ಸ್ವಿಚ್ ದೋಷ; 6.5 ಮಿಲಿಯನ್ ಟೊಯೊಟಾ ಕಾರುಗಳು ಹಿಂದಕ್ಕೆ
ಪವರ್ ವಿಂಡೋ ಸ್ವಿಚ್‌ಗಳಲ್ಲಿ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಜಾಗತಿಕವಾಗಿ 6.5 ಮಿಲಿಯನ್ ಕಾರುಗಳಿಗೆ ಹಿಂದಕ್ಕೆ ಕರೆ ನೀಡಲು ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಟೊಯೊಟಾ ನಿರ್ಧರಿಸಿದೆ.
2005 ಜನವರಿಯಿಂದ 2010 ಡಿಸೆಂಬರ್ ವರೆಗಿನ ಅವಧಿಯಲ್ಲಿ ನಿರ್ಮಾಣವಾಗಿರುವ ಟೊಯೊಟಾ ಕಾರುಗಳಲ್ಲಿ ಇದಕ್ಕೆ ಸಮಾನವಾದ ದೋಷ ಪತ್ತೆ ಹಚ್ಚಲಾಗಿದೆ.

ಪವರ್ ವಿಂಡೋ ಸ್ವಿಚ್ ದೋಷದಿಂದಾಗಿ ಓವರ್ ಹೀಟ್ ಆಗುವ ಸಂಭವವಿದ್ದು, ಇದರಿಂದಾಗಿ ಗಾಡಿಗೆ ಬೆಂಕಿ ಹಚ್ಚಿಕೊಳ್ಳುವ ಭೀತಿಯನ್ನು ತಳ್ಳಿಹಾಕುವಂತಿಲ್ಲ. ಹಾಗಿದ್ದರೂ ಇದುವರೆಗೆ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂಬುದನ್ನು ಸಂಸ್ಥೆಯು ತಿಳಿಸಿದೆ.
ಮುಂಜಾಗ್ರತಾ ಕ್ರಮದ ಭಾಗವಾಗಿ ಟೊಯೆಟಾ ಕಾರುಗಳಿಗೆ ಹಿಂದಕ್ಕೆ ಕರೆ ಸೂಚಿಸಲಾಗಿದೆ. ಇದರಲ್ಲಿ ಉತ್ತರ ಅಮೆರಿಕದಲ್ಲಿ 2.7 ಮಿಲಿಯನ್, ಯುರೋಪ್ ನಲ್ಲಿ 1.2 ಮಿಲಿಯನ್ ಹಾಗೂ ತವರೂರಾರದ ಜಪಾನ್ ನಲ್ಲಿ ಆರು ಲಕ್ಷದಷ್ಟು ವಾಹನಗಳಿಗೆ ಹಿಂದಕ್ಕೆ ಕರೆ ನೀಡಲಾಗಿದೆ.
ಯಾವೆಲ್ಲ ಮಾದರಿ ?
ಟೊಯೊಟಾ ಮ್ಯಾಟ್ರಿಕ್ಸ್,
ಆರ್‌ಎವಿ4,
ಹೈ ಲ್ಯಾಂಡರ್,
ಟುಂಡ್ರಾ,
ಸಿಕ್ವೊಯಾ,
ಸಿಯಾನ್ ಎಕ್ಸ್‌ಬಿ
ಸ್ವಲ್ಪ ಸಮಯದ ಹಿಂದೆಯಷ್ಟೇ ವುಡ್ ರಿಲೀಸ್ ಸ್ವಿಚ್ ದೋಷದ ಹಿನ್ನೆಲಯಲ್ಲಿ ಜಪಾನ್ ನಲ್ಲಿ ಮಾತ್ರವಾಗಿ 1.40 ಲಕ್ಷದಷ್ಟು ವಾಹನಗಳಿಗೆ ಟೊಯೊಟಾ ಹಿಂದಕ್ಕೆ ಕರೆ ನೀಡಲಾಗಿತ್ತು. ಇದಕ್ಕೂ ಮೊದಲು ಟಕಟ ಏರ್ ಬ್ಯಾಗ್ ತೊಂದರೆಯಿಂದಲೂ ಪಾರಾಗಾಲು ಭಾರಿ ಸಂಖ್ಯೆಯಲ್ಲಿ ಹಿಂದಕ್ಕೆ ಕರೆ ಘೋಷಿಸಿತ್ತು.


Click it and Unblock the Notifications








