2015ರಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟ ಅಗ್ರ 10 ಕಾರುಗಳು
ಹಿಂದೆಲ್ಲ ಗ್ರಾಹಕರು ಕಾರು ಖರೀದಿಗಾಗಿ ಡೀಲರ್ ನಂಬರ್ ಹುಡುಕುತ್ತಾ ಪೇಚಾಡಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ. ಇಂಟರ್ ನೆಟ್ ಹವಾ ದೇಶದೆಲ್ಲಡೆ ವ್ಯಾಪಿಸುತ್ತಿದೆ. ನಮ್ಮ ಡ್ರೈವ್ ಸ್ಪಾರ್ಕ್ ನಲ್ಲೂ ಹೊಸ ಕಾರು ಶೋಧನೆಗಾಗಿ ವಿಶೇಷ ಪುಟವನ್ನು ಹಂಚಿಕೊಳ್ಳಲಾಗಿದೆ.
Also Read: 2015ರಲ್ಲಿ ಬಿಡುಗಡೆಯಾದ ಟಾಪ್ 10 ಕಾರುಗಳು
ಹೀಗೆ ನಮ್ಮ ಡ್ರೈವ್ ಸ್ಪಾರ್ಕ್ ವೆಬ್ ಸೈಟ್ ನಲ್ಲಿ ಅತಿ ಹೆಚ್ಚು ಶೋಧಿಸಲ್ಪಟ್ಟಿರುವ ಅಗ್ರ 10 ಕಾರುಗಳ ಬಗ್ಗೆ ನಾವಿಲ್ಲಿ ಮಾಹಿತಿ ಕೊಡುವ ಪ್ರಯತ್ನ ಮಾಡಲಿದ್ದೇವೆ. ಇಲ್ಲಿ ಗ್ರಾಹಕರ ಅಭಿರುಚಿಯನ್ನು ಓದುಗರು ಮನಗಾಣಬಹುದಾಗಿದೆ.

10. ಮಾರುತಿ ಸುಜುಕಿ ಅಲ್ಟೊ 800
ದೇಶದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವ ಕಾರುಗಳಲ್ಲಿ ಒಂದಾಗಿರುವ ಮಾರುತಿ ಆಲ್ಟೊ 800 ಅತಿ ಹೆಚ್ಚು ಶೋಧಿಸಲ್ಪಟ್ಟ ಕಾರುಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

09. ಮಾರುತಿ ಸುಜುಕಿ ಎರ್ಟಿಗಾ
ಹೋಂಡಾ ಮೊಬಿಲಿಯೊ ಹಾಗೂ ರೆನೊ ಲೊಡ್ಜಿ ಜೊತೆ ಪೈಪೋಟಿಯನ್ನು ಒಡ್ಡುತ್ತಿರುವ ಮಾರುತಿ ಸುಜುಕಿ ಎರ್ಟಿಗಾ ಬಹು ಬಳಕೆಯ ವಾಹನ ವಿಭಾಗದಲ್ಲಿ ತನ್ನ ಛಾಪನ್ನು ಮೂಡಿಸಿದೆ. ಇದೇ ಕಾರಣಕ್ಕಾಗಿ ವಾಹನ ಪ್ರೇಮಿಗಳ ಮೆಚ್ಚುಗೆಗೂ ಪಾತ್ರವಾಗುತ್ತಿದೆ.

08. ಹ್ಯುಂಡೈ ಗ್ರಾಂಡ್ ಐ10
ಹ್ಯುಂಡೈ ಐ10 ಹಾಗೂ ಎಲೈಟ್ ಐ20 ಕಾರುಗಳ ಮಧ್ಯೆ ಕಾಣಿಸಿಕೊಂಡಿರುವ ಗ್ರಾಂಡ್ ಐ10 ಹ್ಯಾಚ್ ಬ್ಯಾಕ್ ಖರೀದಿಗಾರರ ಪಾಲಿಗೆ ಈಗಲೂ ನೆಚ್ಚಿನ ಕಾರೆನಿಸಿಕೊಂಡಿದೆ. ಅತ್ಯುತ್ತಮ ನಿರ್ಮಾಣ ಗುಣಮಟ್ಟತೆ ಹ್ಯುಂಡೈ ಪಾಲಿಗೆ ಸದಾ ವರದಾನವಾಗಿ ಪರಿಣಮಿಸಿದೆ.

07. ಹ್ಯುಂಡೈ ಇಯಾನ್
ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಕಾರಾಗಿರುವ ಇಯಾನ್, ನೇರವಾಗಿ ಆಲ್ಟೊ ಹಾಗೂ ಇದೀಗಷ್ಟೇ ಬಿಡುಗಡೆಗೊಂಡಿರುವ ರೆನೊ ಕ್ವಿಡ್ ಕಾರುಗಳಿಗೆ ಪೈಪೋಟಿಯನ್ನು ಒಡ್ಡುತ್ತಿದೆ. ಹಾಗಿದ್ದರೂ ತನ್ನ ಬೇಡಿಕೆ ಕುಗ್ಗದಂತೆ ನೋಡಿಕೊಂಡಿರುವುದು ಶ್ಲಾಘನೀಯವೇ ಸರಿ.

06. ಹೋಂಡಾ ಸಿಟಿ
ಮಧ್ಯಮ ಗಾತ್ರದ ಸೆಡಾನ್ ಕಾರು ವಿಭಾಗದಲ್ಲಿ ಹೊಸತನಕ್ಕೆ ಕಾರಣವಾಗಿರುವ ಹೋಂಡಾ ಸಿಟಿ ನೇರವಾಗಿ ಮಾರುತಿ ಸುಜುಕಿ ಸಿಯಾಝ್ ಸವಾಲನ್ನು ಎದುರಿಸುತ್ತಿದೆ.

05. ಮಾರುತಿ ಸುಜುಕಿ ಸೆಲೆರಿಯೊ
ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಆಯ್ಕೆಯಲ್ಲೂ ಲಭ್ಯವಿರುವ ಮಾರುತಿ ಸುಜುಕಿ ಸೆಲೆರಿಯೊ ನಗರ ಪ್ರಯಾಣಿಕರಿಗೆ ಅದ್ಭುತ ಚಾಲನಾ ಅನುಭವ ನೀಡುವಲ್ಲಿ ಯಶ ಕಂಡಿದೆ.

04. ಟೊಯೊಟಾ ಇನ್ನೋವಾ
ದೇಶದ ಯಶಸ್ವಿ ಕಾರುಗಳಲ್ಲಿ ಟೊಯೊಟಾ ಇನ್ನೋವಾ ಒಂದಾಗಿದೆ. ದೊಡ್ಡ ಕುಟುಂಬ ಹೊಂದಿದವರಿಗೆ ಈ ಮಲ್ಟಿ ಪರ್ಪಸ್ ಗಾಡಿ ಆರಾಮದಾಯಕ ಹಾಗೂ ಅನುಕೂಲಕರ ಪ್ರಯಾಣದ ಅನುಭವವನ್ನು ನೀಡುತ್ತದೆ.

03. ಮಹೀಂದ್ರ ಸ್ಕಾರ್ಪಿಯೊ
ಕೆಲವು ಸಮಯಗಳ ಹಿಂದೆಯಷ್ಟೇ ಹೊಸ ಸ್ವರೂಪವನ್ನು ಪಡೆದುಕೊಂಡಿರುವ ಮಹೀಂದ್ರ ಸ್ಕಾರ್ಪಿಯೊ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ತನ್ನ ಛಾಪು ಮೂಡಿಸಿದೆ.

02. ಹೋಂಡಾ ಅಮೇಜ್
ಕಾಂಪಾಕ್ಟ್ ಸೆಡಾನ್ ಕಾರು ವಿಭಾಗದಲ್ಲಿ ಹೊಸತನಕ್ಕೆ ಕಾರಣವಾಗಿರುವ ಹೋಂಡಾ ಅಮೇಜ್, ಮಾರುತಿ ಸ್ವಿಫ್ಟ್ ಡಿಜೈರ್, ಫೋರ್ಡ್ ಫಿಗೊ ಆಸ್ಪೈರ್, ಹ್ಯುಂಡೈ ಎಕ್ಸ್ ಸೆಂಟ್ ಹಾಗೂ ಟಾಟಾ ಜೆಸ್ಟ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

01. ಮಹೀಂದ್ರ ಬೊಲೆರೊ
ದೇಶದ ಸರ್ವಕಾಲಿಕ ಶ್ರೇಷ್ಠ ಎಸ್‌ಯುವಿ ಕಾರುಗಳಲ್ಲಿ ಒಂದಾಗಿರುವ ಮಹೀಂದ್ರ ಬೊಲೆರೊ, ವಾಹನ ಪ್ರೇಮಿಗಳ ಪಾಲಿಗೆ ಈಗಲೂ ಪ್ರಿಯವೆನಿಸಿದೆ. ಎಲ್ಲ ರಸ್ತೆ ಪರಿಸ್ಥಿತಿಯಲ್ಲೂ ಅತ್ಯುತ್ತಮ ನಿರ್ವಹಣೆ ಕಾಪಾಡಿಕೊಂಡಿರುವುದೇ ಬೊಲೆರೊ ಯಶಸ್ಸಿಗೆ ಸ್ಪೂರ್ತಿಯಾಗಿದೆ.

ಬೆಂಗಳೂರಿನಲ್ಲಿ ಅನಕೊಂಡ ಪ್ರತ್ಯಕ್ಷ; ಫೇಸ್‌ಬುಕ್‌ನಲ್ಲಿ ಮಿಂಚಿದ ಟಾಪ್ 10 ಲೇಖನಗಳು


Click it and Unblock the Notifications








