ಭಾರತದಲ್ಲಿ 10,000 ಮೈಲುಗಲ್ಲು ಸಾಧಿಸಿದ ವೋಲ್ವೋ ಟ್ರಕ್
ಯುರೋಪ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ವೋಲ್ವೋ ಪ್ರೀಮಿಯಂ ಟ್ರಕ್ ವಿಭಾಗದಲ್ಲಿ ಹೆಚ್ಚು ಹೆಸರು ಮಾಡಿದೆ. ಪ್ರಸ್ತುತ ವೋಲ್ವೋ ಸಂಸ್ಥೆಯು ಭಾರತದಲ್ಲಿ 10,000 ಟ್ರಕ್ ಗಳ ಮಾರಾಟವನ್ನು ತಲುಪಿದೆ.
ಇದರಂತೆ ವೋಲ್ವೋ 10,000ನೇ ಟ್ರಕ್ ಆದ ಎಫ್ ಎಂಎಕ್ಸ್ 440 8x4 ಐ-ಶಿಫ್ಟ್ ಮಾದರಿಯನ್ನು ಮಹಾಲಕ್ಷಿ ಇನ್ಪ್ರಾ ಕಂಟ್ರಾಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಗೆ ಹಸ್ತಾಂತರಿಸಲಾಯಿತು. ವೋಲ್ವೋ ಜತೆ ದಶಕಗಳ ನಂಟು ಹೊಂದಿರುವ ಪ್ರಸ್ತುತ ಸಂಸ್ಥೆಯ ಈಗಾಗಲೇ 350ರಷ್ಟು ವೋಲ್ವೋ ಟ್ರಕ್ ಗಳಿವೆ.

ವೋಲ್ವೋ ಟ್ರಕ್ ಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಅಲ್ಲದೆ ನಾವೀನ್ಯ ತಂತ್ರಜ್ಞಾನ ಆಳವಡಿಸುವುದರಲ್ಲಿ ಎಂದೂ ಒಂದು ಹೆಜ್ಜೆ ಮುಂದಿದೆ.
ಇದರ ಭಾಗವಾಗಿ ಭವಿಷ್ಯದಲ್ಲಿ ಮತ್ತಷ್ಟು ಪ್ರೀಮಿಯಂ ಟ್ರಕ್ ಗಳು ಪ್ರವೇಶವಾಗಲಿದೆ. ಈ ಮೂಲಕ ಗ್ರಾಹಕರಿಗೆ ಗರಿಷ್ಠ ಸೇವೆಯನ್ನು ನೀಡುವಲ್ಲಿ ಸಂಸ್ಥೆಯು ಬದ್ಧವಾಗಿದೆ.


Click it and Unblock the Notifications