ಕ್ರೀಡಾ ಪ್ರೇಮಿಗಳ ಮನಸೆಳೆದ ಸ್ಯಾಂಗ್ಯೊಂಗ್ ರೆಕ್ಸ್ಟಾನ್

By Nagaraja

ದಕ್ಷಿಣ ಕೊರಿಯಾ ಮೂಲದ ಮುಂಚೂಣಿಯ ಸಂಸ್ಥೆಯಾಗಿರುವ ಸ್ಯಾಂಗ್ಯೊಂಗ್, 2016 ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಪ್ಯಾರಿಸ್ ಮೋಟಾರು ಶೋದಲ್ಲಿ ನಾಲ್ಕನೇ ತಲೆಮಾರಿನ ರೆಕ್ಸ್ಟಾನ್ ಕ್ರೀಡಾ ಬಳಕೆಯ ವಾಹನವನ್ನು ಅನಾವರಣಗೊಳಿಸಲಿದೆ.

ಈ ನಡುವೆ ನೂತನ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಪರೀಕ್ಷಾರ್ಥ ಚಾಲನೆ ವೇಳೆಯಲ್ಲಿ ಸಂಪೂರ್ಣ ಮರೆಮಾಚಿದ ರೂಪದಲ್ಲಿ ಪತ್ತೆಹಚ್ಚಲಾಗಿದೆ. ಇದು ಆಧುನಿಕತೆಗೆ ತಕ್ಕಂತೆ ಹೊಸ ವಿನ್ಯಾಸವನ್ನು ಮೈಗೂಡಿಸಿ ಬಂದಿದೆ.

ಕ್ರೀಡಾ ಪ್ರೇಮಿಗಳ ಮನಸೆಳೆದ ಸ್ಯಾಂಗ್ಯೊಂಗ್ ರೆಕ್ಸ್ಟಾನ್

ತನ್ನ ಹಿಂದಿನ ಮಾದರಿಗೆ ಹೋಲಿಸಿದಾಗ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಹೊಸತಾದ ಸೆಂಟ್ರಲ್ ಕನ್ಸಾಲ್, ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಪ್ರೀಮಿಯಂ ಹೋದಿಕೆಗೆಳನ್ನು ಪಡೆಯಲಿದೆ.

ಕ್ರೀಡಾ ಪ್ರೇಮಿಗಳ ಮನಸೆಳೆದ ಸ್ಯಾಂಗ್ಯೊಂಗ್ ರೆಕ್ಸ್ಟಾನ್

ಮುಂದಿನ ತಲೆಮಾರಿನ ರೆಕ್ಸ್ಟಾನ್ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ದೊಡ್ಡದಾದ ಟಿಎಫ್ ಟಿ ಸ್ಕ್ರೀನ್ ವೈಶಿಷ್ಟ್ಯವು ಲಭ್ಯವಾಗಲಿದೆ. ಅಲ್ಲದೆ ಹೆಚ್ಚಿನ ಸ್ಥಳಾವಕಾಶವನ್ನು ಕೊಡಲಾಗಿದೆ.

ಕ್ರೀಡಾ ಪ್ರೇಮಿಗಳ ಮನಸೆಳೆದ ಸ್ಯಾಂಗ್ಯೊಂಗ್ ರೆಕ್ಸ್ಟಾನ್

ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸಿಸ್ಟಂ ಮುಂತಾದ ವ್ಯವಸ್ಥೆಗಳೊಂದಿಗೆ ಪರಿಚಯವಾಗಲಿರುವ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಲಗ್ಗೇಜ್ ಇಡಲು ಮೂರನೇ ಸಾಲಿನ ಸೀಟನ್ನು ಮಡಚುವ ವ್ಯವಸ್ಥೆಯನ್ನು ಕೊಡಲಾಗಿದೆ.

ಕ್ರೀಡಾ ಪ್ರೇಮಿಗಳ ಮನಸೆಳೆದ ಸ್ಯಾಂಗ್ಯೊಂಗ್ ರೆಕ್ಸ್ಟಾನ್

ಈಗ ಮಾರಾಟದಲ್ಲಿರುವ ಮಾದರಿಗಿಂತಲೂ 50 ಕೆ.ಜಿ ಗಳಷ್ಟು ಕಡಿಮೆ ಭಾರವನ್ನು ಹೊಂದಿರುವ ನೂತನ ರೆಕ್ಸ್ಟಾನ್ ಹೆಚ್ಚು ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಕ್ರೀಡಾ ಪ್ರೇಮಿಗಳ ಮನಸೆಳೆದ ಸ್ಯಾಂಗ್ಯೊಂಗ್ ರೆಕ್ಸ್ಟಾನ್

ನೂತನ ಸ್ಯಾಂಗ್ಯೊಂಗ್ ರೆಕ್ಸ್ಟಾನ್ 2.2 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 180.46 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಕ್ರೀಡಾ ಪ್ರೇಮಿಗಳ ಮನಸೆಳೆದ ಸ್ಯಾಂಗ್ಯೊಂಗ್ ರೆಕ್ಸ್ಟಾನ್

ಆಲ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಹೊಂದಿರಲಿರುವ ಹೊಸ ರೆಕ್ಸ್ಟಾನ್ ಲೇನ್ ನಿರ್ಗಮನ ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಏರ್ ಬ್ಯಾಗ್ ವ್ಯವಸ್ಥೆಯನ್ನು ಹೊಂದಿರಲಿದೆ.

ಕ್ರೀಡಾ ಪ್ರೇಮಿಗಳ ಮನಸೆಳೆದ ಸ್ಯಾಂಗ್ಯೊಂಗ್ ರೆಕ್ಸ್ಟಾನ್

ಅಂದ ಹಾಗೆ ಮಹೀಂದ್ರ ತೆಕ್ಕೆಯಲ್ಲಿರುವ ನೂತನ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ನಿಕಟ ಭವಿಷ್ಯದಲ್ಲೇ ಭಾರತಕ್ಕೆ ಕಾಲಿಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

More from DriveSpark

Article Published On: Friday, July 22, 2016, 10:15 [IST]
English summary
Spy Pics: 2017 Ssangyong Rexton Spied Testing; Interiors Revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+