ಹೊಸ ವರ್ಷದಿಂದ ಟೊಯೊಟಾ ಕಾರುಗಳಿಗೆ ಬೆಲೆ ಏರಿಕೆ

Written By:

ಇತರ ಮುಂಚೂಣಿಯ ವಾಹನ ಸಂಸ್ಥೆಗಳ ಅದೇ ನಡೆಯನ್ನು ಅನುಸರಿಸಿರುವ ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಟೊಯೊಟಾ, ಹೊಸ ವರ್ಷದಿಂದ ಭಾರತದಲ್ಲಿ ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ.

ಟೊಯೊಟಾ ಕಾರುಗಳಿಗೆ ಗರಿಷ್ಠ ಶೇಕಡಾ ಮೂರರಷ್ಟು ಬೆಲೆ ಏರಿಕೆ ಕಂಡುಬರಲಿದೆ. ನೂತನ ಬೆಲೆ ನೀತಿಯು 2016 ಜನವರಿ 01ರಂದು ಅನ್ವಯವಾಗಲಿದೆ.

ಟೊಯೊಟಾ

ಹಾಗಿದ್ದರೂ ಯಾವೆಲ್ಲ ಮಾದರಿಗಳಿಗೆ ಎಷ್ಟೆಷ್ಟು ದರ ಹೆಚ್ಚಳಗೊಳ್ಳಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಮುಂದಿನ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.

ನಿರ್ಮಾಣ ವೆಚ್ಚ ಹೆಚ್ಚಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ದರ ಏರಿಕೆ ಅನಿವಾರ್ಯವೆನಿಸಿದೆ.

ಇನ್ನೊಂದೆಡೆ ಈ ವರ್ಷಾಂತ್ಯದ ವೇಳೆಯಲ್ಲಿ ಟೊಯೊಟಾ ಕಾರುಗಳಿಗೆ ಡಿಸ್ಕೌಂಟ್ ಒದಗಿಸಲಾಗುತ್ತಿದೆ. ಇದು 2015 ಡಿಸೆಂಬರ್ 31ರ ವರೆಗೆ ಮುಂದುವರಿಯಲಿದೆ.

ದೇಶದಲ್ಲಿ ಮಾರಾಟದಲ್ಲಿರುವ ಟೊಯೊಟಾ ಕಾರುಗಳು ಇಂತಿದೆ:

  • ಎಟಿಯೋಸ್ ಲಿವಾ,
  • ಎಟಿಯೋಸ್ ಕ್ರಾಸ್,
  • ಕರೊಲ್ಲಾ ಅಲ್ಟೀಸ್,
  • ಕ್ಯಾಮ್ರಿ,
  • ಪ್ರಯಾಸ್,
  • ಇನ್ನೋವಾ,
  • ಫಾರ್ಚ್ಯುನರ್,
  • ಲ್ಯಾಂಡ್ ಕ್ರೂಸ್,
  • ಪ್ರಾಡೊ.
English summary
Toyota India Confirms Three Percent Price Hike From 2016
Story first published: Wednesday, December 30, 2015, 12:11 [IST]
Please Wait while comments are loading...

Latest Photos