಂಕ್ (AppLink) ಜೊತೆಗೆ ಮೈ ಫೋರ್ಡ್ ಡಾಕ್ (MyFord Dock ) ಮತ್ತು ಸಿಂಕ್ (SYNC) ವಿಶಿಷ್ಟತೆಗಳು ಕಂಡುಬರಲಿದ್ದು, ನಿಮ್ಮ ಕಾರು ಸಂಪೂರ್ಣ ಡಿಜಿಟಲ್‌ಮಯವಾಗಲಿದೆ.

02. ಆಟೋಮ್ಯಾಟಿಕ್ ವೆರಿಯಂಟ್

02. ಆಟೋಮ್ಯಾಟಿಕ್ ವೆರಿಯಂಟ್

ವಿಶೇಷವೆಂದರೆ ಫೋರ್ಡ್ ಫಿಗೊ ಆಸ್ಪೈರ್ ಕಾರು ಆಟೋಮ್ಯಾಟಿಕ್ ವೆರಿಯಂಟ್ ನಲ್ಲೂ ಲಭ್ಯವಿರುತ್ತದೆ. ಇದು 1.5 ಲೀಟರ್ ಟಿಐ-ವಿಸಿಟಿ (112 PS) ಟೈಟಾನಿಯಂ ವೆರಿಯಂಟ್ ನಲ್ಲಿ ಲಭ್ಯವಿರಲಿದ್ದು, 7.79 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇದರಲ್ಲಿ ಸಿಕ್ಸ್ ಸ್ಪೀಡ್ ಪವರ್ ಶಿಫ್ಟ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರುತ್ತದೆ.

ಮೈಲೇಜ್ 17.2 Km/L

01. ಸ್ಪರ್ಧಾತ್ಮಕ ಬೆಲೆ

01. ಸ್ಪರ್ಧಾತ್ಮಕ ಬೆಲೆ

ಪ್ರಾರಂಭಿಕ ಬೆಲೆ 4.89 ಲಕ್ಷ ರುಪಾಯಿಗಳನ್ನು ಹೊಂದಿರುವ ಫೋರ್ಡ್ ಫಿಗೊ ಆಸ್ಪೈರ್ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಂಡಿದೆ. ಉಳಿದಂತೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ, ಹೆಚ್ಚು ಸ್ಥಳಾವಕಾಶ, ನೇವಿಗೇಷನ್ ಸಿಸ್ಟಂ, ಎಲೆಕ್ಟ್ರಾನಿಕ್ ಪವರ್ ಅಸಿಸ್ಟಡ್ ಸ್ಟಿರಿಂಗ್ (EPAS) ಇವೆಲ್ಲವೂ ಮುಂದಿನ ದಿಗಳಲ್ಲಿ ಸ್ವಿಫ್ಟ್ ಡಿಜೈರ್ ಗೆ ನಿಕಟ ಪೈಪೋಟಿ ಒಡ್ಡಲು ನೆರವಾಗಲಿದೆ.


More from DriveSpark

Article Published On: Wednesday, August 12, 2015, 17:07 [IST]
English summary
10 things to know about All New Ford Figo Aspire
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+