ವೋಲ್ವೋ ಎಕ್ಸ್ ಸಿ90 ಐಷಾರಾಮಿ ಎಸ್ ಯುವಿ ಬಿಡುಗಡೆ

By Nagaraja

ವೋಲ್ವೋದ ದುಬಾರಿ ಕ್ರೀಡಾ ಬಳಕೆಯ ವಾಹನವೊಂದು ಭಾರತಕ್ಕೆ ಲಗ್ಗೆಯಿಟ್ಟಿದೆ. ಅದುವೇ ಎಕ್ಸ್ ಸಿ90. ಇದರ ಮೊಮೆಟಮ್ ವೆಹಾಗೂ ಟಾಪ್ ಎಂಡ್ ಇನ್ ಸ್ಕ್ರಿಪ್ಷನ್ ವೆರಿಯಂಟ್ ಗಳು ಅನುಕ್ರಮವಾಗಿ 64.9 ಹಾಗೂ 77.9 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ (ಎಕ್ಸ್ ಶೋ ರೂಂ).

ಸೆಪ್ಟೆಂಬರ್ ತಿಂಗಳಲ್ಲಿ ವಿತರಣೆ ಪ್ರಕ್ರಿಯೆ ಆರಂಭವಾಗಲಿದ್ದು, ಈ ಸಂಬಂಧ ಅಧಿಕೃತ ಡೀಲರುಗಳಲ್ಲಿ ಐದು ಲಕ್ಷ ರು.ಗಳನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಅಷ್ಟಕ್ಕೂ ಈ ಎರಡನೇ ತಲೆಮಾರಿನ ವೋಲ್ವೋ ಎಕ್ಸ್ ಸಿ90 ಕಾರಿನ ವಿಶಿಷ್ಟತೆಗಳನ್ನು ಬಲ್ಲಿರೇನು?

ವೋಲ್ವೋ ಎಕ್ಸ್ ಸಿ90 ಐಷಾರಾಮಿ ಎಸ್ ಯುವಿ ಬಿಡುಗಡೆ

ಎರಡನೇ ತಲೆಮಾರಿನ ವೋಲ್ವೋ ಎಕ್ಸ್ ಸಿ90 ಕಾರು ಎಲ್ಲ ಹೊಸ ಫ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಾಣವಾಗಿದ್ದು, ಪರಿಷ್ಕೃತ ಗ್ರಿಲ್, ಟಿ ಆಕಾರದ ರನ್ನಿಂಗ್ ಲೈಟ್ಸ್ ಇತ್ಯಾದಿ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.

ವೋಲ್ವೋ ಎಕ್ಸ್ ಸಿ90 ಐಷಾರಾಮಿ ಎಸ್ ಯುವಿ ಬಿಡುಗಡೆ

ನೂತನ ವೋಲ್ವೋ ಎಕ್ಸ್ ಸಿ90 ಎಸ್ ಯುವಿ, 2.0 ಲೀಟರ್ ಫೋರ್ ಸಿಲಿಂಡರ್ ಡಿ5 ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 225 ಅಶ್ವಶಕ್ತಿ ಉತ್ಪಾದಿಸಲಿದೆ. ಅಲ್ಲದೆ ಎಲ್ಲ ನಾಲ್ಕು ಚಕ್ರಗಳಿಗೂ ಶಕ್ತಿ ವಿತರಣೆಯಾಗಲಿದೆ.

ವೋಲ್ವೋ ಎಕ್ಸ್ ಸಿ90 ಐಷಾರಾಮಿ ಎಸ್ ಯುವಿ ಬಿಡುಗಡೆ

ಅದೇ ಹೊತ್ತಿಗೆ ಹೆಚ್ಚಿ ಶಕ್ತಿಶಾಲಿ ಹಾಗೂ ಪರಿಸರ ಸ್ನೇಹಿ ಟಿ8 ಪೆಟ್ರೋಲ್-ಎಲೆಕ್ಟ್ರಿಕ್ ಪ್ಲಗ್ ಇನ್ ಹೈಬ್ರಿಡ್ ಮಾದರಿ ಮುಂದಿನ ವರ್ಷ ನಿರೀಕ್ಷಿಸಲಾಗುತ್ತಿದೆ. ಇವೆರಡು ಒಟ್ಟು ಸೇರಿ 400 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಳ್ಳಲಿದೆ.

ವೋಲ್ವೋ ಎಕ್ಸ್ ಸಿ90 ಐಷಾರಾಮಿ ಎಸ್ ಯುವಿ ಬಿಡುಗಡೆ

ವೋಲ್ವೋ ನೂತನ ಕಾರಿನಲ್ಲಿ ಅತ್ಯಧಿಕ ಐಷಾರಾಮಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಡೈಮಂಡ್ ಕಟ್ ಕಂಟ್ರೋಲ್, ಸ್ಟ್ಯಾರ್ಟ್/ಸ್ಟಾಪ್ ಬಟನ್, ಟಚ್ ಸ್ಕ್ರೀನ್ ನಿಯಂತ್ರಣ, ಬಟನ್ ರಹಿತ ಡ್ಯಾಶ್ ಬೋರ್ಡ್, ಲೆಥರ್ ಹಾಗೂ ಮರದ ಸ್ಪರ್ಶ ಇನ್ನು ಹೆಚ್ಚಿನ ಆಕರ್ಷಣೆಯನ್ನು ನೀಡಲಿದೆ.

ವೋಲ್ವೋ ಎಕ್ಸ್ ಸಿ90 ಐಷಾರಾಮಿ ಎಸ್ ಯುವಿ ಬಿಡುಗಡೆ

ಮೊಮೆಟಮ್ ವೆರಿಯಂಟ್ ನಲ್ಲಿ ಚಾಲಕ ಸೀಟು ಹೊಂದಾಣಿಕೆ ಜೊತೆಗೆ ಮೆಮೆರಿ ಕ್ರಿಯಾತ್ಮಕತೆ, ಪ್ಯಾನರೋಮಿಕ್ ಸನ್ ರೂಫ್, ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ 12.3 ಇಂಚುಗಳ ಸ್ಕ್ರೀನ್, ಪಾರ್ಕ್ ಅಸಿಸ್ಟ್ ಹಾಗೂ ಹಿಲ್ ಡಿಸೆಂಟ್ ನಿಯಂತ್ರಣ ಸೇವೆಗಳು ಲಭ್ಯವಾಗಲಿದೆ.

ವೋಲ್ವೋ ಎಕ್ಸ್ ಸಿ90 ಐಷಾರಾಮಿ ಎಸ್ ಯುವಿ ಬಿಡುಗಡೆ

ಇದಲ್ಲದೆ ಇನ್ ಸ್ಕ್ರಿಪ್ಷನ್ ಮಾದರಿಯು 19 ಸ್ಪೀಕರ್ ಬೋವರ್ ಮತ್ತು ವಿಲ್ಕಿನ್ ಆಡಿಯೋ ಸಿಸ್ಟಂ, ಏರ್ ಸಸ್ಪೆನ್ಷನ್, ಹೆಡ್ಸ್ ಅಪ್ ಡಿಸ್ ಪ್ಲೇ, ವೆಂಟಿಲೇಟಡ್ ಫ್ರಂಟ್ ಸೀಟು ಹಾಗೂ ನಪ್ಪಾ ಲೆಥರ್ ಹೋದಿಕೆ ಪಡೆಯಲಿದೆ.

ವೋಲ್ವೋ ಎಕ್ಸ್ ಸಿ90 ಐಷಾರಾಮಿ ಎಸ್ ಯುವಿ ಬಿಡುಗಡೆ

ಇನ್ನು ವೋಲ್ವೋ ಎಕ್ಸ್90 ಮಾದರಿಯಲ್ಲಿ ಸುರಕ್ಷತೆಗೂ ಗರಿಷ್ಠ ಆದ್ಯತೆ ಕೊಡಲಾಗಿದ್ದು, ಎರಡು ವಿಧದ ಏರ್ ಬ್ಯಾಗ್, ಎತ್ತರ ಹೊಂದಾಣಿಸಬಹುದಾದ ಆಟೋಮ್ಯಾಟಿಕ್ ಫ್ರಂಟ್ ಸೀಟು ಬೆಲ್ಟ್, ಇಂಟೆಲಿಜೆಟ್ ಚಾಲಕ ಮಾಹಿತಿ ವ್ಯವಸ್ಥೆ ಮುಂತಾದ ಸೌಲಭ್ಯಗಳು ಲಭ್ಯವಾಗಲಿದೆ.

ವೋಲ್ವೋ ಎಕ್ಸ್ ಸಿ90 ಐಷಾರಾಮಿ ಎಸ್ ಯುವಿ ಬಿಡುಗಡೆ

ಪ್ರಸ್ತುತ ವೋಲ್ವೋ ಎಕ್ಸ್ ಸಿ90 ಮಾದರಿಯು ಐಷಾರಾಮಿ ಎಸ್ ಯುವಿ ವಿಭಾಗದಲ್ಲಿ ಆಡಿ ಕ್ಯೂ7, ಮರ್ಸಿಡಿಸ್ ಬೆಂಝ್ ಜಿಲ್ ಕ್ಲಾಸ್ ಮತ್ತು ಬಿಎಂಡಬ್ಲ್ಯು ಎಕ್ಸ್5 ಸವಾಲನ್ನು ಎದುರಿಸಲಿದೆ.

ವೋಲ್ವೋ ಎಕ್ಸ್ ಸಿ90 ಐಷಾರಾಮಿ ಎಸ್ ಯುವಿ ಬಿಡುಗಡೆ

ವಾರ್ಷಿಕವಾಗಿ 2,000 ಯುನಿಟ್ ಗಳಷ್ಟು ಮಾರಾಟ ಗುರಿಯಿರಿಸಿಕೊಂಡಿರುವ ವೋಲ್ವೋ ಸ್ಥಳೀಯವಾಗಿ ಜೋಡಣೆ ಕಾರ್ಯಕ್ಕೆ ಉತ್ತೇಜನ ನೀಡುವ ಇರಾದೆಯಲ್ಲಿದೆ. ಹಾಗೆಯೇ 2016ರ ವೇಳೆಯಾಗುವಾಗ ತನ್ನ ವಿತರಕರ ಸಂಖ್ಯೆಯನ್ನು 40ಕ್ಕೆ ಏರಿಸುವ ಗುರಿ ಹೊಂದಿದೆ.

Article Published On: Tuesday, May 12, 2015, 17:54 [IST]
English summary
Swedish carmaker has debuted its flagship SUV, the XC90 in India today. Volvo India is taking pre-orders of the new vehicle has opened, and deliveries will commence in September, 2015.
Read more on ವೋಲ್ವೋ volvo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+