ಅಬ್ಬಬ್ಬಾ ಇದೇನಿದು 31 ದಶಲಕ್ಷ ವಾಹನಗಳಿಗೆ ಹಿಂದಕ್ಕೆ ಕರೆ?
ಇಡೀ ವಾಹನೋದ್ಯಮದಲ್ಲೇ ಅತಿ ದೊಡ್ಡ ರಿಕಾಲ್ (Recall) ಎಂಬಂತೆ ಜಗತ್ತಿನ ಮೂರು ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳು ಬರೋಬ್ಬರಿ 31 ದಶಲಕ್ಷಗಳಷ್ಟು ವಾಹನಗಳಿಗೆ ಹಿಂದಕ್ಕೆ ಕರೆ ನೀಡಲು ಸಜ್ಜಾಗಿದೆ.
ಯಾವೆಲ್ಲ ಸಂಸ್ಥೆಗಳಿಂದ ಹಿಂದಕ್ಕೆ ಕರೆ?
ಟೊಯೊಟಾ,
ನಿಸ್ಸಾನ್,
ಹೋಂಡಾ

ಏನಿದು ಸಮಸ್ಯೆ?
ಬಾಹ್ಯ ಸಂಸ್ಥೆ ಟಕಟ ಲಗತ್ತಿಸಿರುವ ಏರ್ ಬ್ಯಾಗ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ಭಾರಿ ರಿಕಾಲ್ ಗೆ ಕರೆ ನೀಡಲಾಗಿದೆ.
ಈ ಪೈಕಿ ಟೊಯೊಟಾ ಹಾಗೂ ನಿಸ್ಸಾನ್ ಸಂಸ್ಥೆಗಳು 6.5 ಯುನಿಟ್ ಗಳನ್ನು ಜಾಗತಿಕವಾಗಿ ಹಿಂದಕ್ಕೆ ಕರೆ ನೀಡುವುದಾಗಿ ಘೋಷಿಸಿದೆ. ಆದರೆ ಹೋಂಡಾ ಸಂಸ್ಥೆಯು ಎಷ್ಟು ವಾಹನಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
ಹೋಂಡಾದಲ್ಲಿ ಬಳಕೆಯಾದ ಟಕಟ ಏರ್ ಬ್ಯಾಗ್ ಸಮಸ್ಯೆಯಿಂದಾಗಿ ಆರು ಸಾವಿನ ಪ್ರಕರಣಗಳು ದಾಖಲಾಗಿದೆ. ಇನ್ನೊಂದೆಡೆ ಮುಂಜಾಗ್ರತಾ ಕ್ರಮವಾಗಿ ಟೊಯೊಟಾ ಹಾಗೂ ನಿಸ್ಸಾನ್ ಸಂಸ್ಥೆಗಳು ತಮ್ಮ ವಾಹನಗಳಿಗೆ ಹಿಂದಕ್ಕೆ ಕರೆ ನೀಡಲಿದೆ.
2003ರಿಂದ 2007ನೇ ಅವಧಿಯಲ್ಲಿ ನಿರ್ಮಾಣವಾಗಿರುವ ಐದು ದಶಲಕ್ಷ ವಾಹನಗಳನ್ನು ಟೊಯೊಟಾ ಹಿಂಪಡೆಯಲಿದೆ. ಇನ್ನೊಂದೆಡೆ ನಿಸ್ಸಾನ್ 1.56 ಮಿಲಿಯನ್ ಗಳಷ್ಟು ವಾಹನಗಳನ್ನು ವಾಪಾಸ್ ಕರೆಯಿಸಿಕೊಳ್ಳುತ್ತಿದೆ.


Click it and Unblock the Notifications








