ಜಿನೆವಾದಲ್ಲಿ ನರ್ತಿಸಿದ ಸ್ಯಾಂಗ್ಯೊಂಗ್ ಟಿವೊಲಿ ಎಕ್ಸ್‌ಎಲ್‌ವಿ
2016 ಜಿನೆವಾ ಮೋಟಾರು ಶೋದಲ್ಲಿ ದಕ್ಷಿಣ ಕೊರಿಯಾ ಮೂಲದ ಸ್ಯಾಂಗ್ಯೊಂಗ್ ಸಂಸ್ಥೆಯು ಅತಿ ನೂತನ ಟಿವೊಲಿ ಎಕ್ಸ್‌ಎಲ್‌ವಿ ಕ್ರಾಸೋವರ್ ಕಾರನ್ನು ಅನಾವರಣಗೊಳಿಸಿದೆ.
ನಿಮ್ಮ ಮಾಹಿತಿಗಾಗಿ, ದೇಶದ ಎಸ್‌ಯುವಿ ದೈತ್ಯ ಮಹೀಂದ್ರ ಆಂಡ್ ಮಹೀಂದ್ರ ಅಧೀನತೆಯಲ್ಲಿರುವ ಸ್ಯಾಂಗೊಂಗ್, 2016 ಆಟೋ ಎಕ್ಸ್ ಪೋದಲ್ಲೂ ತನ್ನ ಸಾನಿಧ್ಯವನ್ನು ಮೆರೆದಿತ್ತು.

ಸ್ಟ್ಯಾಂಡರ್ಡ್ ಸ್ಯಾಂಗ್ಯೊಂಗ್ ಟಿವೊಲಿ ಕಾರಿಗೆ ಹೋಲಿಸಿದಾಗ ನೂತನ ಎಕ್ಸ್‌ಎಲ್‌ವಿ ಹೆಚ್ಚು ಪ್ರಭಾವಿ ವಿನ್ಯಾಸವನ್ನು ಮೈಗೂಡಿಸಿ ಬಂದಿದೆ. ಅಲ್ಲದೆ 2015 ಫ್ರಾಂಕ್ ಫ್ರ್ಟ್ ಮೋಟಾರ್ ಶೋದಲ್ಲಿ ಪ್ರದರ್ಶಿಸಿದ ಎಕ್ಸ್ ಎಲ್ ವಿ ಏರ್ ಕಾನ್ಸೆಪ್ಟ್ ಗೆ ಸಮಾನವಾಗಿದೆ.

ಟಿವೊಲಿಯ ವರ್ಧಿತ ವರ್ಷನ್ ಆಗಿದ್ದರೂ ಸಹ ಎಕ್ಸ್‌ಎಲ್‌ವಿ, ಸಮಾನ ಚಕ್ರಾಂತರವನ್ನು ಪಡೆದಿದೆ. ಆದರೆ ಕಾರಿನ ಒಟ್ಟಾರೆ ವಿನ್ಯಾಸದಲ್ಲಿ ಬದಲಾವಣೆಗಳನ್ನು ತರಲಾಗಿದೆ.

ಎಕ್ಸ್ ಎಲ್ ವಿ ಕಾರಿನಲ್ಲಿ ಅಮೋಘ 720 ಕ್ಯೂಬಿಕ್ ಲೀಟರ್ ಲಗ್ಗೇಜ್ ಜಾಗವನ್ನು ಕೊಡಲಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ನೂತನ ಟಿವೊಲಿ ಎಕ್ಸ್‌ಎಲ್ ವಿ ಲಭ್ಯವಾಗಲಿದೆ. ಇದರ 1.6 ಲೀಟರ್ ಪೆಟ್ರೋಲ್ ಎಂಜಿನ್ 160 ಎನ್ ಎಂ ತಿರುಗುಬಲದಲ್ಲಿ 126 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅಂತೆಯೇ 1.6 ಲೀಟರ್ ಡೀಸೆಲ್ ಎಂಜಿನ್ 300 ಎನ್ ಎಂ ತಿರುಗುಬಲದಲ್ಲಿ 300 ಎನ್ ಎಂ ತಿರುಗುಬಲದಲ್ಲಿ 113.4 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮೈಲೇಜ್
ಪೆಟ್ರೋಲ್: 13.5km/l
ಡೀಸೆಲ್: 22.2km/

ಫೋರ್ ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯನ್ನು ಹೊಂದಿರುವ ಟಿವೊಲಿ ಎಕ್ಸ್ ಎಲ್ ವಿ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಅಂದ ಹಾಗೆ 2016 ಮೇ ತಿಂಗಳಲ್ಲೇ ನೂತನ ಟಿವೊಲಿ ಎಕ್ಸ್ ಎಲ್ ವಿ ಯುರೋಪ್ ಮಾರುಕಟ್ಟೆಯನ್ನು ತಲುಪಲಿದೆ. ಇನ್ನು ನಿಕಟ ಭವಿಷ್ಯದಲ್ಲಿ ಭಾರತ ತಲುಪುವ ಸಾಧ್ಯತೆ ಕಡಿಮೆಯಾಗಿದೆ.


Click it and Unblock the Notifications








