ಫ್ರಾಂಕ್‌ಫರ್ಟ್‌ನಲ್ಲಿ ಕಂಗೊಳಿಸಿದ ನ್ಯೂ ಫಿಯೆಟ್ 500
ಜರ್ಮನಿಯಲ್ಲಿ ಸಾಗುತ್ತಿರುವ 66ನೇ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ನಿರೀಕ್ಷೆಯಂತೆಯೇ ಇಟಲಿ ಮೂಲದ ಐಕಾನಿಕ್ ಸಂಸ್ಥೆಯಾಗಿರುವ ಫಿಯೆಟ್ ಪರಿಷ್ಕೃತ 500 ಮಾದರಿಯನ್ನು ಅನಾವರಣಗೊಳಿಸಿದೆ.
ನ್ಯೂ ಫಿಯೆಟ್ 500 ನೆರೆದಿದ್ದ ವಾಹನ ಪ್ರೇಕ್ಷಕರನ್ನು ರಂಜಿಸಿದ್ದಷ್ಟೇ ಅಲ್ಲದೆ ವಿಶ್ಲೇಷಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ನೂತನ ಕಾರಿನಲ್ಲಿ ಹೆಚ್ಚಿನ ಕಸ್ಟಮೈಸ್ಡ್ (ಮಾರ್ಪಾಡುಗೊಳಿಸುವುದು) ಆಯ್ಕೆ ನೀಡಿರುವುದು ಗಮನಾರ್ಹವೆನಿಸಿದೆ.

ಕಳೆದ ಎಂಟು ವರ್ಷಗಳಿಂದ ಫಿಯೆಟ್ 500 ಮಾರಾಟದಲ್ಲಿದ್ದು, ಈಗ ಹೊಸ ಸ್ವರೂಪವನ್ನು ಪಡೆದುಕೊಂಡಿದೆ.

ಫಿಯೆಟ್ ತನ್ನ ಅಪ್ಪಟ ಸಿಟಿ ಕಾರಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ಹೊರ ತಂದಿದೆ.

ಹೊಸ ಹೊಸ ಗ್ರಾಫಿಕ್ಸ್ ಆಯ್ಕೆಗಳನ್ನು ನೀವಿಲ್ಲಿ ನೋಡಬಹುದಾಗಿದ್ದು, ಹೆಡ್ ಲೈಟ್, ಲೈಟ್ ಲೈಟ್ ಹೆಚ್ಚು ಪರಿಣಾಮಕಾರಿಯೆನಿಸಿಕೊಂಡಿದೆ.

ಅಂತೆಯೇ 15 ಹಾಗೂ 16 ಇಂಚುಗಳ ಅಲಾಯ್ ವೀಲ್ ವಿನ್ಯಾಸವನ್ನು ನೀಡಲಾಗಿದೆ.

ಇನ್ನುಳಿದಂತೆ ಗ್ಲ್ಯಾಮ್ ಕೋರಲ್ ಮತ್ತು ಅವಂತ್ ಗ್ರೇಡ್ ಬೋರ್ಡ್ ಆಕ್ಸ್ (ಕಪ್ಪು-ಹಳದಿ, ಕಪ್ಪು-ಕೆಂಪು) ದೇಹ ಬಣ್ಣಗಳು ಇದರ ವೈಶಿಷ್ಟ್ಯವಾಗಿರಿದೆ.

ಕಾರಿನೊಳಗೆ ಐದು ಇಂಚುಗಳ ಟಚ್ ಸ್ಕ್ರೀನ್ ಪರದೆ, ಹೊಸ ಹೋದಿಕೆ, ಸೆಂಟರ್ ಕನ್ಸೋಲ್ ಮುಂತಾದ ವೈಶಿಷ್ಟ್ಯಗಳಿರಲಿದೆ.

ನ್ಯೂ ಫಿಯೆಟ್ 500 ಕಾರಿನಡಿಯಲ್ಲಿರುವ 1.2 ಲೀಟರ್ ಎಂಜಿನ್ 69 ಅಶ್ವಶಕ್ತಿ ಉತ್ಪಾದಿಸಲಿದೆ. ಮಗದೊಂಡು 0.9 ಟ್ವಿನ್ ಏರ್ ಎಂಜಿನ್ 85 ಹಾಗೂ 105 ಅಶ್ವಶಕ್ತಿಗಳನ್ನು ಉತ್ಪಾದಿಸಲಿದೆ.

ಇವೆಲ್ಲದರ ಜೊತೆಗೆ ಪರಿಸರ ಸ್ನೇಹಿ 1.2 ಲೀಟರ್ ಇಕೊ ಎಂಜಿನ್ ಆಳವಡಿಸುವ ಯೋಜನೆಯನ್ನು ಫಿಯೆಟ್ ಹೊಂದಿದೆ.

ಇನ್ನುಳಿದಂತೆ ಡೀಸೆಲ್ ಕಾರು ಪ್ರೇಮಿಗಳಿಗಾಗಿ 1.3 ಲೀಟರ್ ಮಲ್ಟಿ ಜೆಟ್ II ಎಂಜಿನ್ ಆಯ್ಕೆಯಿದ್ದು, 95 ಅಶ್ವಶಕ್ತಿ ಉತ್ಪಾದಿಸಲಿದೆ.


Click it and Unblock the Notifications








