ಫೋರ್ಡ್ ಮಸ್ಟಾಂಗ್ ಭಾರತಕ್ಕೆ; ನೀವು ತಿಳಿದಿರಬೇಕಾದ 10 ಅಂಶಗಳು!

By Nagaraja

ಇದೀಗ ಎಲ್ಲವೂ ಅಂತಿಮಗೊಂಡಿದ್ದು, ಬಹುನಿರೀಕ್ಷಿತ ಫೋರ್ಡ್ ಮಸ್ಟಾಂಗ್ ಶಕ್ತಿಶಾಲಿ ಮಸಲ್ ಕಾರು ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ. ಇದರಂತೆ ದೆಹಲಿಯಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋಗೂ ಮುಂಚಿತವಾಗಿ ಅಮೆರಿಕದ ಈ ಐಕಾನಿಕ್ ಕಾರು ಭರ್ಜರಿ ಅನಾವರಣ ಕಂಡಿದೆ.

Also Read: ಭಾರತದಲ್ಲಿ ಐಕಾನಿಕ್ ಫೋರ್ಡ್ ಮಸ್ಟಾಂಗ್ ಭರ್ಜರಿ ಅನಾವರಣ

ಪ್ರಸ್ತುತ ಲೇಖನದಲ್ಲಿ ಇಡೀ ದೇಶದ ವಾಹನ ಪ್ರೇಮಿಗಳು ಕಾತರದಿಂದ ಕಾದು ಕುಳಿತಿರುವ ಪೊನಿ ಕಾರು ಎಂದೇ ಜನಪ್ರಿಯತೆ ಸಾಧಿಸಿರುವ ಫೋರ್ಡ್ ಮಸ್ಟಾಂಗ್ ಕಾರಿನ ಬಗ್ಗೆ ಅರಿಯಲು ವಿವರವಾಗಿ ಅರಿಯುವ ಪ್ರಯತ್ನ ಮಾಡಲಿದ್ದೇವೆ.

50 ವರ್ಷಗಳ ಬಳಿಕ ದೇಶಕ್ಕೆ ಎಂಟ್ರಿ

50 ವರ್ಷಗಳ ಬಳಿಕ ದೇಶಕ್ಕೆ ಎಂಟ್ರಿ

ಮೊದಲ ತಲೆಮಾರಿನ ಫೋರ್ಡ್ ಮಸ್ಟಾಂಗ್ ಸರಿ ಸುಮಾರು 50 ವರ್ಷಗಳ ಹಿಂದೆ 1964ನೇ ಇಸವಿಯಲ್ಲಿ ತವರೂರಾದ ಅಮೆರಿಕದಲ್ಲಿ ಜನ್ಮ ತಾಳಿತ್ತು.

ಆರನೇ ತಲೆಮಾರಿನ ಆವೃತ್ತಿ

ಆರನೇ ತಲೆಮಾರಿನ ಆವೃತ್ತಿ

ಪ್ರಸ್ತುತ ಆರನೇ ತಲೆಮಾರಿನ ಫೋರ್ಡ್ ಮಸ್ಟಾಂಗ್ ಆವೃತ್ತಿಯು ಭಾರತಕ್ಕೆ ಕಾಲಿಡುತ್ತಿದೆ. ಇದು ಹೊಸ ವಿನ್ಯಾಸ, ವಿಶ್ವ ದರ್ಜೆಯ ಪವರ್, ನಾವೀನ್ಯ ತಂತ್ರಗಾರಿಕೆ ಮತ್ತು ವಿಶ್ವ ದರ್ಜೆಯ ಹ್ಯಾಂಡ್ಲಿಂಗ್ ನೀಡಲಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಫೋರ್ಡ್ ಮಸ್ಟಾಂಗ್ ಕಾರಿನ ಶಕ್ತಿಶಾಲಿ ಆವೃತ್ತಿಯು ದೇಶಕ್ಕೆ ಎಂಟ್ರಿ ಕೊಡಲಿದೆ.

  • 5.0 ಲೀಟರ್ ವಿ8
  • 420 ಅಶ್ವಶಕ್ತಿ, 529 ಎನ್‌ಎಂ
  • 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್
  • ಬ್ರಿಟನ್ ನಲ್ಲಿ ನಿರ್ಮಾಣ

    ಬ್ರಿಟನ್ ನಲ್ಲಿ ನಿರ್ಮಾಣ

    ಬಲ ಬದಿಯಲ್ಲಿ ಚಾಲನಾ ವ್ಯವಸ್ಥೆ ಹೊಂದಿರುವ ಫೋರ್ಡ್ ಮಸ್ಟಾಂಗ್ ಬ್ರಿಟನ್ ನಲ್ಲಿ ನಿರ್ಮಾಣವಾಗಲಿದ್ದು ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ ಸಿದ್ಧಾಂತದ ಮೂಲಕ ತಲುಪಲಿದೆ.

    ಅಂದಾಜು ಬೆಲೆ

    ಅಂದಾಜು ಬೆಲೆ

    2016ನೇ ಸಾಲಿನ ದ್ವಿತಿಯಾರ್ಧದಲ್ಲಿ ಭಾರತಕ್ಕೆ ಫೋರ್ಡ್ ಮಸ್ಟಾಂಗ್ 50ರಿಂದ 60 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

    ಎಲೆಕ್ಟ್ರಾನಿಕ್ ಲೈನ್ ಲಾಕ್

    ಎಲೆಕ್ಟ್ರಾನಿಕ್ ಲೈನ್ ಲಾಕ್

    ರೇಸ್ ಟ್ರ್ಯಾಂಕ್ ಗಳಿಗೆ ಮಾತ್ರ ಮೀಸಲಾಗಿರುವ ಅತ್ಯಾಧುನಿಕ ಎಲೆಕ್ಟ್ರಾನಿಕ್ ಲೈನ್ ಲಾಕ್ ತಂತ್ರಜ್ಞಾನವೂ ಸಹ ನೂತನ ಫೋರ್ಡ್ ಮಸ್ಟಾಂಗ್ ಕಾರನ್ನು ವಿಶಿಷ್ಟವಾಗಿಸಲಿದೆ.

    ವಿಮಾನದ ರೆಕ್ಕೆ ಸ್ಪೂರ್ತಿ

    ವಿಮಾನದ ರೆಕ್ಕೆ ಸ್ಪೂರ್ತಿ

    ವಿಮಾನದ ರೆಕ್ಕೆಯಿಂದ ಪ್ರೇರಣೆ ಪಡೆದುಕೊಂಡು ನೂತನ ಫೋರ್ಡ್ ಮಸ್ಟಾಂಗ್ ಒಳಮೈ ಥೀಮ್ ರಚಿಸಲಾಗಿದೆ.

    ನಾಲ್ಕು ಚಾಲನಾ ವಿಧಗಳು

    ನಾಲ್ಕು ಚಾಲನಾ ವಿಧಗಳು

    ನಾರ್ಮಲ್, ಸ್ಪೋರ್ಟ್ ಪ್ಲಸ್, ಟ್ರ್ಯಾಕ್ ಮತ್ತು ವೆಟ್. ಇದಲ್ಲದೆ ಚಾಲಕರಿಗೆ ಬೇಕಾದಂತೆ ಹೊಂದಾಣಿಸಬಹುದಾದ (customizable) ಚಾಲನಾ ವಿಧಗಳು ಹೊಸತನಕ್ಕೆ ಕಾರಣವಾಗಲಿದೆ.

    ವಿಶಿಷ್ಟತೆ

    ವಿಶಿಷ್ಟತೆ

    ಎಚ್‌ಐಡಿ ಹೆಡ್ ಲ್ಯಾಂಪ್ ಯುನಿಟ್ ಜೊತೆ ಎಲ್‌ಇಡಿ, ಎಲ್‌ಇಡಿ ಟೈಲ್ ಲ್ಯಾಂಪ್, ಡ್ಯುಯಲ್ ಜೋನ್ ಎಚ್‌ವಿಎಸಿ ಸಿಸ್ಟಂ, ಲಾಂಚ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾಹಿತಿ ವ್ಯವಸ್ಥೆ (ಬಿಎಲ್‌ಐಎಸ್), ಕ್ರಾಸ್ ಟ್ರಾಫಿಕ್ ಅಲರ್ಟ್, ಅಡಾಪ್ಟಿಪ್ ಕ್ರೂಸ್ ಕಂಟ್ರೋಲ್, ಡ್ರೈವ್ ಮೋಡ್ ಸೆಲೆಕ್ಟರ್, ರೈನ್ ಸೆನ್ಸಿಂಗ್ ವೈಪರ್, ಡ್ಯುಯಲ್ ಫ್ರಂಟ್ ಮತ್ತು ಕರ್ಟೈನ್ ಮತ್ತು ಮೊಣಕಾಲಿನ ಏರ್ ಬ್ಯಾಗ್ ಸೇವೆಗಳು ಇರಲಿದೆ.

    ವಿಶಿಷ್ಟತೆ

    ವಿಶಿಷ್ಟತೆ

    ಪ್ರಶಸ್ತಿ ವಿಜೇತ ಫೋರ್ಡ್‌ನ ಸಿಂಕ್ 2 (SYNC) ಕನೆಕ್ಟಿವಿಟಿ ನೆರವಿನಿಂದ ಚಾಲನೆ ವೇಳೆಯಲ್ಲೇ ಮನರಂಜನಾ ವ್ಯವಸ್ಥೆ, ವಾಯ್ಸ್ ಕಮಾಂಡ್ ನಿಯಂತ್ರಿಸಲು ಸಾಧ್ಯವಾಗಲಿದೆ. ಇದಲ್ಲದೆ ಎಮರ್ಜನ್ಸಿ ಅಸಿಸ್ಟನ್ಸ್, ನೇವಿಗೇಷನ್, ಪುಶ್ ಬಟನ್ ಸ್ಟ್ಯಾರ್ಟ್, ಪ್ಯಾಸಿವ್ ಎಂಟ್ರಿ, ಪವರ್ ಫೋಲ್ಡಿಂಗ್ ಮಿರರ್, ರಿಯರ್ ಕ್ಯಾಮೆರಾ ಲಭ್ಯವಾಗಲಿದೆ.

    ಇವನ್ನೂ ಓದಿ

    01. ಫೋರ್ಡ್ ಫಿಗೊ: ಮೊದಲ ಚಾಲನಾ ವಿಮರ್ಶೆ; ಸ್ವಿಫ್ಟ್ ಗಡಗಡ!

    02. ನಿಮ್ಮ ಅಭಿಲಾಷೆಗೆ ತಕ್ಕ ಕಾರು: ಫೋರ್ಡ್ ಫಿಗೊ ಆಸ್ಪೈರ್ ಸಮಗ್ರ ವಿಮರ್ಶೆ

More from DriveSpark

Article Published On: Friday, January 29, 2016, 9:28 [IST]
English summary
All you want to know about New Ford Mustang
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+