ವಾಹನ ಸಾಂದ್ರತೆ; ದೇಶಕ್ಕೆ ಚೆನ್ನೈ ನಂ.1
ಇಡೀ ದೇಶದಲ್ಲಿ ಅತಿ ದೊಡ್ಡ ವಾಹನ ಮಾರುಕಟ್ಟೆಯ ಹೊಂದಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಹಜವಾಗಿಯೇ ಅತಿ ಹೆಚ್ಚು ವಾಹನ ಸಾಂದ್ರತೆ ಕಂಡುಬರಬೇಕಲ್ಲವೇ? ಆದರೆ ಇಲ್ಲಿನ ನಿಜಸ್ಥಿತಿ ಇನ್ನೊಂದು ಕಥೆಯನ್ನು ಹೇಳುತ್ತಿದೆ. ಚೆನ್ನೈಗಿಂತಲೂ ಎರಡು ಪಟ್ಟು ಜಾಸ್ತಿ ವಾಹನಗಳ ಸಂಖ್ಯೆಯನ್ನು ಹೊಂದಿರುವ ಹೊರತಾಗಿಯೂ ವಾಹನ ಸಾಂದ್ರತೆಯ ವಿಚಾರಕ್ಕೆ ಬಂದಾಗ ದೆಹಲಿ ಚೆನ್ನೈಗಿಂತಲೂ 10 ಪಟ್ಟುಗಳಷ್ಟು ಕೆಳಗಡೆ ಗುರುತಿಸಿಕೊಂಡಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಅಷ್ಟಕ್ಕೂ ಸಮೀಕ್ಷಾ ವರದಿಯ ಪ್ರಕಾರ ದೇಶದ ಅತ್ಯಂತ ಹೆಚ್ಚಿನ ವಾಹನ ಸಾಂದ್ರತೆಗಳಿರುವ ನಗರಗಳು ಯಾವುವು? ದೆಹಲಿಯಲ್ಲಿ ವಾಹನ ಸಾಂದ್ರತೆ ಕಡಿಮೆಯಾಗಲು ಕಾರಣಗಳೇನು? ನಮ್ಮ ಬೆಂಗಳೂರು ವಾಹನ ಸಾಂದ್ರತೆಯ ಪಟ್ಟಿಯಲ್ಲಿದೆಯೇ? ಇವೆಲ್ಲದಕ್ಕೂ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

01. ಚೆನ್ನೈ
3.7 ದಶಲಕ್ಷಗಳಷ್ಟು ವಾಹನಗಳನ್ನು ಹೊಂದಿರುವ ಚೆನ್ನೈ ವಾಹನ ಸಾಂದ್ರತೆಯಲ್ಲಿ ಇಡೀ ದೇಶಕ್ಕೆ ಅಗ್ರವೆನಿಸಿಕೊಂಡಿದೆ. ಇಲ್ಲಿ ಪ್ರತಿ ಕೀ.ಮೀ.ಗೆ 2,093ಗಳಷ್ಟು ವಾಹನ ಸಾಂದ್ರತೆ ಕಂಡುಬಂದಿದೆ.

02. ಪುಣೆ
ಎರಡನೇ ಸ್ಥಾನದಲ್ಲಿರುವ ಪುಣೆ ನಗರದಲ್ಲಿ 2.26 ದಶಲಕ್ಷ ವಾಹನಗಳಿದ್ದು, ಪ್ರತಿ ಕೀ.ಮೀ. 1,290ರಷ್ಟು ವಾಹನ ನಿಬಿಡತೆ ಕಂಡುಬಂದಿದೆ.

03. ಮುಂಬೈ
ಅದೇ ರೀತಿ ದೇಶದ ವಾಣಿಜ್ಯ ನಗರಿ ಮುಂಬೈಯಲ್ಲಿ ಎರಡು ಮಿಲಿಯನ್ ಗಳಷ್ಟು ವಾಹನಗಳಿದ್ದು, ಪ್ರತಿ ಕೀ.ಮೀ.ಗೆ 1,014 ಗಳಷ್ಟು ವಾಹನ ಸಾಂದ್ರತೆಯಿದೆ.

04. ಹೈದರಾಬಾದ್
3.4 ಮಿಲಿಯನ್ ವಾಹನಗಳನ್ನು ಹೊಂದಿರುವ ಹೈದರಾಬಾದ್ ವಾಹನ ಸಾಂದ್ರತೆಯ ವಿಚಾರದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿ ಪ್ರತಿ ಕೀ.ಮೀ.ಗೆ 723ರಷ್ಟು ವಾಹನ ಸಾಂದ್ರತೆ ಕಂಡುಬಂದಿದೆ.

05. ಕೋಲ್ಕತ್ತಾ
ಪ್ರಸ್ತುತ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕೋಲ್ಕತ್ತಾದಲ್ಲಿ ಐದು ಲಕ್ಷಗಳಷ್ಟು ವಾಹನಗಳಿದ್ದು, ಪ್ರತಿ ಕೀ.ಮೀಗೆ 355ರಷ್ಟು ವಾಹನ ನಿಬಿಡತೆ ಕಂಡುಬಂದಿದೆ.

06. ದೆಹಲಿ
ಇನ್ನು 7.3 ಮಿಲಿಯನ್ ವಾಹನಗಳಿರುವ ದೇಶದ ರಾಜಧಾನಿ ನವದೆಹಲಿಯಲ್ಲಿ ಅತ್ಯಂತ ಕಡಿಮೆ ಅಂದರೆ ಪ್ರತಿ ಕೀ.ಮೀ. 245ರಷ್ಟು ಮಾತ್ರ ವಾಹನ ಸಾಂದ್ರತೆಯಿದೆ. ಇದರ ಹಿಂದಿರುವ ಪ್ರಮುಖ ಕಾರಣವೆಂದರೆ ದೆಹಲಿಯಲ್ಲಿ ಅತ್ಯಂತ ವಿಸ್ತಾರವಾಗಿ ಹರಡಿರುವ ರಸ್ತೆ ಜಾಲವಾಗಿದೆ. ದೆಹಲಿಯಲ್ಲಿ 30,000 ಕೀ.ಮೀ. ಗಳಷ್ಟು ರಸ್ತೆ ಜಾಲ ಹರಡಿದ್ದು, ಚೆನ್ನೈ ಹಾಗೂ ಪುಣೆಯಲ್ಲಿ 1,800ರಷ್ಟು ಹಾಗೂ ಕೋಲ್ಕತ್ತಾ ಮತ್ತು ಮುಂಬೈ ಅನುಕ್ರಮವಾಗಿ 1400 ಹಾಗೂ 2000 ಕೀ.ಮೀ. ಗಳಷ್ಟು ರಸ್ತೆ ಜಾಲವನ್ನು ಹೊಂದಿದೆ.

ವಾಯು ಮಾಲಿನ್ಯ
ಇಷ್ಟೆಲ್ಲ ಆದರೂ ವಾಯು ಮಾಲಿನ್ಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ದೆಹಲಿ (ಸರಾಸರಿ 198) ಅಪಖ್ಯಾತಿಗೆ ಪಾತ್ರವಾಗಿದೆ. ಇದನ್ನು ಪುಣೆ (89), ಹೈದಾರಾಬಾದ್ (81), ಮುಂಬೈ (77), ಕೋಲ್ಕತ್ತಾ (73) ಹಾಗೂ ಚೆನ್ನೈ (20) ನಗರಗಳು ಹಿಂಬಾಲಿಸಿದೆ. ಆದರೆ ಪ್ರಸ್ತುತ ಪಟ್ಟಿಯಲ್ಲಿ ಬೆಂಗಳೂರು ನಗರದ ಸ್ಥಾನಮಾನದ ಬಗ್ಗೆ ಮಾಹಿತಿಯು ಲಭ್ಯವಾಗಿಲ್ಲ. ಈ ಬಗ್ಗೆ ಅಧಿಕೃತ ಮಾಹಿತಿ ಪಡೆಯುವ ಪ್ರಯತ್ನ ಮುಂದುವರಿದಿದ್ದು, ತಾಜಾ ಸುದ್ದಿಗಾಗಿ ಕನ್ನಡ ಡ್ರೈವ್ ಸ್ಪಾರ್ಕ ಓದುತ್ತಿರಿ.


Click it and Unblock the Notifications








