ಏರ್ ಬ್ಯಾಗ್ ಸಮಸ್ಯೆ; ವೋಲ್ವೋ ಎಕ್ಸ್‌ಸಿ90 ಹಿಂದಕ್ಕೆ ಕರೆ

By Nagaraja

ಏರ್ ಬ್ಯಾಗ್ ಸಮಸ್ಯೆಯ ಹಿನ್ನೆಲೆಯಲ್ಲಿ ಜನಪ್ರಿಯ 2016 ವೋಲ್ವೋ ಎಕ್ಸ್‌ಸಿ90 ನಿರ್ದಿಷ್ಟ ಮಾದರಿಗಳನ್ನು ವಾಪಾಸ್ ಕರೆಯಿಸಿಕೊಳ್ಳಲಾಗಿದೆ. ಉತ್ತರ ಅಮೆರಿಕದಲ್ಲಿ ಈ ಮಹತ್ತರ ಬೆಳವಣಿಗೆ ಕಂಡುಬಂದಿದೆ.

2016 ವೋಲ್ವೋ ಎಕ್ಸ್‌ಸಿ90 ಕ್ರೀಡಾ ಬಳಕೆಯ ವಾಹನಗಳ 3,911 ಯುನಿಟ್ ಗಳಿಗೆ ಹಿಂದಕ್ಕೆ ಕರೆ ನೀಡಲಾಗಿದೆ. ಆದರೆ ಜಗತ್ತಿನ ಇತರ ಮಾರುಕಟ್ಟೆಯಲ್ಲಿ ಇದಕ್ಕೆ ಸಮಾನವಾದ ತೊಂದರೆ ಕಾಣಿಸಿಕೊಂಡಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

2016 ವೋಲ್ವೋ ಎಕ್ಸ್‌ಸಿ90

ಕಾರಿನ ಮೂರನೇ ಸಾಲಿನ ಆಸನದ ಬದಿಯಲ್ಲಿ ಆಳವಡಿಸಲಾದ ಗಾಳಿಚೀಲದಲ್ಲಿ ಸಮಸ್ಯೆ ಕಂಡುಬಂದಿದೆ ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿದೆ. ಅಲ್ಲದೆ ತೊಂದರೆಯ್ನು ಬಗೆಹರಿಸಿಕೊಡಲು ಕ್ರಮವನ್ನು ಆರಂಭಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಟ್ರಾಫಿಕ್ ಸುರಕ್ಷಾ ಆಡಳಿತ ಮಂಡಳಿಯ ಪ್ರಕಾರ ಏರ್ ಬ್ಯಾಗ್ ತೊಂದರೆಯಿಂದಾಗಿ ಪ್ರಯಾಣಕರಿಗೆ ಗಾಯವಾಗುವ ಸಾಧ್ಯತೆಯಿದೆ ಎಂಬುದನ್ನು ಎಚ್ಚರಿಸಿದೆ.

2015 ಜನವರಿ 27ರಿಂದ 2015 ಜುಲೈ 10ರ ವರೆಗೆ ನಿರ್ಮಾಣವಾದ ವೋಲ್ವೋ ಎಕ್ಸ್‌ಸಿ90 ಮಾದರಿಗಳಲ್ಲಿ ಇಂತಹ ಸಮಸ್ಯೆ ಕಂಡುಬಂದಿದೆ. ಈ ಹಿಂದೆ ಜಪಾನ್ ಮೂಲದ ಟಕಟ ಏರ್ ಬ್ಯಾಗ್ ಸಮಸ್ಯೆಯಿಂದಾಗಿ ಜಗತ್ತಿನಾದ್ಯಂತ ಅನೇಕ ಮಾದರಿಗಳನ್ನು ಹಿಂಪಡೆದಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Article Published On: Thursday, August 27, 2015, 7:18 [IST]
English summary
2016 Volvo XC90 Recalled Due To Airbag Trouble
Read more on ವೋಲ್ವೋ volvo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+