ಸುರಕ್ಷಾ ನಿಮಯ ಉಲ್ಲಂಘಿಸಿದ್ದಲ್ಲಿ ವಾಹನ ಸಂಸ್ಥೆಗಳಿಗೆ 100 ಕೋಟಿ ದಂಡ

By Nagaraja

ನೂತನ ರಸ್ತೆ ಸುರಕ್ಷತಾ ಮಸೂದೆ ಜಾರಿಗೊಳಿಸುವುದರತ್ತ ಕಾರ್ಯ ಮಗ್ನವಾಗಿರುವ ಕೇಂದ್ರ ಸರಕಾರವು ಸುರಕ್ಷಾ ನಿಯಮ ಉಲ್ಲಂಘನೆಯಾದ್ದಲ್ಲಿ ವಾಹನ ಸಂಸ್ಥೆಗಳ ಮೇಲೆ 100 ಕೋಟಿ ರುಪಾಯಿಗಳ ಭಾರಿ ದಂಡ ವಿಧಿಸುವಂತೆ ಶಿಫಾರಸುಗೈದಿದೆ.

ಕಾರಿನ ಅಭಿವೃದ್ಧಿ ಅಥವಾ ನಿರ್ಮಾಣದಲ್ಲಿ ದೋಷವನ್ನುಂಟು ಮಾಡುವ ಮೂಲಕ ಅಸುರಕ್ಷಿತ ಕಾರುಗಳನ್ನು ನಿರ್ಮಾಣ ಮಾಡಿದ್ದಲ್ಲಿ ಭಾರಿ ದಂಡವನ್ನೇ ತೆರಬೇಕಾಗುತ್ತದೆ. ಉನ್ನತ ಮೂಲಗಳ ಪ್ರಕಾರ ಢಿಕ್ಕಿ ಪರೀಕ್ಷೆಯಲ್ಲಿ ಕಾರುಗಳು ತೇರ್ಗಡೆ ಹೊಂದಲು ವಿಫಲವಾದ್ದಲ್ಲಿ 100 ಕೋಟಿ ರುಪಾಯಿಗಳ ವರೆಗೆ ದಂಡ ತೆರಬೇಕಾಗುತ್ತದೆ.

ಸುರಕ್ಷಾ ನಿಮಯ ಉಲ್ಲಂಘಿಸಿದ್ದಲ್ಲಿ ವಾಹನ ಸಂಸ್ಥೆಗಳಿಗೆ 100 ಕೋಟಿ ದಂಡ

ಅದೇ ಹೊತ್ತಿಗೆ ವಾಹನಗಳಲ್ಲಿ ಅನಧಿಕೃತ ಘಟಕಗಳನ್ನು ಅಥವಾ ಫಾಗ್ ಲೈಟ್, ಪ್ರೆಶರ್ ಹಾರ್ನ್, ಹೆಚ್ಚುವರಿ ಲೈಟ್, ರೂಫ್ ಟಾಪ್, ಮೆಟ್ಯಾಲಿಕ್ ಸುರಕ್ಷಗಳಂತಹದ ನಿರ್ವಹಣೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘನೆ ಮಾಡುವ ಬಳಕೆ ಮಾಡುವ ವ್ಯಕ್ತಿಗಳ ಮೇಲೆ 5000 ರು.ಗಳ ದಂಡವನ್ನು ಹೇರಲಾಗುವುದು.

ಸುರಕ್ಷಾ ನಿಮಯ ಉಲ್ಲಂಘಿಸಿದ್ದಲ್ಲಿ ವಾಹನ ಸಂಸ್ಥೆಗಳಿಗೆ 100 ಕೋಟಿ ದಂಡ

ಇಂತಹ ಪ್ರಕರಣಗಳಲ್ಲಿ ಡೀಲರ್ ಅಥವಾ ಇತರೆ ವಾಹನ ನಿರ್ಮಾಣ ಸಂಸ್ಥೆಗಳ ಮೇಲೂ ಒಂದು ಲಕ್ಷದ ವರೆಗೆ ದಂಡ ವಿಧಿಸಲಾಗುವುದು. ಇದಲ್ಲದೆ ಅನಧಿಕೃತ ಘಟಕಗಳನ್ನು ಮಾರಾಟ ಮಾಡುವ ಡೀಲರ್ ಗಳ ಮೇಲೂ ಒಂದು ಲಕ್ಷದ ದಂಡ ಹೇರಲಾಗುವುದು.

ಸುರಕ್ಷಾ ನಿಮಯ ಉಲ್ಲಂಘಿಸಿದ್ದಲ್ಲಿ ವಾಹನ ಸಂಸ್ಥೆಗಳಿಗೆ 100 ಕೋಟಿ ದಂಡ

ವಾಹನಗಳಲ್ಲಿ ಯಾವುದೇ ದೋಷ ಕಂಡುಬಂದ್ದಲ್ಲಿ ಕಡ್ಡಾಯವಾಗಿ ಕಾರನ್ನು ವಾಪಾಸ್ ಪಡೆಯಬೇಕಾಗುತ್ತದೆ. ಇವೆಲ್ಲವೂ ರಸ್ತೆ ಸುರಕ್ಷತಾ ಮಸೂದೆಯ ಭಾಗವಾಗಿದ್ದು, ಪ್ರಸಕ್ತ ತಿಂಗಳಾಂತ್ಯದಲ್ಲೇ ಅನುಮೋದನೆ ದೊರಕುವ ಸಾಧ್ಯತೆಯಿದೆ.

ಸುರಕ್ಷಾ ನಿಮಯ ಉಲ್ಲಂಘಿಸಿದ್ದಲ್ಲಿ ವಾಹನ ಸಂಸ್ಥೆಗಳಿಗೆ 100 ಕೋಟಿ ದಂಡ

ವರ್ಷಂಪ್ರತಿ 1.5 ಲಕ್ಷಕ್ಕೂ ಹೆಚ್ಚು ಮಂದಿ ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಿರುವ ಹಿನ್ನಲೆಯಲ್ಲಿ ನೂತನ ರಸ್ತೆ ಸುರಕ್ಷತಾ ಮಸೂದೆ ಮುಖಾಂತರ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಇರಾದೆಯನ್ನು ಕೇಂದ್ರ ಸರಕಾರ ಹೊಂದಿದೆ. ಇವೆಲ್ಲವೂ ಅಪಘಾತ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.

ಸುರಕ್ಷಾ ನಿಮಯ ಉಲ್ಲಂಘಿಸಿದ್ದಲ್ಲಿ ವಾಹನ ಸಂಸ್ಥೆಗಳಿಗೆ 100 ಕೋಟಿ ದಂಡ

ಇನ್ನು ಅಮಿತ ವೇಗ, ಪಾನಮತ್ತ ಚಾಲನೆ, ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ, ಸಿಗ್ನಲ್ ಜಂಪ್ ಇತ್ಯಾದಿ ರಸ್ತೆ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದರೂ ಕಠಿಣ ಕ್ರಮ ಜಾರಿಗೊಳಿಸುವಂತೆ ಶಿಫಾರಸು ಮಾಡಿದೆ.

ಸುರಕ್ಷಾ ನಿಮಯ ಉಲ್ಲಂಘಿಸಿದ್ದಲ್ಲಿ ವಾಹನ ಸಂಸ್ಥೆಗಳಿಗೆ 100 ಕೋಟಿ ದಂಡ

ನಕಲಿ ಚಾಲನಾ ಪರವಾನಗಿ ಇಟ್ಟುಕೊಂಡು ಡ್ರೈವಿಂಗ್ ಮಾಡಿದ್ದಲ್ಲಿ ಒಂದು ವರ್ಷದ ವರೆಗೆ ಜೈಲು ಶಿಕ್ಷೆ ಮತ್ತು 10,000 ರು.ಗಳ ವರೆಗೆ ದಂಡ ವಿಧಿಸಲಾಗುವುದು. ಈಗ ಇರುವ ನಿಯಮದಂತೆ ಗರಿಷ್ಠ 500 ರು. ಮತ್ತು ಮೂರು ತಿಂಗಳುಗಳ ಜೈಲುವಾಸವಷ್ಟೇ ವಿಧಿಸಲಾಗುತ್ತದೆ.

ಸುರಕ್ಷಾ ನಿಮಯ ಉಲ್ಲಂಘಿಸಿದ್ದಲ್ಲಿ ವಾಹನ ಸಂಸ್ಥೆಗಳಿಗೆ 100 ಕೋಟಿ ದಂಡ

ಅಪ್ರಾಪ್ತ ವಯಸ್ಕರು ಚಾಲನೆ ಮಾಡಿ ಎಡವಟ್ಟು ಸಂಭವಿಸಿದ್ದಲ್ಲಿ ತಪ್ಪಿತ್ತಸ್ಥ ಬಾಲಕನ ಹೆತ್ತವರ ಮೇಲೆ ಅಥವಾ ವಾಹನ ಮಾಲಿಕನ ಮೇಲೆ ಮೂರು ವರ್ಷಗಳ ಜೈಲುವಾಸ ಹಾಗೂ 20,000 ರು.ಗಳ ದಂಡ ವಿಧಿಸಲು ಶಿಫಾರಸು ಮಾಡಲಾಗಿದೆ.

More from DriveSpark

Article Published On: Wednesday, June 8, 2016, 10:07 [IST]
English summary
Government To Fine Unsafe Automakers Rs. 100 Crores
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+